ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (22-12-2023)
ನಿತ್ಯ ನೀತಿ :ನಿಮ್ಮ ಭಾವನೆ ಅರ್ಥ ಮಾಡಿಕೊಂಡ ನಂತರವೂ ನಿಮ್ಮನ್ನು ನೋಯಿಸುವವರು ಎಂದಿಗೂ ನಿಮ್ಮವರಾಗಲು ಸಾಧ್ಯವಿಲ್ಲ.
ಪಂಚಾಂಗ ಶುಕ್ರವಾರ 22-12-2023ಶೋಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಮಾರ್ಗಶಿರ ಮಾಸ / ಶುಕ್ಲ ಪಕ್ಷ / ತಿಥಿ: ದಶಮಿ / ನಕ್ಷತ್ರ: ಅಶ್ವಿನಿ / ಯೋಗ: ಪರಿಘ / ಕರಣ: ವಣಿಜ್
ಸೂರ್ಯೋದಯ : ಬೆ.06.37ಸೂರ್ಯಾಸ್ತ : 05.59ರಾಹುಕಾಲ : 10.30-12.00ಯಮಗಂಡ ಕಾಲ : 3.00-4.30ಗುಳಿಕ ಕಾಲ : 7.30-9.00
ರಾಶಿ ಭವಿಷ್ಯಮೇಷ: ಬಾಂಧವರ ಸಹಾಯದಿಂದ ಆರ್ಥಿಕ ಮುಗ್ಗಟ್ಟು ನಿವಾರಣೆಯಾಗಲಿದೆ.ವೃಷಭ: ಷೇರು ವ್ಯವಹಾರದಲ್ಲಿ ಸಮಸ್ಯೆ ಅಥವಾ ನಷ್ಟ ಸಂಭವಿಸಬಹುದು. ಎಚ್ಚರಿಕೆಯಿಂದಿರಿ.ಮಿಥುನ: ಕುಟುಂಬದಲ್ಲಿ ಅಸಮಾಧಾನದ ವಾತಾ ವರಣ ತಿಳಿಗೊಳ್ಳಲಿದೆ.
ಕಟಕ: ನಿಮ್ಮಲ್ಲಿನ ಒಳ್ಳೆಯ ತನವನ್ನು ಕೆಲವರು ದುರುಪಯೋಗಪಡಿಸಿಕೊಳ್ಳುವರು.ಸಿಂಹ: ಬಿಡುವಿಲ್ಲದ ಕೆಲಸಗಳ ನಡುವೆಯೂ ಇತರರಿಗೆ ನೆರವು ನೀಡುವಿರಿ.ಕನ್ಯಾ: ದೈನಂದಿನ ಆಗುಹೋಗುಗಳ ಬಗ್ಗೆ ಹೆಚ್ಚು ಗಮನ ಹರಿಸಿ.
ತುಲಾ: ಸಾಮಾಜಿಕ ಕೆಲಸ-ಕಾರ್ಯಗಳಿಗೆ ಸಮಯ ಮೀಸಲಿಡುವಿರಿ.ವೃಶ್ಚಿಕ: ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ದೈನಂದಿನ ಜೀವನದಲ್ಲಿ ಉತ್ಸಾಹ ಹೆಚ್ಚಾಗಲಿದೆ.ಧನುಸ್ಸು: ಕಟ್ಟಡ ನಿರ್ಮಾಣ ಮಾಡುವವರಿಗೆ ನಿರೀಕ್ಷೆಗಿಂತ ಹೆಚ್ಚು ಲಾಭ ದೊರೆಯಲಿದೆ.
ಮಕರ: ಅನ್ಯರಿಗೆ ಸಹಾಯ ಮಾಡುವಾಗ ಯಾವುದೇ ಪ್ರತಿಫಲಾಪೇಕ್ಷೆಯನ್ನು ನಿರೀಕ್ಷಿಸದಿರಿ.ಕುಂಭ: ಸಮಾಜದಲ್ಲಿ ಅವಮಾನಕ್ಕೆ ಒಳಗಾಗುವ ಸನ್ನಿವೇಶಗಳು ಎದುರಾಗಬಹುದು.ಮೀನ: ಉದ್ಯೋಗದಲ್ಲಿ ಒತ್ತಡ ಹೆಚ್ಚಾಗಬಹುದು. ದೃಢ ನಿರ್ಧಾರ ಕೈಗೊಳ್ಳಿ.