ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (17-12-2023)
ನಿತ್ಯ ನೀತಿ :ಸಂಸ್ಕಾರ, ಸಂಸ್ಕøತಿಗಳು ನಮ್ಮ ನಡವಳಿಕೆಗಳನ್ನು ತಿದ್ದುವುದಕ್ಕಿವೆಯೇ ಹೊರತು, ನಮ್ಮ ಅನ್ಯೋನ್ಯತೆಯನ್ನು ದೂರ ಮಾಡುವುದಕ್ಕಲ್ಲ.
ಪಂಚಾಂಗ ಭಾನುವಾರ 17-12-2023ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಹೇಮಂತ ಋತು / ಮಾರ್ಗಶಿರ ಮಾಸ / ಶುಕ್ಲ ಪಕ್ಷ / ತಿಥಿ: ಪಂಚಮಿ / ನಕ್ಷತ್ರ: ಧನಿಷ್ಠಾ / ಯೋಗ: ಹರ್ಷಣ / ಕರಣ: ಭವ
ಸೂರ್ಯೋದಯ : ಬೆ.06.34ಸೂರ್ಯಾಸ್ತ : 05.57ರಾಹುಕಾಲ : 4.30-6.00ಯಮಗಂಡ ಕಾಲ : 12.00-1.30ಗುಳಿಕ ಕಾಲ : 3.00-4.30
ರಾಶಿ ಭವಿಷ್ಯಮೇಷ: ಹಳೆಯ ಸ್ನೇಹಿತರಿಂದ ಶುಭ ಸುದ್ದಿ ಕೇಳು ವಿರಿ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ.ವೃಷಭ: ಮುಂದೆ ಯಾವಾಗಲೋ ಹಣ ಬರಲಿದೆ ಎಂಬ ನಿರೀಕ್ಷೆಯಿಟ್ಟುಕೊಂಡು ಸಾಲ ಮಾಡದಿರಿ.ಮಿಥುನ: ನಿಮ್ಮ ಪ್ರೀತಿಪಾತ್ರರು ನಿಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಡೆಯುವರು.
ಕಟಕ: ಅಂದುಕೊಳ್ಳದ ರೀತಿಯಲ್ಲಿ ಖರ್ಚಿನ ಪ್ರಮಾಣ ವಿಪರೀತ ಹೆಚ್ಚಾಗುತ್ತದೆ.ಸಿಂಹ: ಬಾಕಿ ಇರುವ ಕೆಲಸ-ಕಾರ್ಯಗಳನ್ನು ಪೂರ್ಣಗೊಳಿಸಲು ಬಹಳ ಕಷ್ಟಪಡಬೇಕಾಗುತ್ತದೆ.ಕನ್ಯಾ: ವ್ಯವಹಾರದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಾಗ ಎಚ್ಚರಿಕೆ ವಹಿಸಿ.
ತುಲಾ: ಅನುಕೂಲಕ್ಕಾಗಿ ಹೆಚ್ಚುವರಿ ಹಣ ಖರ್ಚು ಮಾಡುವುದನ್ನು ತಪ್ಪಿಸಿ.ವೃಶ್ಚಿಕ: ಕುಟುಂಬ ಸದಸ್ಯರ ನಡುವೆ ಹೊಂದಾಣಿಕೆ ಕೊರತೆ ಇರುತ್ತದೆ.ಧನುಸ್ಸು: ಸಂಗಾತಿ ಮತ್ತು ಕುಟುಂಬದೊಂದಿಗಿನ ಸಂಬಂಧ ಸಾಮರಸ್ಯದಿಂದ ಕೂಡಿರುತ್ತದೆ.
ಮಕರ: ಪ್ರತಿಸ್ರ್ಪಧಿಗಳು ಕಠಿಣ ಸ್ಪರ್ಧೆ ನೀಡಬಹುದು. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಪ್ರತಿ ಹೆಜ್ಜೆಯನ್ನು ಚಿಂತನಶೀಲವಾಗಿ ಇಡಬೇಕಾಗುತ್ತದೆ.ಕುಂಭ: ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ.ಮೀನ: ವೈಯಕ್ತಿಕ ವಿಷಯಗಳಲ್ಲಿ ಯಾವುದೇ ಮೂರನೇ ವ್ಯಕ್ತಿ ಹಸ್ತಕ್ಷೇಪ ಮಾಡಲು ಬಿಡಬೇಡಿ.