ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (11-01-2024)
ನಿತ್ಯ ನೀತಿ :ಒಂದು ನಿಮಿಷದಲ್ಲಿ ಜೀವನ ಬದಲಾಗುವುದಿಲ್ಲ. ಆದರೆ ಒಂದು ನಿಮಿಷ ಯೋಚನೆ ಮಾಡಿ ತೆಗೆದುಕೊಂಡ ನಿರ್ಣಯ ಮಾತ್ರ ಜೀವನವನ್ನು ಬದಲಾಯಿಸುತ್ತದೆ.
ಗುರುವಾರ ಪಂಚಾಂಗ – 11-01-2024ಶೋಭಕೃತ್ನಾಮ ಸಂವತ್ಸರ / ದಕ್ಷಿಣಾಯಣ / ಹೇಮಂತ ಋತು / ಮಾರ್ಗಶಿರ ಮಾಸ / ಕೃಷ್ಣ ಪಕ್ಷ / ತಿಥಿ: ಅಮಾವಾಸ್ಯೆ / ನಕ್ಷತ್ರ: ಪೂರ್ವಾಷಾಢ / ಯೋಗ: ವ್ಯಾಘಾತ / ಕರಣ: ಚತುಷ್ಪಾದ
ಸೂರ್ಯೋದಯ : ಬೆ.06.45ಸೂರ್ಯಾಸ್ತ : 06.10ರಾಹುಕಾಲ : 1.30-3.00ಯಮಗಂಡ ಕಾಲ : 6.00-7.30ಗುಳಿಕ ಕಾಲ : 9.00-10.30

ರಾಶಿಭವಿಷ್ಯಮೇಷ: ಕೆಲಸ-ಕಾರ್ಯಗಳಲ್ಲಿ ತೊಂದರೆಯಾಗ ಲಿದೆ. ಅನಗತ್ಯ ಖರ್ಚು ಮಾಡುವಿರಿ.ವೃಷಭ: ನೀವು ಆಡಿದ ಮಾತನ್ನು ಉಳಿಸಿಕೊಳ್ಳುವಲ್ಲಿ ಸೋಲಬೇಕಾಗುತ್ತದೆ. ಕೃಷಿ ಬಗ್ಗೆ ಆಸಕ್ತಿ ಮೂಡಲಿದೆ.ಮಿಥುನ: ಇನ್ನೊಬ್ಬರ ಮಾತುಗಳನ್ನು ಆಲಿಸಿ ತೀರ್ಮಾನಕ್ಕೆ ಬರುವುದು ಅನಿರ್ವಾಯವಾಗಲಿದೆ.
ಕಟಕ: ಕುಟುಂಬದಲ್ಲಿ ಸೌಹಾರ್ದಯುತ ವಾತಾ ವರಣ ಇರುವುದು. ಸಾಲ ತೀರಿಸಿದ ನೆಮ್ಮದಿ ಸಿಗಲಿದೆ.ಸಿಂಹ: ಷೇರು ಮಾರುಕಟ್ಟೆ ಹಾಗೂ ಕಮಿಷನ್ ವ್ಯಾಪಾರಕ್ಕೆ ಸಂಬಂಧಿಸಿದ ವೃತ್ತಿಯಲ್ಲಿರುವವರಿಗೆ ನಷ್ಟ ಉಂಟಾಗಲಿದೆ.ಕನ್ಯಾ: ಸೋದರನ ಆಗಮನ ದಿಂದ ಮನೆಯಲ್ಲಿ ಹೆಚ್ಚಿನ ಸಂಭ್ರಮ ಮೂಡಲಿದೆ.
ತುಲಾ: ಯೋಗಾಭ್ಯಾಸದಿಂದ ಆರೋಗ್ಯ ಚೆನ್ನಾಗಿರುವುದು.ವೃಶ್ಚಿಕ: ಧ್ಯಾನ, ಭಜನೆಯಿಂದ ನೆಮ್ಮದಿ ಸಿಗಲಿದೆ. ಮಕ್ಕಳ ಆರೋಗ್ಯದ ಬಗ್ಗೆ ಗಮನವಿರಲಿ.ಧನುಸ್ಸು: ಹಣಕಾಸಿನ ವ್ಯತ್ಯಾಸಗಳಾಗಿ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಲಿದೆ.
ಮಕರ: ದೂರ ಪ್ರಯಾಣವನ್ನು ಸಾಧ್ಯವಾದಷ್ಟು ಮುಂದೂಡುವುದು ಉತ್ತಮ.ಕುಂಭ: ನಿಮ್ಮ ಮೇಲಿದ್ದ ಆಪಾದನೆಗಳು ದೂರಾಗಿ ಮೇಲಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ.ಮೀನ: ಸೌಜನ್ಯತೆಯಿಂದ ನಡೆದುಕೊಳ್ಳುವುದರಿಂದ ನೆರೆಹೊರೆಯವರು ನಿಮಗೆ ಸ್ಪಂದಿಸುವರು.