ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (07-02-2024)
ನಿತ್ಯ ನೀತಿ :ನಮ್ಮ ಬದುಕು ಇರುವುದು ವರ್ಷಗಳಲ್ಲಿ ಅಲ್ಲ, ಕಾರ್ಯಗಳಲ್ಲಿ. ಉಸಿರಿನಲ್ಲಿ ಅಲ್ಲ, ಚಿಂತನೆಯಲ್ಲಿ. ಗಡಿಯಾರದ ಅಂಕಿಗಳಲ್ಲಿ ಅಲ್ಲ, ಸ್ಪಂದನೆಯಲ್ಲಿ.
ಪಂಚಾಂಗ ಬುಧವಾರ 07-02-2024ಶೋಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಪುಷ್ಯ ಮಾಸ / ಕೃಷ್ಣ ಪಕ್ಷ / ತಿಥಿ: ದ್ವಾದಶಿ / ನಕ್ಷತ್ರ: ಪೂರ್ವಾಷಾಢ / ಯೋಗ: ವಜ್ರ / ಕರಣ: ಗರಜೆ
ಸೂರ್ಯೋದಯ : ಬೆ.06.45ಸೂರ್ಯಾಸ್ತ : 06.23ರಾಹುಕಾಲ : 12.00-1.30ಯಮಗಂಡ ಕಾಲ : 7.30-9.00ಗುಳಿಕ ಕಾಲ : 10.30-12.00
ರಾಶಿ ಭವಿಷ್ಯಮೇಷ: ಮಕ್ಕಳ ಪ್ರಗತಿಯಲ್ಲಿ ಮಿಶ್ರ ಪ್ರತಿಫಲ ಕಾಣಬೇಕಾಗುತ್ತದೆ. ಶ್ರಮ ವಹಿಸಿ ಕೆಲಸ ಮಾಡಿ.ವೃಷಭ: ಬೇರೊಬ್ಬರ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ತಪ್ಪಿಸುವುದು ಒಳಿತು.ಮಿಥುನ: ಅನೇಕ ಬಾರಿ ನಿಮಗಾಗಿ ಸಮಯ ನೀಡುವುದನ್ನೇ ಮರೆತುಹೋಗುತ್ತೀರಿ.
ಕಟಕ: ವಾಹನ ಕೊಳ್ಳಲು ಆಲೋಚನೆ ಮಾಡುವಿರಿ.ಸಿಂಹ: ತಂದೆಯ ಕಠಿಣ ನಡವಳಿಕೆ ಸಿಟ್ಟು ಬರಿಸುತ್ತದೆ.ಕನ್ಯಾ: ಸಾಧ್ಯವಾದಷ್ಟೂ ರಾತ್ರಿ ಪ್ರಯಾಣ ಮಾಡ ಬೇಡಿ.
ತುಲಾ: ಹೊಸ ವ್ಯವಹಾರ ಪ್ರಾರಂಭಿಸಿಲು ಉತ್ತಮ ದಿನ.ವೃಶ್ಚಿಕ: ವಧು-ವರನನ್ನು ಹುಡುಕುತ್ತಿದ್ದಲ್ಲಿ ಸೂಕ್ತ ಸಂಬಂಧ ಸಿಗುವುದು ಕಷ್ಟಸಾಧ್ಯ.ಧನುಸ್ಸು: ದೊಡ್ಡ ದೊಡ್ಡ ಕಾರ್ಯಕ್ರಮ ಆಯೋಜಿಸುವ ಮುನ್ನ ಹಿರಿಯರೊಂದಿಗೆ ಚರ್ಚಿಸಿ.
ಮಕರ: ಉದ್ಯೋಗದಲ್ಲಿ ಬಡ್ತಿ ಮತ್ತು ವೇತನ ಹೆಚ್ಚಳವಾಗುವ ಅವಕಾಶಗಳಿವೆ.ಕುಂಭ: ಯಾರ ಮೇಲೂ ವೈಯಕ್ತಿಕವಾಗಿ ದ್ವೇಷ ಸಾಧಿಸಲು ಹೋಗದಿರಿ. ಕಷ್ಟ ಎದುರಿಸಬೇಕಾಗುತ್ತದೆ.ಮೀನ: ಯುವಕರು ಶಾಶ್ವತ ಕೆಲಸ ಹುಡುಕುವ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಾರೆ.