ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (21-01-2024)
ನಿತ್ಯ ನೀತಿ :ಬದುಕು ಎಷ್ಟು ಶ್ರೀಮಂತವಾಗಿದೆ ಅನ್ನೋದಕ್ಕಿಂತ ಎಷ್ಟು ನೆಮ್ಮದಿಯಾಗಿದೆ ಅನ್ನೋದು ಬಹಳ ಮುಖ್ಯ.
ಪಂಚಾಂಗ ಭಾನುವಾರ 21-01-2024
ಶೋಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಪುಷ್ಯ ಮಾಸ / ಶುಕ್ಲ ಪಕ್ಷ / ತಿಥಿ: ಏಕಾದಶಿ / ನಕ್ಷತ್ರ: ರೋಹಿಣಿ / ಯೋಗ: ಶುಕ್ಲ / ಕರಣ: ವಣಿಜ್
ಸೂರ್ಯೋದಯ : ಬೆ.06.46ಸೂರ್ಯಾಸ್ತ : 06.15ರಾಹುಕಾಲ : 4.30-6.00ಯಮಗಂಡ ಕಾಲ : 12.00-1.30ಗುಳಿಕ ಕಾಲ : 3.00-4.30
ರಾಶಿ ಭವಿಷ್ಯಮೇಷ: ಹವಾಮಾನ ವೈಪರೀತ್ಯದಿಂದಾಗಿ ಆರೋಗ್ಯದ ಮೇಲೆ ಪರಿಣಾಮ ಉಂಟಾಗಲಿದೆ.ವೃಷಭ: ಎಲ್ಲ ಕೆಲಸ-ಕಾರ್ಯಗಳು ಶೀಘ್ರಗತಿಯಲ್ಲಿ ಮುಗಿಯಲಿವೆ. ಆಭರಣ ವ್ಯಾಪಾರಿಗಳಿಗೆ ಲಾಭ ಸಿಗಲಿದೆ.ಮಿಥುನ: ಕಡಿಮೆ ಶ್ರಮದಿಂದ ಕೆಲಸ-ಕಾರ್ಯ ಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ.
ಕಟಕ: ನಿಮ್ಮ ಹಣ ಎಲ್ಲೋ ಸಿಕ್ಕಿಹಾಕಿಕೊಂಡಿದ್ದರೆ, ಹಣವನ್ನು ಮರಳಿ ಪಡೆಯಲು ಪ್ರಯತ್ನಿಸಿ.ಸಿಂಹ: ಹೆಜ್ಜೆಹೆಜ್ಜೆಗೂ ಅಡೆತಡೆ ಉಂಟಾಗುವುದ ರಿಂದ ಮಾನಸಿಕ ನೆಮ್ಮದಿ ಹಾಳಾಗಲಿದೆ.ಕನ್ಯಾ: ಅನಗತ್ಯ ವಸ್ತುಗಳ ಖರೀದಿಗಾಗಿ ಹೆಚ್ಚು ಹಣ ಖರ್ಚು ಮಾಡಬೇಕಾಗಬಹುದು.
ತುಲಾ: ಎಲ್ಲರೊಂದಿಗೆ ಸೌಹಾರ್ದಯುತ ಸಂಬಂಧ ಉಳಿಸಿಕೊಳ್ಳಲು ಪ್ರಯತ್ನಿಸಿ. ಕೆಲಸದ ಹೊರೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಲಿದೆ.ವೃಶ್ಚಿಕ: ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಸಮಯಕ್ಕೆ ಸರಿಯಾಗಿ ಔಷಧಿ ತೆಗೆದುಕೊಳ್ಳಬೇಕು.ಧನುಸ್ಸು: ನೀವು ಮಾಡುವ ಕೆಲಸಕ್ಕೆ ಹಿರಿಯರು ಅಥವಾ ಒಡಹುಟ್ಟಿದವರ ಸಹಾಯ ಸಿಗಲಿದೆ.
ಮಕರ: ಉದ್ಯೋಗಿಗಳಿಗೆ ಕಠಿಣ ಪರಿಶ್ರಮದಿಂದ ಉತ್ತಮ ಪ್ರತಿಫಲ ಸಿಗಲಿದೆ.ಕುಂಭ: ಅಧಿಕೃತ ಪ್ರಯಾಣ ಕೈಗೊಳ್ಳುವಿರಿ ಮತ್ತು ಅದರಿಂದ ಪ್ರಯೋಜನ ಸಿಗಲಿದೆ.ಮೀನ: ಮನೆಯಲ್ಲಿ ಸಂತೃಪ್ತಿಯ ವಾತಾವರಣ ಇರಲಿದೆ. ನಿರೀಕ್ಷೆಗೂ ಮೀರಿದ ವರಮಾನ ಬರುವುದು.