ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (11-12-2023)
ನಿತ್ಯ ನೀತಿ :ಸಮಯ ಮತ್ತು ನಗು ಇವೆರಡೂ ಜೀವನದ ವಿಚಿತ್ರಗಳು. ಕೆಲವೊಮ್ಮೆ ಸಮಯವು ನಮಗೆ ನಗುವುದನ್ನೇ ಮರೆಸಿಬಿಡುತ್ತದೆ. ಮತ್ತೊಮ್ಮೆ ನಗು ನಮಗೆ ಸಮಯವನ್ನೇ ಮರೆಸಿಬಿಡುತ್ತದೆ.
ಪಂಚಾಂಗ ಸೋಮವಾರ 11-12-2023ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಕಾರ್ತಿಕ ಮಾಸ / ಕೃಷ್ಣ ಪಕ್ಷ / ತಿಥಿ: ತ್ರಯೋದಶಿ / ನಕ್ಷತ್ರ: ವಿಶಾಖ / ಯೋಗ: ಸುಕರ್ಮಾ / ಕರಣ: ವಿಷ್ಟಿ
ಸೂರ್ಯೋದಯ : ಬೆ.06.31ಸೂರ್ಯಾಸ್ತ : 05.54ರಾಹುಕಾಲ : 7.30-9.00ಯಮಗಂಡ ಕಾಲ : 10.30-12.00ಗುಳಿಕ ಕಾಲ : 1.30-3.00
ರಾಶಿ ಭವಿಷ್ಯಮೇಷ: ಬ್ಯಾಂಕ್ ನೌಕರರಿಗೆ ಕೆಲಸದ ಒತ್ತಡ ಹೆಚ್ಚಾಗಿರುತ್ತದೆ. ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸದಿರಿ.ವೃಷಭ: ಕೆಲಸದ ಒತ್ತಡ ಕಡಿಮೆಯಾಗುವುದರಲ್ಲದೆ ಸರಾಗವಾಗಿ ಮುಗಿಯಲಿದೆ.ಮಿಥುನ: ನಿಮ್ಮ ಪ್ರತಿಭೆ ಗುರುತಿಸಿಲ್ಲ ಎಂಬ ನೋವು ನಿಮ್ಮಿಂದ ದೂರಾಗಲಿದೆ.
ಕಟಕ: ತಂತ್ರಜ್ಞರು ಮತ್ತು ಕುಶಲ ಕರ್ಮಿಗಳ ಬೇಡಿಕೆಗಳು ಹೆಚ್ಚಾಗಲಿವೆ. ದೂರ ಪ್ರಯಾಣ ಬೇಡ.ಸಿಂಹ: ಅಭಿವೃದ್ಧಿಗೆ ಪೂರಕವಾದ ಹೊಸ ಅವಕಾಶಗಳು ಸಿಗಲಿವೆ.ಕನ್ಯಾ: ಉನ್ನತ ಅಧಿಕಾರಿ ಭೇಟಿಗಾಗಿ ದಿನವಿಡೀ ಓಡಾಡಬೇಕಾಗುತ್ತದೆ.
ತುಲಾ: ನೀವು ಕಂಡ ಕನಸುಗಳಿಗೆ ಹಿರಿಯರು, ಹಿತೈಷಿಗಳ ಬೆಂಬಲ ಸಿಗಲಿದೆ.ವೃಶ್ಚಿಕ: ನಕಾರಾತ್ಮಕವಾಗಿ ಮಾತನಾಡುವ ಜನರಿಂದ ದೂರವಿರುವುದು ಬಹಳ ಒಳ್ಳೆಯದು.ಧನುಸ್ಸು: ಯಾರದ್ದೋ ಮಾತು ಕೇಳಿ ನಿಮ್ಮ ಅಮೂಲ್ಯ ಸಮಯ ಹಾಳುಮಾಡಿಕೊಳ್ಳದಿರಿ.
ಮಕರ: ಮಕ್ಕಳಿಂದ ಸಂತೋಷ ಉಂಟಾಗುವುದು. ಆರೋಗ್ಯದ ಕಡೆ ಗಮನ ಹರಿಸಿ.ಕುಂಭ: ಪ್ರಯತ್ನಗಳು ಫಲ ನೀಡುವ ಸಾಧ್ಯತೆಗಳಿವೆ. ಪ್ರಮುಖ ನಿರ್ಧಾರ ಕೈಗೊಳ್ಳಲು ಉತ್ತಮ ಸಮಯ.ಮೀನ: ಕಣ್ಣಿನ ದೃಷ್ಟಿಯಲ್ಲಿ ಬದಲಾವಣೆ ಯಾಗುವುದರಿಂದ ವೈದ್ಯರನ್ನು ಭೇಟಿ ಮಾಡಿ.