ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (10-01-2024)
ನಿತ್ಯ ನೀತಿ :ನಂಬಿ ಬದುಕುವುದು ಬೇರೆ. ನಂಬಿಸುತ್ತಾ ಬದುಕುವುದು ಬೇರೆ. ನಂಬಿ ಬದುಕುವುದರಲ್ಲಿ ಪ್ರೀತಿ ಇರುತ್ತದೆ. ನಂಬಿಸುತ್ತಾ ಬದುಕುವುದರಲ್ಲಿ ಸ್ವಾರ್ಥ ಮಾತ್ರ ಇರುತ್ತದೆ.
ಪಂಚಾಂಗ ಬುಧವಾರ 10-01-2024ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯಣ / ಹೇಮಂತ ಋತು / ಮಾರ್ಗಶಿರ ಮಾಸ / ಕೃಷ್ಣ ಪಕ್ಷ / ತಿಥಿ: ಚತುರ್ದಶಿ / ನಕ್ಷತ್ರ: ಮೂಲಾ / ಯೋಗ: ಧ್ರುವ / ಕರಣ: ವಿಷ್ಟಿ
ಸೂರ್ಯೋದಯ : ಬೆ.06.44ಸೂರ್ಯಾಸ್ತ : 06.09ರಾಹುಕಾಲ : 12.00-1.30ಯಮಗಂಡ ಕಾಲ : 7.30-9.00ಗುಳಿಕ ಕಾಲ : 10.30-12.00
ರಾಶಿ ಭವಿಷ್ಯಮೇಷ: ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ. ಕುಟುಂಬದಲ್ಲಿ ಸೌಹಾರ್ದತೆ ಇರಲಿದೆ.ವೃಷಭ: ಆಧ್ಯಾತ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಹಿರಿಯರ ಸಲಹೆ ಪಡೆದು ಕೆಲಸ ಮುಂದುವರೆಸಿ.ಮಿಥುನ: ಉದ್ಯೋಗ ಬದಲಾವಣೆ ವಿಚಾರದಲ್ಲಿನ ಗೊಂದಲವನ್ನು ಮೇಲಧಿಕಾರಿಗಳ ಗಮನಕ್ಕೆ ತನ್ನಿ.
ಕಟಕ: ವಿಧೇಯತೆಯಿಂದ ಇರುವ ನಿಮ್ಮ ಗುಣ ಉನ್ನತ ಅಧಿಕಾರಿಗಳಿಗೆ ಇಷ್ಟವಾಗಲಿದೆ.ಸಿಂಹ: ಪದೇ ಪದೇ ಮಾನಸಿಕ ಕಿರಿಕಿರಿ ಉಂಟಾಗಲಿದೆ. ಸಂಸಾರದಲ್ಲಿ ಸಮತೋಲನ ಕಾಪಾಡಿಕೊಳ್ಳಿ.ಕನ್ಯಾ:ಸಮಾಧಾನಚಿತ್ತ ದಿಂದಿದ್ದರೆ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯಾಗಲಿದೆ.
ತುಲಾ: ನೀವು ಚಿಂತಿಸದಂತೆ ನಡೆಯದ ಕಾರಣ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ.ವೃಶ್ಚಿಕ: ಕುಟುಂಬದ ವಿಷಯದಲ್ಲಿ ನಿಮ್ಮ ದೃಢ ನಿಲುವಿಗೆ ಎಲ್ಲರಿಂದಲೂ ಸಮ್ಮತಿ ಸಿಗಲಿದೆ.ಧನುಸ್ಸು: ಸರ್ಕಾರದಿಂದ ಆಗಬೇಕಿರುವ ಕೆಲಸ- ಕಾರ್ಯಗಳು ಸುಗಮವಾಗಿ ನೆರವೇರಲಿವೆ.
ಮಕರ: ನಿರೀಕ್ಷಿಸಿದಂತೆ ಅಧಿಕ ಧನಲಾಭ ದೊರೆಯಲಿದೆ. ಅನ್ಯರ ಮಾತಿನ ಬಗ್ಗೆ ವಿಶ್ವಾಸ ಬೇಡ.ಕುಂಭ: ಶಾಂತವಾಗಿದ್ದರೆ ಒಳ್ಳೆಯದು. ವಿರೋಧಿಗಳನ್ನು ನಿರ್ಲಕ್ಷಿಸದಿರುವುದು ಸೂಕ್ತ.ಮೀನ: ಸಂಕಷ್ಟಗಳಿಂದ ಮುಕ್ತಿ ದೊರೆಯಲಿದೆ. ಸರ್ಕಾರಿ ನೌಕರರಿಗೆ ಅನುಕೂಲವಾಗಲಿದೆ.