ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-11-2023)
ನಿತ್ಯ ನೀತಿ :ಕೆಲವು ಸಮಸ್ಯೆಯೆಗಳಿಗೆ ತಕ್ಷಣ ಪರಿಹಾರ ಹುಡುಕಬೇಕು. ಇನ್ನೂ ಕೆಲವಕ್ಕೆ ಕಾದರೆ ಸಾಕು, ಪರಿಹಾರ ಸಿಗುತ್ತದೆ. ಆದರೆ ಯಾವುದಕ್ಕೆ ಏನು ಎಂದರಿಯುವುದಕ್ಕೆ ಮಾತ್ರ ವಿವೇಕ ಬೇಕು.
ಪಂಚಾಂಗ ಶುಕ್ರವಾರ 24-11-2023ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಕಾರ್ತಿಕ ಮಾಸ / ಶುಕ್ಲ ಪಕ್ಷ / ತಿಥಿ: ದ್ವಾದಶಿ / ನಕ್ಷತ್ರ: ರೇವತಿ / ಯೋಗ: ಸಿದ್ಧಿ-ವ್ಯತೀಪಾತ / ಕರಣ: ಬವ-ಬಾಲವ
ಸೂರ್ಯೋದಯ : ಬೆ.06.22ಸೂರ್ಯಾಸ್ತ : 05.50ರಾಹುಕಾಲ : 10.30-12.00ಯಮಗಂಡ ಕಾಲ : 3.00-4.30ಗುಳಿಕ ಕಾಲ : 7.30-9.00
ರಾಶಿ ಭವಿಷ್ಯಮೇಷ: ಕಠಿಣ ಪರಿಶ್ರಮ ದಿಂದ ಕಷ್ಟಕರ ಕೆಲಸಗಳನ್ನು ಸುಲಭವಾಗಿ ಪೂರ್ಣಗೊಳಿಸಲಾಗುತ್ತದೆ.ವೃಷಭ: ಸಂಗಾತಿಯೊಂದಿಗೆ ಕೆಲವು ಭಿನ್ನಾಭಿಪ್ರಾಯ ಗಳು ಉಂಟಾಗಬಹುದು.ಮಿಥುನ: ಉದ್ಯೋಗದಲ್ಲಿ ಉತ್ತಮ ಹಣದ ಲಾಭವಿದೆ ಮತ್ತು ಬಡ್ತಿಯ ಸೂಚನೆಗಳಿವೆ.
ಕಟಕ: ಉದ್ಯೋಗಕ್ಕಾಗಿ ನಡೆಸಿದ ತೀವ್ರ ಪ್ರಯತ್ನ ಇಂದು ಶುಭ ಫಲ ನೀಡಲಿದೆ.ಸಿಂಹ: ವಿದ್ಯಾರ್ಥಿಗಳು ಅಭ್ಯಾಸದತ್ತ ಗಮನ ಹರಿಸುವುದು ಒಳಿತು.ಕನ್ಯಾ: ಪಾಲುದಾರಿಕೆ ವಿಚಾರ ದಲ್ಲಿ ಪ್ರಮುಖ ನಿರ್ಧಾರ ಕೈಗೊಳ್ಳುವ ಮುನ್ನ ಯೋಚಿಸಿ.
ತುಲಾ: ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಪೋಷಕರ ಆಶೀರ್ವಾದ ಪಡೆಯಿರಿ.ವೃಶ್ಚಿಕ: ವ್ಯಾಪಾರಸ್ಥರಿಗೆ ಶುಭಕರ ದಿನವಾಗಿದೆ. ಯಾವುದೇ ರೀತಿಯ ವಿವಾದಗಳಿಂದ ದೂರವಿರಿ.ಧನುಸ್ಸು: ಕಾರ್ಯಕ್ಷೇತ್ರದಲ್ಲಿ ಶಾಂತರೀತಿಯಲ್ಲಿ ವ್ಯವಹರಿಸಿದರೆ ಬಹಳ ಒಳಿತು.
ಮಕರ:ಲೆಕ್ಕಪರಿಶೋಧಕರಿಗೆ ಅನಿರೀಕ್ಷಿತ ಸಮಸ್ಯೆಗಳು ತಲೆದೋರಬಹುದು.ಕುಂಭ: ದಿನನಿತ್ಯ ನಡೆಯುವ ಸಣ್ಣಪುಟ್ಟ ಕಲಹ ಗಳಿಂದಾಗಿ ಮನಸ್ಸಿನ ನೆಮ್ಮದಿ ಕಳೆದುಕೊಳ್ಳುವಿರಿ.ಮೀನ: ಮಾನಸಿಕ ಒತ್ತಡ ಹೆಚ್ಚಾಗುವುದು. ಕೆಲಸ-ಕಾರ್ಯಗಳನ್ನು ಆದಷ್ಟು ಬೇಗ ಮುಗಿಸಿ.