ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-11-2023)
ನಿತ್ಯ ನೀತಿ: ಮುಳುಗುವ ಸೂರ್ಯನನ್ನು ಕಂಡಾಗ, ಆರುವ ದೀಪ ನೋಡಿದಾಗ ಬದುಕಿನ ನಶ್ವರತೆಯ ದರ್ಶನವಾಗುತ್ತದೆ.
ಪಂಚಾಂಗ ಭಾನುವಾರ 26-11-2023ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಕಾರ್ತಿಕ ಮಾಸ / ಶುಕ್ಲ ಪಕ್ಷ / ತಿಥಿ: ಚತುರ್ದಶಿ / ನಕ್ಷತ್ರ: ಭರಣಿ / ಯೋಗ: ಪರಿಘ / ಕರಣ: ವಿಷ್ಟಿ
ಸೂರ್ಯೋದಯ : ಬೆ.06.23ಸೂರ್ಯಾಸ್ತ : 05.50ರಾಹುಕಾಲ : 4.30-6.00ಯಮಗಂಡ ಕಾಲ : 12.00-1.30ಗುಳಿಕ ಕಾಲ : 3.00-4.30
ರಾಶಿ ಭವಿಷ್ಯಮೇಷ: ಹಿರಿಯ ಅಧಿಕಾರಿಗಳು, ಕುಟುಂಬದವರು ನಿಮ್ಮ ವ್ಯಕ್ತಿತ್ವವನ್ನು ಪ್ರಶಂಸಿಸುವರು.ವೃಷಭ: ಮನೆಯ ಜವಾಬ್ದಾರಿಗಳನ್ನು ಅರ್ಥ ಮಾಡಿಕೊಂಡು ಅವುಗಳನ್ನು ನಿಭಾಯಿಸಬೇಕು.ಮಿಥುನ: ಅಧಿಕಾರಿಗಳೊಂದಿಗಿನ ವೈಮನಸ್ಯ ದೂರ ಮಾಡಿಕೊಂಡರೆ ವೃತ್ತಿಪರ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಸಾಧಿಸಲು ಅನುಕೂಲವಾಗಿರುತ್ತದೆ.
ಕಟಕ: ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಹೆಚ್ಚು ಜಾಗ್ರತೆ ವಹಿಸುವುದು ಸೂಕ್ತ.ಸಿಂಹ: ಕೆಲಸ-ಕಾರ್ಯಗಳು ಸಂಪೂರ್ಣವಾಗಿ ಕಾರ್ಯಗತ ಗೊಳ್ಳಬಹುದು ಮತ್ತು ಅವು ನಿಮಗೆ ಅನುಕೂಲಕರ ಫಲಿತಾಂಶ ತಂದು ಕೊಡಲಿವೆ.ಕನ್ಯಾ: ಅಣ್ಣ-ತಮ್ಮಂದಿರು ನಿಮ್ಮ ವ್ಯವಹಾರಗಳಿಗೆ ಸಾಕಷ್ಟು ಸಹಾಯ ಮಾಡುವರು.
ತುಲಾ: ನಿಮ್ಮ ಶ್ರಮ ಮತ್ತು ಅದೃಷ್ಟವು ಎಲ್ಲಾ ರೀತಿಯಲ್ಲೂ ಬೆಂಬಲ ನೀಡುತ್ತದೆ.ವೃಶ್ಚಿಕ: ಹೊಸ ಜನರನ್ನು ಭೇಟಿ ಮಾಡುವುದರಿಂದ ಹಲವಾರು ಪ್ರಯೋಜನವಾಗಲಿವೆ.ಧನುಸ್ಸು: ವ್ಯವಹಾರದಲ್ಲಿ ಹೂಡಿಕೆ ಮಾಡುವ ಮುನ್ನ ನಾಲ್ಕು ಬಾರಿ ಆಲೋಚಿಸುವುದು ಸೂಕ್ತ.
ಮಕರ: ಕಾರ್ಯಸಾಧನೆಗಾಗಿ ಪ್ರಯಾಣ ಮಾಡಬೇಕಾಗಬಹುದು. ಅಧಿಕ ಖರ್ಚಾಗಲಿದೆ.ಕುಂಭ: ಆಸ್ತಿ, ಅಪಾರ್ಟ್ ಮೆಂಟ್ ಖರೀದಿಯಲ್ಲಿ ಅಧಿಕ ಹಣ ಹೂಡಿಕೆ ಮಾಡುವಿರಿ.ಮೀನ: ಯಾವುದೇ ಕಾರ್ಯ ಕೈಗೊಂಡರೂ ಹೆಜ್ಜೆ ಹೆಜ್ಜೆಗೂ ಅಡೆತಡೆ ಎದುರಾಗಲಿದೆ.