ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-01-2024)
ನಿತ್ಯ ನೀತಿ :ಅತಿಯಾದ ಒಳ್ಳೆಯತನ, ಅತಿಯಾದ ಪ್ರಾಮಾಣಿಕತೆ, ಅತಿಯಾದ ಆದರ್ಶಗಳು, ಅತಿಯಾದ ನಿಷ್ಠೆ ಮನುಷ್ಯನನ್ನು ಒಂಟಿಯಾಗಿಸುತ್ತೆ ನಿಜ. ಆದರೆ, ಅವನ ಆತ್ಮಸಾಕ್ಷಿ ಮಾತ್ರ ಎಂದೂ ಅವನ ಕೈ ಬಿಡುವುದಿಲ್ಲ.
ಪಂಚಾಂಗ ಶುಕ್ರವಾರ 19-01-2024
ಶೋಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಪುಷ್ಯ ಮಾಸ / ಶುಕ್ಲ ಪಕ್ಷ / ತಿಥಿ: ನವಮಿ / ನಕ್ಷತ್ರ: ಭರಣಿ / ಯೋಗ: ಸಾಧ್ಯ / ಕರಣ: ಬಾಲವ
ಸೂರ್ಯೋದಯ : ಬೆ.06.46ಸೂರ್ಯಾಸ್ತ : 06.14ರಾಹುಕಾಲ : 10.30-12.00ಯಮಗಂಡ ಕಾಲ : 3.00-4.30ಗುಳಿಕ ಕಾಲ : 7.30-9.00
ರಾಶಿ ಭವಿಷ್ಯಮೇಷ: ಕಾರ್ಯ ಸಾಮಥ್ರ್ಯವನ್ನು ಅರ್ಥಮಾಡಿ ಕೊಂಡು ಆದಾಯ ಹೆಚ್ಚಿಸುವ ಕೆಲಸ ಮಾಡಿ.ವೃಷಭ: ಹಣದ ವಿಷಯದಲ್ಲಿ ದೊಡ್ಡ ಸಮಸ್ಯೆ ಇರುವುದಿಲ್ಲ. ಮನಸ್ಸಿಗೆ ನೆಮ್ಮದಿ ಸಿಗಲಿದೆ.ಮಿಥುನ: ಮಾನಸಿಕ ಒತ್ತಡ ತೊಡೆದುಹಾಕಲು ಪ್ರಯತ್ನಿಸಿ. ಓದಿನ ಬಗ್ಗೆ ಕಾಳಜಿ ಇರಲಿ.
ಕಟಕ: ಯಂತ್ರೋಪಕಣ ಗಳನ್ನು ದುರಸ್ತಿ ಮಾಡುವ ವರಿಗೆ ಹೆಚ್ಚು ಕೆಲಸ ದೊರೆತು ಆದಾಯ ಸಿಗಲಿದೆ.ಸಿಂಹ: ಉನ್ನತ ಮಟ್ಟದಲ್ಲಿ ಕಾರ್ಯನಿರ್ವಹಿಸುವವರಿಗೆ ಜನಸಾಮಾನ್ಯರಿಂದ ಉತ್ತಮ ಪ್ರೋತ್ಸಾಹ ದೊರೆಯಲಿದೆ.ಕನ್ಯಾ: ಉನ್ನತ ಅಧಿಕಾರಿ ಗಳು ನಿಮ್ಮ ಮೇಲೆ ಕೋಪಗೊಳ್ಳು ವರು. ಎಚ್ಚರಿಕೆಯಿಂದಿರಿ.
ತುಲಾ: ಹಣದ ಕೊರತೆಯಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.ವೃಶ್ಚಿಕ: ಸಾಲಗಾರರ ಕಿರಿಕಿರಿ ಉಂಟಾಗಲಿದೆ. ಮಕ್ಕಳ ವಿಷಯದಲ್ಲಿ ಚಿಂತೆ ಕಾಡಲಿದೆ.ಧನುಸ್ಸು: ಉದ್ಯೋಗ ಬದಲಾವಣೆಗೆ ಉತ್ತಮ ಸಮಯ ಮತ್ತು ಹೊಸ ಅವಕಾಶಗಳು ಸಿಗಲಿವೆ.
ಮಕರ: ಅಪರೂಪದ ಅತಿಥಿ ಆಗಮನದಿಂದ ಮನಸ್ಸಿಗೆ ಸಂತೋಷವಾಗಲಿದೆ.ಕುಂಭ: ಉದ್ಯಮಿಗಳು ಹೊಸ ಶಾಖೆ ತೆರೆಯಲು ಬೇಕಾದ ಅನುಕೂಲಗಳು ಒದಗುತ್ತವೆ.ಮೀನ: ವಸ್ತ್ರಾಭರಣ ಖರೀದಿಸುವ ಸಾಧ್ಯತೆ ಇದೆ. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ.