ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (12-01-2024)
ನಿತ್ಯ ನೀತಿ :ಬೇರೆಯವರು ನಮಗೆ ಒಳ್ಳೆಯದನ್ನು ಬಯಸುವರೋ, ಕೆಟ್ಟದ್ದನ್ನು ಬಯಸುವರೋ ಅದು ಅವರವರಿಗೆ ಸಂಬಂಧಪಟ್ಟಿದ್ದು. ಆದರೆ, ನಾವು ಮಾತ್ರ ಒಳ್ಳೆಯದನ್ನೇ ಬಯಸೋಣ.
ಪಂಚಾಂಗ ಶುಕ್ರವಾರ 12-01-2024ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯಣ / ಹೇಮಂತ ಋತು / ಪುಷ್ಯ ಮಾಸ / ಶುಕ್ಲ ಪಕ್ಷ / ತಿಥಿ: ಪ್ರತಿಪದ್ / ನಕ್ಷತ್ರ: ಉತ್ತರಾಷಾಢ / ಯೋಗ: ಹರ್ಷಣ / ಕರಣ: ಬಾಲವ
ಸೂರ್ಯೋದಯ : ಬೆ.06.45ಸೂರ್ಯಾಸ್ತ : 06.11ರಾಹುಕಾಲ : 10.30-12.00ಯಮಗಂಡ ಕಾಲ : 3.00-4.30ಗುಳಿಕ ಕಾಲ : 7.30-9.00
ರಾಶಿ ಭವಿಷ್ಯಮೇಷ: ಇನ್ನೊಬ್ಬರ ಮಾತುಗಳನ್ನು ಆಲಿಸಿ ತೀರ್ಮಾನಕ್ಕೆ ಬರುವುದು ಅನಿರ್ವಾಯವಾಗಲಿದೆ.ವೃಷಭ: ಮಾತಿನಿಂದ ಕಾರ್ಯ ಸಾಧಿಸುವ ನಿಮ್ಮ ಗುಣದಿಂದ ಅನುಕೂಲಕರ ವಾತಾವರಣ ನಿರ್ಮಾಣವಾಗುವುದು.ಮಿಥುನ: ಅಕ್ಕಪಕ್ಕದವರೊಂದಿಗೆ ಸಂಯಮದಿಂದ ನಡೆದುಕೊಳ್ಳಿ. ನಾನಾ ರೀತಿಯಲ್ಲಿ ಹಣ ಕೈ ಸೇರಲಿದೆ.
ಕಟಕ: ರಫ್ತು ಮಾರಾಟದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಎದುರಾದರೂ ಆದಾಯಕ್ಕೆ ತೊಂದರೆಯಿಲ್ಲ.ಸಿಂಹ: ನಿಮ್ಮ ವ್ಯವಹಾರಗಳಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವುದರಿಂದ ಅಭಿವೃದ್ಧಿ ಸಾಧಿಸುವಿರಿ.ಕನ್ಯಾ: ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ದೊರೆಯಲಿದೆ.
ತುಲಾ: ವೈರಾಗ್ಯ ಹೊಂದಿರುವ ನೀವು ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಪರಿಶ್ರಮದಿಂದ ದುಡಿದರೆ ಪ್ರಗತಿಯ ಹಾದಿ ಕಾಣುವಿರಿ.ವೃಶ್ಚಿಕ: ಉದ್ಯೋಗದಲ್ಲಿ ಒತ್ತಡ ಹೆಚ್ಚಾಗಬಹುದು. ಆರೋಗ್ಯದಲ್ಲಿ ಏರುಪೇರಾಗಲಿದೆ.ಧನುಸ್ಸು: ವ್ಯಾವಹಾರಿಕ ಜೀವನದ ಕೆಲವು ಮುಖ್ಯವಾದ ನಿರ್ಧಾರಗಳನ್ನು ಕೈಗೊಳ್ಳುವಿರಿ.
ಮಕರ: ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.ಕುಂಭ: ಒಡಹುಟ್ಟಿದವರಲ್ಲಿ ಭಾವನಾತ್ಮಕ ಸಂಬಂಧ ಬೆಳೆಸಿಕೊಳ್ಳಿ. ದೂರ ಪ್ರಯಾಣ ಮಾಡುವುದು ಬೇಡ.ಮೀನ: ನೀವು ಮಾಡುವ ಕೆಲಸ-ಕಾರ್ಯಗಳಲ್ಲಿ ಜನಪ್ರಿಯತೆ ಗಳಿಸುವಿರಿ. ಅನಿರೀಕ್ಷಿತ ಧನಲಾಭವಾಗಲಿದೆ.