ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (20-12-2023)
ನಿತ್ಯ ನೀತಿ :ನಾವು ಒಬ್ಬರನ್ನು ಹಿಂಸಿಸಿದರೆ ಮತ್ತೊಬ್ಬರು ನಮ್ಮನ್ನು ಹಿಂಸಿಸುತ್ತಾರೆ. ಇದರಿಂದ ಜೀವಿಸುವುದು ದುರ್ಭರವಾಗುತ್ತದೆ. ಹಿಂಸೆಯು ಮಾನವನನ್ನು ನರಕ ಕೂಪಕ್ಕೆ ತಳ್ಳುತ್ತದೆ.
ಪಂಚಾಂಗ ಬುಧವಾರ 20-12-2023ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಹೇಮಂತ ಋತು / ಮಾರ್ಗಶಿರ ಮಾಸ / ಶುಕ್ಲ ಪಕ್ಷ / ತಿಥಿ: ಅಷ್ಟಮಿ / ನಕ್ಷತ್ರ: ಉತ್ತರಾಭಾದ್ರ / ಯೋಗ: ವ್ಯತೀಪಾತ / ಕರಣ: ಬಾಲವ
ಸೂರ್ಯೋದಯ : ಬೆ.06.36ಸೂರ್ಯಾಸ್ತ : 05.58ರಾಹುಕಾಲ : 12.00-1.30ಯಮಗಂಡ ಕಾಲ : 7.30-9.00ಗುಳಿಕ ಕಾಲ : 10.30-12.00
ರಾಶಿ ಭವಿಷ್ಯಮೇಷ: ನಿಮ್ಮ ಉತ್ತಮ ಕೆಲಸಕ್ಕೆ ಎಲ್ಲೆಡೆ ಪ್ರಶಂಸೆ, ಶ್ಲಾಘನೆ ವ್ಯಕ್ತವಾಗಲಿದೆ. ಶುಭದಿನ.ವೃಷಭ: ನಿಮ್ಮ ಮಾತೇ ಸರಿ ಎಂದು ಎಲ್ಲೂ ವಾದ ಮಾಡಲು ಹೋಗಬೇಡಿ. ಸಮಾಧಾನದಿಂದಿರಿ.ಮಿಥುನ: ಸಮಾಧಾನದಿಂದ ಕಾರ್ಯ ನಿರ್ವಹಿಸಿ. ಗೆಲುವು ನಿಮಗೆ ಕಟ್ಟಿಟ್ಟ ಬುತ್ತಿ ಎಂಬುದು ಅರಿವಿರಲಿ.
ಕಟಕ: ಉದ್ವೇಗದಿಂದ ಮಾತನಾಡದಿರಿ. ಹೆಚ್ಚಿನ ತಾಳ್ಮೆಯಿಂದ ನಿಮ್ಮ ಗುರಿ ತಲುಪಲು ಸಹಕಾರಿಯಾಗಲಿದೆ.ಸಿಂಹ: ಯಾರದ್ದೋ ಜಗಳಕ್ಕೆ ನಿಮಗೆ ತೊಂದರೆಯಾಗುವ ಸಾಧ್ಯತೆ. ಎಚ್ಚರಿಕೆ ವಹಿಸಿ.ಕನ್ಯಾ:ಕೆಟ್ಟ ಜನರಿಂದ ಮಾನಸಿಕ ಆಘಾತಕ್ಕೆ ಒಳಗಾಗುವ ಸಾಧ್ಯತೆ ಇದೆ.
ತುಲಾ: ದೂರದ ಬಂಧುಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣವಿರಲಿದೆ.ವೃಶ್ಚಿಕ: ಭೂ ವ್ಯವವಾರದಲ್ಲಿ ತೊಡಗಿಸಿಕೊಂಡವರಿಗೆ ಸ್ವಲ್ಪ ನಷ್ಟ ಸಂಭವಿಸಲಿದೆ.ಧನುಸ್ಸು: ಧಾರ್ಮಿಕ ಆಚರಣೆಗಳಿಂದ ನೆಮ್ಮದಿಸಿಗಲಿದೆ. ಮಾನಸಿಕ ಒತ್ತಡ ನಿವಾರಣೆಯಾಗಲಿದೆ.
ಮಕರ: ಆರೋಗ್ಯವು ಉತ್ತಮವಾಗಿರುತ್ತದೆ. ಆದರೂ ಆರೋಗ್ಯವಾಗಿಲ್ಲ ಎಂಬ ಭಾವನೆ ನಿಮ್ಮಲ್ಲಿರುತ್ತದೆ.ಕುಂಭ: ಅನಾರೋಗ್ಯದಿಂದ ದೂರ ಪ್ರಯಾಣ ರದ್ದುಪಡಿಸಬೇಕಾಗಬಹುದು.ಮೀನ: ಯಾವುದೇ ತಪ್ಪು ಕೆಲಸಗಳನ್ನು ಮಾಡುವುದನ್ನು ತಪ್ಪಿಸಿ.