ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(25-01-2024)
ನಿತ್ಯ ನೀತಿ :ನಿಮ್ಮ ಜೀವನದಲ್ಲಿ ಏನೇ ಏರುಪೇರಾದರೂ ಆಲೋಚನೆಯೇ ನಿಮ್ಮ ಮೂಲ ಬಂಡವಾಳ ಮತ್ತು ಆಸ್ತಿಯಾಗಿರಬೇಕು.
ಗುರುವಾರ ಪಂಚಾಂಗ : 25-01-2024ಶೋಭಕೃತ್ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಪುಷ್ಯ ಮಾಸ / ಶುಕ್ಲ ಪಕ್ಷ / ತಿಥಿ: ಹುಣ್ಣಿಮೆ / ನಕ್ಷತ್ರ: ಪುನರ್ವಸು / ಯೋಗ: ವಿಷ್ಕಂಭ / ಕರಣ: ವಿಷ್ಟಿಸೂರ್ಯೋದಯ : ಬೆ.06.46ಸೂರ್ಯಾಸ್ತ : 06.17ರಾಹುಕಾಲ : 1.30-3.00ಯಮಗಂಡ ಕಾಲ : 6.00-7.30ಗುಳಿಕ ಕಾಲ : 9.00-10.30
ರಾಶಿಭವಿಷ್ಯ :ಮೇಷ: ಹಣ ಹೇಗೆ ವಿನಿಯೋಗ ಆಗಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆ ಬಹಳ ಮುಖ್ಯ.ವೃಷಭ: ಮನೆ ನಿರ್ಮಾಣ ಕೆಲಸದಲ್ಲಿರುವ ಅಡೆತಡೆಗಳು ಸಹೋದರರು ನೀಡುವ ಸಲಹೆಗಳಿಂದ ದೂರವಾಗಲಿವೆ.ಮಿಥುನ: ಉದ್ಯೋಗದ ಕಡೆಗೆ ಹೆಚ್ಚಿನ ಗಮನ ಹರಿಸಿ. ನಿರೀಕ್ಷೆಗೂ ಮೀರಿ ಖರ್ಚು ಹೆಚ್ಚಾಗಲಿದೆ.
ಕಟಕ: ಹೊಸ ವ್ಯವಹಾರವನ್ನು ಪ್ರಾರಂಭಿಸಿದ್ದರೆ, ಪ್ರಚಾರ ಮಾಡುವ ಬಗ್ಗೆ ಹೆಚ್ಚು ಗಮನ ಹರಿಸಿ.ಸಿಂಹ: ನಿಮ್ಮ ಸ್ವಭಾವದಲ್ಲಿ ಮಹತ್ತರವಾದ ಬದಲಾವಣೆಗಳು ಆಗಲಿವೆ.ಕನ್ಯಾ: ಸಹೋದರರು ಆರ್ಥಿಕ ಸಹಾಯ ಮಾಡುವರು. ಇದರಿಂದ ಆರ್ಥಿಕ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸಲಿದೆ.
ತುಲಾ: ಬೇರೆಯವರು ನಿಮ್ಮೊಂದಿಗೆ ಗೆಳೆತನ ಬೆಳೆಸಲು ಬಯಸುತ್ತಾರೆ. ಜಾಗ್ರತೆ ವಹಿಸಿ. ಖರ್ಚು ಸ್ವಲ್ಪ ಹೆಚ್ಚಾಗಬಹುದು.ವೃಶ್ಚಿಕ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವವರು ಎಚ್ಚರಿಕೆಯಿಂದಿರಿ.ಧನುಸ್ಸು: ಹಿರಿಯರ ಸಕಾಲಿಕ ನೆರವಿನಿಂದ ಎದುರಾಗ ಬಹುದಾದ ವಿಪತ್ತುಗಳು ದೂರವಾಗಲಿವೆ.
ಮಕರ: ಉದ್ಯೋಗಸ್ಥ ಮಹಿಳೆಯರಿಗೆ ಶುಭ ದಿನ. ಕೃಷಿಕರಿಗೆ ಶುಭಫಲ ಸಿಗಲಿದೆ. ಉದ್ಯೋಗದಲ್ಲಿ ಲಾಭ.ಕುಂಭ: ಧಾರ್ಮಿಕ ಕಾರ್ಯಗಳತ್ತ ಗಮನ ಹರಿಸುವಿರಿ. ಕೀರ್ತಿ ನಿಮ್ಮನ್ನು ಅರಸಿ ಬರಲಿದೆ.ಮೀನ: ಕೆಲಸ ಸ್ಥಳದಲ್ಲಿ ಕಿರಿಕಿರಿ ಉಂಟಾಗಿ ಕೆಲಸ ಬಿಡುವ ಮನಸ್ಸು ಕೂಡ ಮಾಡಬಹುದು.
ಬೆಂಗಳೂರಲ್ಲಿ ಮನೆಗೆ ನುಗ್ಗಿ ರೌಡಿಯಭೀಕರ ಕೊಲೆ