ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-01-2024)
ನಿತ್ಯ ನೀತಿ :ಲಾಭವಿದೆ ಎಂದರೆ ಶತ್ರು ಕೂಡ ಮಿತ್ರನಾಗುತ್ತಾನೆ. ನಷ್ಟವಾಗುತ್ತೆ ಅಂತ ಗೊತ್ತಾದರೆ ಮಿತ್ರ ಕೂಡ ಶತ್ರುವಾಗುತ್ತಾನೆ. ಇದೇ ಪ್ರಪಂಚ.
ಪಂಚಾಂಗ ಶುಕ್ರವಾರ 26-01-2024ಶೋಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಪುಷ್ಯ ಮಾಸ / ಕೃಷ್ಣ ಪಕ್ಷ / ತಿಥಿ: ಪ್ರತಿಪದ್ / ನಕ್ಷತ್ರ: ಪುಷ್ಯ / ಯೋಗ: ಪ್ರೀತಿ / ಕರಣ: ಬಾಲವ
ಸೂರ್ಯೋದಯ : ಬೆ.06.46ಸೂರ್ಯಾಸ್ತ : 06.18ರಾಹುಕಾಲ : 10.30-12.00ಯಮಗಂಡ ಕಾಲ : 3.00-4.30ಗುಳಿಕ ಕಾಲ : 7.30-9.00
ರಾಶಿ ಭವಿಷ್ಯಮೇಷ: ಸಾಲ ಮರುಪಾವತಿ ಮಾಡುವಿರಿ. ತೀರ್ಥಕ್ಷೇತ್ರ ದರ್ಶನ ಮಾಡುವಿರಿ.ವೃಷಭ: ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮೊದಲು ಹಿರಿಯರ ಸಲಹೆ ಪಡೆಯಿರಿ.ಮಿಥುನ: ಪೋಷಕರು ಮಕ್ಕಳ ವಿಚಾರದಲ್ಲಿ ಜಾಗ್ರತೆ ವಹಿಸುವುದು ಸೂಕ್ತ.
ಕಟಕ: ನಿಮ್ಮ ಮಾತುಗಳಿಂದ ಕುಟುಂಬದವರು ಮತ್ತು ಹಿತೈಷಿಗಳಿಗೆ ಸಂತೋಷವವಾಗಲಿದೆ.ಸಿಂಹ: ಹೆಜ್ಜೆಹೆಜ್ಜೆಗೂ ಶತ್ರು ಗಳಿಂದ ಅಡೆತಡೆ ಸೇರಿದಂತೆ ಹಲವು ತೊಂದರೆಗಳು ಎದುರಾಗಲಿವೆ.ಕನ್ಯಾ: ಪ್ರಯತ್ನಕ್ಕೆ ಸೂಕ್ತ ಪ್ರತಿಫಲ ದೊರೆಯಲಿದೆ.
ತುಲಾ: ಅನಗತ್ಯ ಖರ್ಚು ಮಾಡುವುದನ್ನು ತಪ್ಪಿಸಿ. ಸ್ತ್ರೀಯರಿಗೆ ಅನುಕೂಲಕರ ಪರಿಸ್ಥಿತಿ ಇರಲಿದೆ.
ವೃಶ್ಚಿಕ: ಶತ್ರುಗಳ ಕಾಟ ಹೆಚ್ಚಾಗಲಿದೆ.ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದೆ.ಧನುಸ್ಸು: ನಂಬಿದ ಜನರಿಂದ ಮೋಸ ಹೋಗುವಿರಿ. ಕೆಲಸ-ಕಾರ್ಯಗಳಿಗೆ ವಿಘ್ನ ಎದುರಾಗಲಿದೆ.ಮಕರ: ಇತರರ ಭಾವನೆಗಳಿಗೆ ಸ್ಪಂದಿಸುವುದರಿಂದ ಅವರಿಂದ ಪ್ರಶಂಸೆ ಪಡೆಯುವಿರಿ.ಕುಂಭ: ಉದ್ಯೋಗದಲ್ಲಿ ಆಸಕ್ತಿ ಉಂಟಾಗಲಿದೆ. ಅನಿರೀಕ್ಷಿತ ಧನಾಗಮನವಾಗಲಿದೆ.ಮೀನ: ರಿಸ್ಕ್ ತೆಗೆದುಕೊಂಡು ಕೆಲಸ ಮಾಡುವ ಪ್ರವೃತ್ತಿಯನ್ನು ನಿಯಂತ್ರಿಸುವುದು ಒಳಿತು.