ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (22-11-2023)
ನಿತ್ಯ ನೀತಿ :ಯಾವ ವ್ಯಕ್ತಿಯಲ್ಲಿ ಆಶೋತ್ತರ ಭಾವನೆಗಳು ಅಧಿಕವಾಗಿರುವುದೋ ಅವನು ಕಾಲ ಮೃತ್ಯುವಿಗೆ ಹೆದರುವುದು ಸಹಜ.
ಪಂಚಾಂಗ ಬುಧವಾರ 22-11-2023ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಕಾರ್ತಿಕ ಮಾಸ / ಶುಕ್ಲ ಪಕ್ಷ / ತಿಥಿ: ದಶಮಿ / ನಕ್ಷತ್ರ: ಪೂರ್ವಾಭಾದ್ರ / ಯೋಗ: ಹರ್ಷಣ / ಕರಣ: ತೈತಿಲ
ಸೂರ್ಯೋದಯ : ಬೆ.06.21ಸೂರ್ಯಾಸ್ತ : 05.50ರಾಹುಕಾಲ : 12.00-1.30ಯಮಗಂಡ ಕಾಲ : 7.30-9.00ಗುಳಿಕ ಕಾಲ : 10.30-12.00
ರಾಶಿ ಭವಿಷ್ಯಮೇಷ: ತಾಯಿಗೆ ಆರೋಗ್ಯ ಸಮಸ್ಯೆಯಿಂದಾಗಿ ಸ್ವಲ್ಪ ತೊಂದರೆ ಅನುಭವಿಸಬೇಕಾಗುತ್ತದೆ.ವೃಷಭ: ರಿಯಲ್ ಎಸ್ಟೇಟ್‍ಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಉತ್ತಮ ಲಾಭ ಸಿಗಲಿದೆ.ಮಿಥುನ: ಮನೆಯ ಎಲ್ಲ ಸದಸ್ಯರೊಂದಿಗೆ ಸಂಯಮದಿಂದ ಕಾಲ ಕಳೆಯಲು ಪ್ರಯತ್ನಿಸುವಿರಿ.
ಕಟಕ: ಕಠಿಣ ಪರಿಶ್ರಮ ದಿಂದ ಮಾತ್ರ ನಿಮ್ಮ ಕೆಲಸದಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತದೆ.ಸಿಂಹ: ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಬಹಳ ಒಳ್ಳೆಯದು.ಕನ್ಯಾ: ವಿದ್ಯಾರ್ಥಿಗಳು ಏಕಾಗ್ರತೆ ಕಾಯ್ದುಕೊಳ್ಳಲು ಹೆಚ್ಚು ಶ್ರಮ ಪಡಬೇಕಾಗುತ್ತದೆ.
ತುಲಾ: ಹಿರಿಯರ ಸಕಾಲಿಕ ನೆರವಿನಿಂದ ಎದುರಾಗ ಬಹುದಾದ ವಿಪತ್ತುಗಳು ದೂರವಾಗಲಿವೆ.ವೃಶ್ಚಿಕ: ಹಿಂದೆ ಹೂಡಿಕೆ ಮಾಡಿದ್ದ ಹಣದಿಂದ ಲಾಭ ಬರವ ನಿರೀಕ್ಷೆಯಿದೆ.ಧನುಸ್ಸು: ನೀವು ಮಾಡುವ ಕೆಲಸಗಳಿಂದ ಸಮಾಜ ದಲ್ಲಿ ಉತ್ತಮ ಸ್ಥಾನಮಾನ ದೊರೆಯಲಿದೆ.
ಮಕರ: ನಿಮ್ಮ ಶಕ್ತಿ-ಸಾಮಥ್ರ್ಯವನ್ನು ನೋಡಿ ಶತ್ರುಗಳು ದೂರ ಉಳಿಯುತ್ತಾರೆ.ಕುಂಭ: ಬೇರೆಯವರು ನಿಮ್ಮೊಂದಿಗೆ ಗೆಳೆತನ ಬೆಳೆಸಲು ಬಯಸುತ್ತಾರೆ. ಜಾಗ್ರತೆ ವಹಿಸಿ.ಮೀನ: ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳುವಿರಿ.   ಸಿಲುಕಿಕೊಂಡಿದ್ದ ಹಣ ಕೈ ಸೇರಲಿದೆ.