ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(12-12-2023)
ನಿತ್ಯ ನೀತಿ :ಎಲ್ಲರನ್ನೂ ಪ್ರೀತಿಯಿಂದ ನೋಡಬೇಕು. ಆಗ ಅವನು ವಿಶ್ವಮಾ ನವನಾಗುತ್ತಾನೆ. ಭಗವಂತನಿಗೂ ಹತ್ತಿರವಾಗುತ್ತಾನೆ.ಪಂಚಾಂಗ : ಮಂಗಳವಾರ, 12-12-2023ಶೋಭಕೃತ್ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಕಾರ್ತಿಕ ಮಾಸ / ಕೃಷ್ಣ ಪಕ್ಷ ತಿಥಿ: ಅಮಾವಾಸ್ಯೆ / ನಕ್ಷತ್ರ: ಅನುರಾಧಾ / ಯೋಗ: ಧೃತಿ / ಕರಣ: ಚತುಷ್ಪಾದ
ಸೂರ್ಯೋದಯ : ಬೆ.06.32ಸೂರ್ಯಾಸ್ತ : 05.55ರಾಹುಕಾಲ : 3.00-4.30ಯಮಗಂಡ ಕಾಲ : 9.00-10.30ಗುಳಿಕ ಕಾಲ : 12.00-1.30
ರಾಶಿಭವಿಷ್ಯ :ಮೇಷ: ನ್ಯಾಯಾಲಯದ ಮೆಟ್ಟಿಲೇರಿದ ಸಮಸ್ಯೆಗಳು ಇತ್ಯರ್ಥವಾಗಲಿವೆ.ವೃಷಭ: ಕುಟುಂಬ ಸದಸ್ಯರೊಂದಿಗೆ ಹೆಚ್ಚು ಸಮಯ ಕಳೆಯುವಿರಿ. ಖರ್ಚು ಸ್ವಲ್ಪ ಹೆಚ್ಚಾಗಬಹುದು.ಮಿಥುನ: ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸು ವುದರಿಂದ ಮನಸ್ಸಿಗೆ ಸಂತೋಷ ಸಿಗಲಿದೆ.
ಕಟಕ: ರಾಜಕೀಯ ವರ್ಗದವರಿಗೆ ಜನಪ್ರಿಯತೆ ಹೆಚ್ಚುವುದರಿಂದ ಶತ್ರುಗಳ ಕಾಟ ಹೆಚ್ಚಾಗಲಿದೆ.ಸಿಂಹ: ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಯಶಸ್ಸು ಪಡೆಯಲು ಹೆಚ್ಚು ಶ್ರಮ ವಹಿಸಬೇಕಾಗುತ್ತದೆ.ಕನ್ಯಾ: ಹಣದ ಮೇಲಿನ ದುರಾಸೆಗಾಗಿ ಯಾವ ಕೆಟ್ಟ ಹಾದಿ ಹಿಡಿಯಬೇಡಿ.
ತುಲಾ: ಲಾಭದ ಆಸೆಗೆ ಇರುವ ಉಳಿ ತಾಯದ ಹಣವನ್ನೂ ಖರ್ಚು ಮಾಡಿ ಸಂಕಷ್ಟಕ್ಕೆ ಸಿಲುಕದಿರಿ.ವೃಶ್ಚಿಕ: ಸ್ನೇಹಿತರು, ಹಿತೈಷಿಗಳಿಂದ ಜೀವನ ನಡೆಸಲು ಬೇಕಾದ ಸಹಾಯ ಪಡೆಯುವಿರಿ.ಧನುಸ್ಸು: ಆರ್ಥಿಕ ಸಮಸ್ಯೆಗಳು ಹೆಚ್ಚಾಗಬಹುದು. ಪ್ರೀತಿಪಾತ್ರರು ದೂರವಾಗುವರು.
ಮಕರ: ಪಿತ್ರಾರ್ಜಿತ ಆಸ್ತಿ ನಿಮಗೆ ಬಂದು ಸೇರಲಿದೆ. ಬಂಧು-ಬಾಂಧವರ ಸಮಾಗಮವಾಗಲಿದೆ.ಕುಂಭ: ಸರ್ಕಾರಿ ಅಧಿಕಾರಿಗಳಿಂದ ಅನುಕೂಲ ವಾಗಲಿದೆ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ.ಮೀನ: ಸಹೋದರರಲ್ಲಿ ಉಂಟಾದ ಭಿನ್ನಾಭಿಪ್ರಾಯ ಸೇಡಿಗೆ ತಿರುಗುವ ಸಾಧ್ಯತೆಗಳಿವೆ.
ವಿಪಕ್ಷಗಳು ನೀರಿನಿಂದ ಹೊರತೆಗೆದ ಮೀನಿನಂತಾಗಿವೆ : ಸಿಎಂ ಸಿದ್ದರಾಮಯ್ಯ