ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-12-2023)
ನಿತ್ಯ ನೀತಿ :ಪ್ರಾಜ್ಞನಾದವನು ಸುಖ ಬಂದಾಗ ಬೀಗುವು ದಿಲ್ಲ. ದುಃಖ ಬಂದಾಗ ಕುಗ್ಗುವುದೂ ಇಲ್ಲ. ಎರಡನ್ನೂ ಸಮನಾಗಿ ಬರಮಾಡಿಕೊಳ್ಳುತ್ತಾನೆ. ಇದರಿಂದ ಆತ್ಮಶಕ್ತಿ ಜಾಗೃತವಾಗಿ ಸದಾ ಆನಂದ ಸ್ವರೂಪನಾಗಿಯೇ ಇರುತ್ತಾನೆ.
ಪಂಚಾಂಗ ಮಂಗಳವಾರ 19-12-2023ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಹೇಮಂತ ಋತು / ಮಾರ್ಗಶಿರ ಮಾಸ / ಶುಕ್ಲ ಪಕ್ಷ / ತಿಥಿ: ಸಪ್ತಮಿ / ನಕ್ಷತ್ರ: ಪೂರ್ವಾಭಾದ್ರ / ಯೋಗ: ಸಿದ್ಧಿ / ಕರಣ: ವಿಷ್ಟಿ
ಸೂರ್ಯೋದಯ : ಬೆ.06.36ಸೂರ್ಯಾಸ್ತ : 05.58ರಾಹುಕಾಲ : 3.00-4.30ಯಮಗಂಡ ಕಾಲ : 9.00-10.30ಗುಳಿಕ ಕಾಲ : 12.00-1.30
ರಾಶಿ ಭವಿಷ್ಯಮೇಷ: ವೃತ್ತಿ ಜೀವನದಲ್ಲಿ ಉತ್ತಮ ಪ್ರಗತಿ ಸಾಧಿಸುವಿರಿ. ಆರೋಗ್ಯದ ಕಡೆ ಗಮನ ಹರಿಸಿ.ವೃಷಭ: ನೀವು ಹಿಂದೆ ಮಾಡಿದ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಶತ್ರುಗಳ ಕಾಟ ತಪ್ಪಲಿದೆ.ಮಿಥುನ: ನಿಮ್ಮ ಸ್ವಭಾವದಲ್ಲಿ ಮಹತ್ತರವಾದ ಬದಲಾವಣೆಗಳು ಆಗಲಿವೆ.
ಕಟಕ: ಹೊಸ ಉದ್ಯಮ ಪ್ರಾರಂಭಿಸಲು ಬಯಸುವವರಿಗೆ ಉತ್ತಮ ಯಶಸ್ಸು ಸಿಗಲಿದೆ.ಸಿಂಹ: ಹಣ ಹೇಗೆ ವಿನಿಯೋಗವಾಗಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆ ಬಹಳ ಮುಖ್ಯ.ಕನ್ಯಾ: ಷೇರು ಮಾರು ಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವವರು ಎಚ್ಚರಿಕೆಯಿಂದಿರಿ.
ತುಲಾ: ಹಿತವಾದ ಮಾತು ಗಳಿಂದ ಸಂಗಾತಿ, ಪ್ರೀತಿಪಾತ್ರರನ್ನು ಮೆಚ್ಚಿಸುವಿರಿ.ವೃಶ್ಚಿಕ: ಹಣಕಾಸು ಸಮಸ್ಯೆಯಿದ್ದರೂ ಹೇಗಾದರೂ ಹಣ ಹೊಂದಾಣಿಕೆಯಾಗುತ್ತದೆ.ಧನುಸ್ಸು: ನಿಮ್ಮ ಸ್ವಭಾವದಲ್ಲಿ ಮಹತ್ತರವಾದ ಬದಲಾವಣೆಗಳು ಆಗಲಿವೆ.
ಮಕರ: ನಿರೀಕ್ಷಿತ ಮೂಲಗಳಿಂದ ಆದಾಯ ಬರಲಿದೆ.ಅಮೂಲ್ಯ ವಸ್ತುಗಳ ಖರೀದಿಗೆ ಉತ್ತಮ ದಿನ.ಕುಂಭ: ವೃತ್ತಿ ಕ್ಷೇತ್ರದಲ್ಲಿ ಉತ್ತಮ ಬದಲಾವಣೆ ಗಳಾಗುತ್ತವೆ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ.ಮೀನ: ಕೃಷಿ ಭೂಮಿ ಮತ್ತು ಅದಕ್ಕೆ ಸಂಬಂಧಿಸಿತ ಕೆಲಸ-ಕಾರ್ಯಗಳಿಂದ ಹೆಚ್ಚು ಲಾಭ ಗಳಿಸುವಿರಿ.