ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (30-01-2024)
ನಿತ್ಯ ನೀತಿ:ಕಾಯಬೇಕು ಒಳ್ಳೆಯ ದಿನಕ್ಕೆ. ಕುಗ್ಗಬಾರದು ಯಾವುದೇ ಕಾರಣಕ್ಕೆ. ಗೆಲುವು ಒಳ್ಳೆಯತನಕ್ಕೆ. ತಲೆ ಬಾಗಬೇಡ ನೋವಿನ ಆಟಕ್ಕೆ. ಗುರಿಯೇ ರೆಕ್ಕೆಯ ಜೀವನಕ್ಕೆ. ಅಳದಿರು ಹೆದರಿ ಬದುಕಿನ ಪಾಠಕ್ಕೆ.
ಪಂಚಾಂಗ ಮಂಗಳವಾರ 30-01-2024ಶೋಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಪುಷ್ಯ ಮಾಸ / ಕೃಷ್ಣ ಪಕ್ಷ / ತಿಥಿ: ಚತುರ್ಥಿ / ನಕ್ಷತ್ರ: ಉತ್ತರಾಭಾದ್ರ / ಯೋಗ: ಅತಿಗಂಡ / ಕರಣ: ಕೌಲವ
ಸೂರ್ಯೋದಯ ; ಬೆ.06.46ಸೂರ್ಯಾಸ್ತ : 06.20ರಾಹುಕಾಲ : 3.00-4.30ಯಮಗಂಡ ಕಾಲ : 9.00-10.30ಗುಳಿಕ ಕಾಲ : 12.00-1.30
ರಾಶಿ ಭವಿಷ್ಯಮೇಷ: ಸ್ವಂತಿಕೆ ಬಿಟ್ಟು ಸಂದರ್ಭಕ್ಕೆ ತಕ್ಕಂತೆ ತೀರ್ಮಾನ ಕೈಗೊಳ್ಳುವುದು ಅನಿವಾರ್ಯ.ವೃಷಭ: ಕೌಟುಂಬಿಕ ಜೀವನದಲ್ಲಿ ಹೆಚ್ಚು ಜಾಗರೂಕ ರಾಗಿರಬೇಕು. ಮನೆಯವರೊಂದಿಗೆ ಸಮಯ ಕಳೆಯಿರಿ.ಮಿಥುನ: ಚಿಂತನೆಯಿಂದ ವರ್ತಿಸುವ ಮೂಲಕ ಎಲ್ಲರನ್ನೂ ಗೌರವಿಸುವುದು ಒಳಿತು.
ಕಟಕ: ಸ್ತ್ರೀಯರಿಗೆ ತವರು ಮನೆಯಿಂದ ಆಸ್ತಿಯಲ್ಲಿ ಭಾಗ ಬರಬಹುದು.ಆಹಾರದ ಕಡೆ ಗಮನ ನೀಡಿ.ಸಿಂಹ: ಕಚೇರಿ ಕೆಲಸ – ಕಾರ್ಯಗಳಲ್ಲಿ ಉತ್ತಮ ಬದಲಾವಣೆಯಾಗಲಿದೆ.
ಕನ್ಯಾ: ಅನೇಕ ವಿಧದ ಜನರು ನಿಮ್ಮ ಬಳಿ ಆಶ್ರಯಕ್ಕಾಗಿ ಬರುವರು.ತುಲಾ: ತಂದೆಯ ಬೆಂಬಲದೊಂದಿಗೆ, ಭೂಮಿ ಮತ್ತು ಆಸ್ತಿಯ ಲಾಭ ಪಡೆಯಬಹುದು.ವೃಶ್ಚಿಕ: ಮನೋಸ್ಥೈರ್ಯ ಅಧಿಕವಾಗಿರುವುದರಿಂದ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮವಾಗಿ ರ್ಯನಿರ್ವಹಿಸಬಹುದು.
ಧನುಸ್ಸು: ಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮ ಅಥವಾ ಯೋಗ ಮಾಡಬೇಕು.ಮಕರ: ಅತಿಥಿಗಳ ಆಗಮನದಿಂದಾಗಿ ವೆಚ್ಚಗಳು ಇದ್ದಕ್ಕಿದ್ದಂತೆ ಹೆಚ್ಚಾಗುತ್ತವೆ.ಕುಂಭ: ವೈದ್ಯಕೀಯ ವೆಚ್ಚ ಹೆಚ್ಚಾಗುವುದರಿಂದ ಸಾಲ ಮಾಡಬೇಕಾದ ಸಂದರ್ಭಗಳು ಬರಬಹುದು.ಮೀನ: ರಿಯಲ್ ಎಸ್ಟೇಟ್ ಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಉತ್ತಮ ಲಾಭ ಇರುತ್ತದೆ.