ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (08-12-2023)
ನಿತ್ಯ ನೀತಿ :ಮಾತು, ಮನಸ್ಸು ಮತ್ತು ನಡೆಗಳು ಮನುಷ್ಯನನ್ನು ಸಜ್ಜನನ್ನಾಗಿಸುತ್ತವೆ. ದಾರಿ ತಪ್ಪಿದರೆ ಅಧಮನನ್ನಾಗಿಸುತ್ತವೆ.
ಪಂಚಾಂಗ ಶುಕ್ರವಾರ 08-12-2023ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಕಾರ್ತಿಕ ಮಾಸ / ಕೃಷ್ಣ ಪಕ್ಷ / ತಿಥಿ: ಏಕಾದಶಿ / ನಕ್ಷತ್ರ: ಹಸ್ತ / ಯೋಗ: ಸೌಭಾಗ್ಯ / ಕರಣ: ಭವ
ಸೂರ್ಯೋದಯ : ಬೆ.06.30ಸೂರ್ಯಾಸ್ತ : 05.53ರಾಹುಕಾಲ : 10.30-12.00ಯಮಗಂಡ ಕಾಲ : 3.00-4.30ಗುಳಿಕ ಕಾಲ : 7.30-9.00
ರಾಶಿ ಭವಿಷ್ಯಮೇಷ: ವಿದ್ಯಾರ್ಥಿಗಳು ಏಕಾಗ್ರತೆ ಕಾಯ್ದುಕೊಳ್ಳಲು ಹೆಚ್ಚು ಶ್ರಮ ಪಡಬೇಕಾಗುತ್ತದೆ.ವೃಷಭ: ಸ್ವಲ್ಪ ಪ್ರಯತ್ನದಿಂದ ಅಥವಾ ಶ್ರಮವಿಲ್ಲದೆ ಹಣ ದೊರೆಯುವ ಸಾಧ್ಯತೆಗಳಿವೆ.ಮಿಥುನ: ಅತಿಯಾದ ಒಳ್ಳೆಯತನ, ಬೇಜವಾಬ್ದಾರಿ ತನದಿಂದಾಗಿ ಸಂಕಷ್ಟಕ್ಕೆ ಸಿಲುಕುವಿರಿ.
ಕಟಕ: ನಿಮಗೆ ತಿಳಿದ ಜನರ ಮೂಲಕ ಆದಾಯದ ಹೊಸ ಮೂಲಗಳು ಕಂಡುಬರುತ್ತವೆ.ಸಿಂಹ: ವೃತ್ತಿ ಜೀವನದಲ್ಲಿ ಶತ್ರುಗಳಿಂದ ದೂರವಿರಬೇಕಾಗುತ್ತದೆ.ಕನ್ಯಾ: ಕೆಲಸದ ಹೊರೆ ಹೆಚ್ಚಿದ್ದರೆ, ಭಯಪಡುವ ಬದಲು ಕಷ್ಟಪಟ್ಟು ಕೆಲಸ ಮಾಡುವುದು ಸೂಕ್ತ.
ತುಲಾ: ಸಂಗಾತಿಯ ಒರಟು ವರ್ತನೆ ನಿಮ್ಮ ಮೇಲೆ ಒತ್ತಡ ಹಾಕಬಹುದು.ವೃಶ್ಚಿಕ: ಹಿಂದೆ ಹೂಡಿಕೆ ಮಾಡಿದ್ದ ಹಣದಿಂದ ಲಾಭ ಬರುವ ನಿರೀಕ್ಷೆಯಿದೆಧನುಸ್ಸು: ದಂಪತಿ ಮಧ್ಯೆ ಸಣ್ಣ- ಪುಟ್ಟ ವಿಚಾರ ಗಳಿಗೆ ಭಿನ್ನಾಭಿಪ್ರಾಯ ಎದುರಾಗಬಹುದು.
ಮಕರ: ಹಲವು ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ. ಸಾಲಗಾರರ ಒತ್ತಡ ಹೆಚ್ಚಾಗಲಿದೆ.ಕುಂಭ: ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಬಹಳ ಒಳ್ಳೆಯದು.ಮೀನ: ನಿಮ್ಮ ಶಕ್ತಿ-ಸಾಮಥ್ರ್ಯವನ್ನು ನೋಡಿ ಶತ್ರುಗಳು ದೂರ ಉಳಿಯುತ್ತಾರೆ.