ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (04-12-2023)
ನಿತ್ಯ ನೀತಿ:ಆಚಾರ-ವಿಚಾರಗಳು ವ್ಯಕ್ತಿಯ ನಡೆ-ನುಡಿಗಳಲ್ಲಿ ಒಂದಾಗುವ ವಿಧಾನವು ಮಾನವನನ್ನು ದೇವ ಮಾನವನನ್ನಾಗಿ ಪರಿವರ್ತಿಸುತ್ತದೆ.
ಪಂಚಾಂಗ ಸೋಮವಾರ 04-12-2023ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಕಾರ್ತಿಕ ಮಾಸ / ಕೃಷ್ಣ ಪಕ್ಷ / ತಿಥಿ: ಸಪ್ತಮಿ / ನಕ್ಷತ್ರ: ಮಘಾ / ಯೋಗ: ವೈಧೃತಿ / ಕರಣ: ವಿಷ್ಟಿಸೂರ್ಯೋದಯ : ಬೆ.06.27ಸೂರ್ಯಾಸ್ತ : 05.52ರಾಹುಕಾಲ : 7.30-9.00ಯಮಗಂಡ ಕಾಲ : 10.30-12.00ಗುಳಿಕ ಕಾಲ : 1.30-3.00
ರಾಶಿ ಭವಿಷ್ಯಮೇಷ: ಮಾಡಬೇಕೆಂದುಕೊಂಡಿರುವ ಒಳ್ಳೆಯ ಕೆಲಸ ವನ್ನು ಇಂದಿನಿಂದಲೇ ಆರಂಭಿಸುವುದು ಸೂಕ್ತ.ವೃಷಭ: ನೆರೆಹೊರೆಯವರೊಂದಿಗೆ ಯಾವುದೇ ಕಾರಣಕ್ಕೂ ಮನಸ್ತಾಪ ಮಾಡಿಕೊಳ್ಳದಿರಿ.ಮಿಥುನ: ಹೊಸ ಪ್ರದೇಶಕ್ಕೆ ಭೇಟಿ ನೀಡಿ ಒಳ್ಳೆಯ ಅನುಭವ ಪಡೆದುಕೊಳ್ಳಲು ಅವಕಾಶ ಸಿಗಲಿದೆ.
ಕಟಕ: ನೌಕರರಿಗೆ ಸ್ಥಾನ ಬದಲಾವಣೆ ಅಥವಾ ವರ್ಗಾವಣೆಯಾಗುವ ಸಾಧ್ಯತೆಗಳಿವೆ.ಸಿಂಹ: ಗುರು-ಹಿರಿಯ ರೊಂದಿಗೆ ಸಮಾಲೋಚನೆ ನಡೆಸುವಿರಿ. ಬಂಧುಗಳಿಂದ ಸಮಸ್ಯೆ ಬಗೆಹರಿಯಲಿದೆ.ಕನ್ಯಾ: ಆಪ್ತರಿಂದಲೇ ಕೆಟ್ಟ ಮಾತು ಕೇಳಬೇಕಾದ ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ.
ತುಲಾ: ಆಸ್ತಿ ಸಂಬಂಧಿತ ತಗಾದೆಗಳಿಗೆ ನ್ಯಾಯವಾದಿಗಳ ಸಲಹೆ ಪಡೆಯಿರಿ.ವೃಶ್ಚಿಕ: ಯಾವುದೋ ವಿಚಾರ ಮನಸ್ಸಿನಲ್ಲಿಟ್ಟು ಕೊಂಡು ಕೊರಗುವುದು ಸರಿಯಲ್ಲ.ಧನುಸ್ಸು: ಲೇವಾದೇವಿ ವ್ಯವಹಾರದಲ್ಲಿ ಧನಲಾಭವಿದೆ. ಸಮಾಧಾನದಿಂದ ವ್ಯವಹರಿಸಿ.
ಮಕರ: ಷೇರು ವ್ಯವಹಾರ ದಲ್ಲಿ ತೊಡಗಿಕೊಂಡವರಿಗೆ ಸ್ವಲ್ಪ ಮಟ್ಟಿನ ಲಾಭ ಸಿಗಲಿದೆ.ಕುಂಭ: ತಂದೆ-ತಾಯಿಯ ಆರೋಗ್ಯದ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು.ಮೀನ: ಸರ್ಕಾರಿ ಕೆಲಸ-ಕಾರ್ಯಗಳಿಂದ ಅನುಕೂಲವಾಗಲಿದೆ. ಆತ್ಮಗೌರವ ಹೆಚ್ಚಾಗಲಿದೆ.