ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-12-2023)
ನಿತ್ಯ ನೀತಿ :ಅಹಿಂಸೆಗೆ ಬಹಳ ಶಕ್ತಿಯಿದೆ. ಇದೊಂದು ಸ್ವಾಧ್ಯಾಯದ ತಪಸ್ಸು. ಕೂಡಲೇ ಫಲಿಸದಿದ್ದರೂ ಕ್ರಮೇಣ ಅಂತರಂಗದ ಶಕ್ತಿಯ ಮೇಲೆ ಸತ್ಪರಿಣಾಮವನ್ನುಂಟು ಮಾಡಿಯೇ ತೀರುತ್ತದೆ.
ಪಂಚಾಂಗ ಸೋಮವಾರ 18-12-2023ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಹೇಮಂತ ಋತು / ಮಾರ್ಗಶಿರ ಮಾಸ / ಶುಕ್ಲ ಪಕ್ಷ / ತಿಥಿ: ಷಷ್ಠಿ / ನಕ್ಷತ್ರ: ಶತಭಿಷಾ / ಯೋಗ: ವಜ್ರ / ಕರಣ: ಗರಜೆ
ಸೂರ್ಯೋದಯ : ಬೆ.06.35ಸೂರ್ಯಾಸ್ತ : 05.57ರಾಹುಕಾಲ : 7.30-9.00ಯಮಗಂಡ ಕಾಲ : 10.30-12.00ಗುಳಿಕ ಕಾಲ : 1.30-3.00
ರಾಶಿ ಭವಿಷ್ಯಮೇಷ: ಸಹೋದ್ಯೋಗಿಗಳಿಂದ ಅನುಕೂಲ ವಾಗಲಿದೆ. ವಾಹನ ಚಾಲನೆಯಲ್ಲಿ ಎಚ್ಚರ ವಹಿಸಿ.ವೃಷಭ: ಹೊಸ ವಾಹನ ಖರೀದಿಸುವ ಆಲೋಚನೆಯನ್ನು ಮುಂದೂಡುವುದು ಒಳಿತು.ಮಿಥುನ: ಆಸ್ತಿಗಾಗಿ ಸಹೋದರರಿಂದ ಕಲಹ ವಾಗುವ ಸಾಧ್ಯತೆಗಳಿವೆ. ಸಣ್ಣ ಮಾತಿನಿಂದ ಜಗಳ ಪ್ರಾರಂಭವಾಗಲಿದೆ. ಎಚ್ಚರಿಕೆಯಿಂದಿರಿ.
ಕಟಕ: ಆಭರಣ ವ್ಯಾಪಾರಿಗಳಿಗೆ ಮೋಸ. ಮೇಲಧಿಕಾರಿಗಳಿಗೆ ತೊಂದರೆಯಾಗಲಿದೆ.ಸಿಂಹ: ಅನಾರೋಗ್ಯ ಕಾರಣದಿಂದಾಗಿ ಮನಸ್ಸಿಗೆ ಕಿರಿಕಿರಿ ಉಂಟಾಗಲಿದೆ. ದೂರ ಪ್ರಯಾಣ ಮಾಡುವಿರಿ.ಕನ್ಯಾ: ಸಂದಿಗ್ಧ ಪರಿಸ್ಥಿತಿ ಯನ್ನು ಧೈರ್ಯದಿಂದ ಎದುರಿಸಲು ಸಿದ್ಧರಾಗಿ.
ತುಲಾ: ಆದಾಯಕ್ಕಿಂತ ಖರ್ಚು ಹೆಚ್ಚು. ಹಣಕಾಸು ತೊಂದರೆ ನಿವಾರಣೆಯಾಗಲಿದೆ.ವೃಶ್ಚಿಕ: ಕಾಲಕಾಲಕ್ಕೆ ವೈದ್ಯ ಕೀಯ ತಪಾಸಣೆ ಮಾಡಿಸಿ ಕೊಳ್ಳುವುದು ಒಳ್ಳೆಯದು.ಧನುಸ್ಸು: ದೈನಂದಿನ ಕೆಲಸಗಳು ನಿರಾತಂಕವಾಗಿ ನಡೆಯಲಿವೆ. ಕುಟುಂಬದ ಕಡೆ ಗಮನ ಹರಿಸಿ.
ಮಕರ: ಸ್ನೇಹಿತರಿಂದ ಅಪೇಕ್ಷಿಸುವ ಸಹಕಾರ ಸಿಗಲಿದೆ. ಹಿರಿಯರೊಂದಿಗೆ ಚರ್ಚೆ ನಡೆಸುವಿರಿ.ಕುಂಭ: ವೃತ್ತಿಯಲ್ಲಿ ನಿಮ್ಮ ಅನುಭವ ಹಾಗೂ ಪರಿಶ್ರಮಕ್ಕೆ ಸೂಕ್ತ ಸ್ಥಾನಮಾನ ಸಿಗಲಿದೆ.ಮೀನ:ಪ್ರತಿಯೊಂದು ಕೆಲಸವನ್ನು ಎಚ್ಚರಿಕೆ ಮತ್ತು ಪ್ರಾಮಾಣಿಕವಾಗಿ ಮಾಡುವುದು ಸೂಕ್ತ.