ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (25-11-2023)
ನಿತ್ಯ ನೀತಿ :ಒಳ್ಳೆಯ ಕೆಲಸಗಳಿಗೆ ಒಳ್ಳೆಯ ಫಲ. ಕೆಟ್ಟ ಕೆಲಸಗಳಿಗೆ ಕೆಟ್ಟ ಫಲ ಕಟ್ಟಿಟ್ಟದ್ದು. ಬೀಜದಂತೆ ಫಲ, ವೃಕ್ಷಗಳು ಬೆಳೆಯುವುವು. ಪ್ರೇಮದ ಫಲ ಸರ್ವರನ್ನು ಅಪ್ಪಿಕೊಳ್ಳುವುದು.
ಪಂಚಾಂಗ ಶನಿವಾರ 25-11-2023ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಕಾರ್ತಿಕ ಮಾಸ / ಶುಕ್ಲ ಪಕ್ಷ / ತಿಥಿ: ತ್ರಯೋದಶಿ / ನಕ್ಷತ್ರ: ಅಶ್ವಿನಿ / ಯೋಗ: ವರೀಯಾನ್ / ಕರಣ: ಗರಜೆ
ಸೂರ್ಯೋದಯ : ಬೆ.06.23ಸೂರ್ಯಾಸ್ತ : 05.50ರಾಹುಕಾಲ : 9.00-10.30ಯಮಗಂಡ ಕಾಲ : 1.30-3.00ಗುಳಿಕ ಕಾಲ : 6.00-7.30
ರಾಶಿ ಭವಿಷ್ಯಮೇಷ: ಲೇವಾದೇವಿ ವ್ಯವಹಾರವನ್ನು ಆಲೋಚನೆ ಮಾಡಿ ಮುಂದುವರೆಸುವುದು ಒಳಿತು.ವೃಷಭ: ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳ ದಿರುವುದರಿಂದ ಸ್ನೇಹಿತರು ಕೋಪಗೊಳ್ಳಬಹುದು.ಮಿಥುನ: ನೂತನ ಯೋಜನೆ ಪ್ರಾರಂಭಿಸಲು ಹಣಕಾಸಿನ ಕೊರತೆ ಇರುವುದಿಲ್ಲ.
ಕಟಕ: ಧೈರ್ಯ ಹೆಚ್ಚಾಗಿರುತ್ತದೆ. ಕಡಿಮೆ ಶ್ರಮದಲ್ಲಿ ಉತ್ತಮ ಲಾಭ ಪಡೆಯಬಹುದು.ಸಿಂಹ: ಆಪತ್ಕಾಲದಲ್ಲಿ ಮಿತ್ರರಿಂದ ಸಹಾಯ ದೊರೆಯಲಿದೆ.ಕನ್ಯಾ: ಯಂತ್ರೋಪಕಣ ಗಳನ್ನು ದುರಸ್ತಿ ಮಾಡುವ ವರಿಗೆ ಹೆಚ್ಚು ಕೆಲಸ ದೊರೆತು ಆದಾಯ ಸಿಗಲಿದೆ.
ತುಲಾ: ದುಷ್ಟ ಜನರ ಸಹವಾಸದಿಂದ ದೂರವಿರುವುದು ಒಳಿತು.ವೃಶ್ಚಿಕ: ಆರ್ಥಿಕ ಏರುಪೇರಿನಿಂದಾಗಿ ಕುಟುಂಬದಲ್ಲಿ ಅಹಿತಕರ ವಾತಾವರಣ ಉಂಟಾಗಲಿದೆ.ಧನುಸ್ಸು: ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ.
ಮಕರ: ಕೆಲಸ-ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತವೆ. ಮನೆ ಸಮಸ್ಯೆಗಳ ಬಗ್ಗೆ ಗಮನ ಕೊಡಿ.ಕುಂಭ: ಉದ್ಯಮಿಗಳು ಹೊಸ ಶಾಖೆ ತೆರೆಯಲು ಬೇಕಾದ ಅನುಕೂಲಗಳು ಒದಗುತ್ತವೆ.ಮೀನ: ಉನ್ನತ ಸ್ಥಾನಮಾನ ದೊರೆಯಲಿದೆ. ನಿಮ್ಮ ಕನಸು ನನಸಾಗಲಿದೆ.