ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (30-11-2023)
ನಿತ್ಯ ನೀತಿ :ವ್ಯಕ್ತಿ ಪ್ರಯತ್ನದ ದಾರಿಯಲ್ಲಿ ಹೆಜ್ಜೆ ಹಾಕಿದರೆ ಪರಮಾತ್ಮ ಸಫಲತೆಯ ರೂಪದಲ್ಲಿ ಅವನನ್ನು ಸಂಸಿ ಅನುಗ್ರಹಿಸುತ್ತಾನೆ.
ಪಂಚಾಂಗ : ಗುರುವಾರ, 30-11-2023ಶೋಭಕೃತ್ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಕಾರ್ತಿಕ ಮಾಸ / ಕೃಷ್ಣ ಪಕ್ಷ / ತಿಥಿ: ತೃತೀಯಾ / ನಕ್ಷತ್ರ: ಆರಿದ್ರಾ / ಯೋಗ: ಶುಭ / ಕರಣ: ಭವ
ಸೂರ್ಯೋದಯ : ಬೆ.06.25ಸೂರ್ಯಾಸ್ತ : 05.51ರಾಹುಕಾಲ : 1.30-3.00ಯಮಗಂಡ ಕಾಲ : 6.00-7.30ಗುಳಿಕ ಕಾಲ : 9.00-10.30
ಇಂದಿನ ರಾಶಿಭವಿಷ್ಯ :ಮೇಷ: ಹೊಸ ವ್ಯಕ್ತಿಗಳ ಪರಿಚಯವಾಗಲಿದೆ. ಸ್ನೇಹಿತರಿಗೆ ಸಹಾಯ ಮಾಡುವಿರಿ.ವೃಷಭ: ನೀವು ಮಾಡುವ ಕೆಲಸಗಳಿಗೆ ಸೋದರ ಸಂಬಂಗಳೇ ತೊಡಕು ಉಂಟುಮಾಡಬಹುದು.ಮಿಥುನ: ಅಭಿವೃದ್ಧಿಯಲ್ಲಿ ಹಲವು ಅಡೆತಡೆಗಳು ಎದುರಾಗಲಿವೆ. ಆಯಾಸ ಹೆಚ್ಚಾಗಲಿದೆ.
ಕಟಕ: ಹಣಕಾಸಿನ ಪರಿಸ್ಥಿತಿ ಬಹಳ ಉತ್ತಮ ವಾಗಿರುತ್ತದೆ. ಕೆಲಸ- ಕಾರ್ಯಗಳಲ್ಲಿ ಸೋಲು ಅನುಭವಿಸಬೇಕಾಗುತ್ತದೆ.ಸಿಂಹ: ಅಕ ಆತ್ಮವಿಶ್ವಾಸ ದಿಂದ ಸಾಮಥ್ರ್ಯಕ್ಕಿಂತ ಹೆಚ್ಚು ಕೆಲಸ ಮಾಡುವಿರಿ.ಕನ್ಯಾ:ಅನಗತ್ಯ ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕುವುದರಿಂದ ಆರ್ಥಿಕ ಸಂಕಷ್ಟ ಕಡಿಮೆಯಾಗಲಿದೆ.
ತುಲಾ: ಅಮೂಲ್ಯ ವಸ್ತುಗಳ ಖರೀದಿಗೆ ಇಂದು ಉತ್ತಮವಾದ ದಿನ.ವೃಶ್ಚಿಕ: ವ್ಯಾಪಾರದಲ್ಲಿ ಲಾಭವಿದೆ. ಅಪರಿಚಿತ ರೊಂದಿಗೆ ಹೆಚ್ಚು ಸಮಯ ಕಳೆಯದಿರಿ.ಧನುಸ್ಸು: ಕುಟುಂಬದವರೊಂದಿಗೆ ಸಾಕಷ್ಟು ಸಮಯ ಕಳೆಯಲು ಬಯಸುವಿರಿ.
ಮಕರ: ಪಿತ್ರಾರ್ಜಿತ ಆಸ್ತಿ ವಿವಾದ ತಾರಕಕ್ಕೇರಲಿದೆ. ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ.ಕುಂಭ: ಯಾವುದೇ ಕಾರ್ಯ ಕೈಗೊಂಡರೂ ಹೆಜ್ಜೆ ಹೆಜ್ಜೆಗೂ ಅಡೆತಡೆ ಎದುರಾಗಲಿದೆ.ಮೀನ: ಅದೃಷ್ಟ ನಿಮ್ಮೆಡೆಗಿದ್ದರೂ ಎಲ್ಲ ಕಾರ್ಯಗಳನ್ನೂ ಎಚ್ಚರಿಕೆಯಿಂದ ನಿರ್ವಹಿಸಿ.