ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (04-02-2024)
ನಿತ್ಯ ನೀತಿ :ನಾವು ನಮ್ಮ ಕೋಪವನ್ನು ಪ್ರದರ್ಶಿಸುವುದು ತಪ್ಪಲ್ಲ. ಅದೂ ಕೂಡ ಒಂದು ಉತ್ತಮ ಗುಣವೇ. ಆದರೆ ಅದು ಯಾವ ಕಾರಣಕ್ಕೂ ಕ್ರೌರ್ಯಕ್ಕೆ ತಿರುಗದಂತೆ ಎಚ್ಚರ ವಹಿಸಬೇಕು. ಕೋಪ ಯಾವತ್ತೂ ನಮ್ಮ ನಿಯಂತ್ರಣದಲ್ಲಿರಬೇಕು. ಅದು ನಮ್ಮಲ್ಲಿ ಪಶ್ಚಾತ್ತಾಪವನ್ನುಂಟು ಮಾಡಬಾರದು.
ಪಂಚಾಂಗ ಭಾನುವಾರ 04-02-2024ಶೋಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಪುಷ್ಯ ಮಾಸ / ಕೃಷ್ಣ ಪಕ್ಷ / ತಿಥಿ: ನವಮಿ / ನಕ್ಷತ್ರ: ವಿಶಾಖಾ / ಯೋಗ: ವೃದ್ಧಿ / ಕರಣ: ವಣಿಜ್
ಸೂರ್ಯೋದಯ : ಬೆ.06.46ಸೂರ್ಯಾಸ್ತ : 06.22ರಾಹುಕಾಲ : 4.30-6.00ಯಮಗಂಡ ಕಾಲ : 12.00-1.30ಗುಳಿಕ ಕಾಲ : 3.00-4.30
ರಾಶಿ ಭವಿಷ್ಯಮೇಷ: ವ್ಯವಹಾರ ವಿಸ್ತರಣೆಯಿಂದ ಲಾಭ ಸಿಗಲಿದೆ. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ.ವೃಷಭ:ಯಾವುದೇ ವಿಚಾರವಾದರೂ ತೀರ್ಮಾನ ಕೈಗೊಳ್ಳುವ ಮುನ್ನ ಮನೆಯವರೊಂದಿಗೆ ಚರ್ಚಿಸಿ.ಮಿಥುನ: ಉದಾರ ಮನೋಭಾವದಿಂದಾಗಿ ನೆರೆಹೊರೆಯವರ ಗಮನ ಸೆಳೆಯುವಿರಿ.
ಕಟಕ: ಮುಖ್ಯ ಕೆಲಸವೊಂದಕ್ಕೆ ಸಲಹೆ ಪಡೆಯಲು ಗಣ್ಯ ವ್ಯಕ್ತಿಯನ್ನು ಸಂಪರ್ಕಿಸುವಿರಿ.ಸಿಂಹ: ನೂತನ ಯೋಜನೆ ಪ್ರಾರಂಭಿಸಲು ಹಣಕಾಸಿನ ಕೊರತೆ ಇರುವುದಿಲ್ಲ.ಕನ್ಯಾ: ಪೂರ್ವ ನಿಯೋಜಿತ ಕೆಲಸಗಳು ಉತ್ತಮವಾಗಿ ನಡೆಯುವುದರಿಂದನೆಮ್ಮದಿ ಸಿಗಲಿದೆ.
ತುಲಾ: ಹಿರಿಯರ ಮಾತಿ ನಂತೆ ನಡೆದುಕೊಳ್ಳುವುದರಿಂದ ಶುಭ ಫಲ ಸಿಗಲಿದೆ.ವೃಶ್ಚಿಕ: ಮಕ್ಕಳ ಬಗ್ಗೆ ಜವಾಬ್ದಾರಿ ವಹಿಸಿ. ಮಕ್ಕಳಿಗೆ ವಸ್ತುಗಳನ್ನು ಖರೀದಿಸುವಿರಿ.ಧನುಸ್ಸು: ಸಣ್ಣಪುಟ್ಟ ಅಡಚಣೆಗಳು ಕೆಲಸ-ಕಾರ್ಯ ಗಳಿಗೆ ಅಡ್ಡಿಯನ್ನುಂಟುಮಾಡಲಿವೆ.
ಮಕರ: ಹೂವು, ಹಣ್ಣು, ತರಕಾರಿ, ಹಾಲಿನ ವ್ಯಾಪಾರಿಗಳಿಗೆ ಅಧಿಕ ಲಾಭ ಸಿಗಲಿದೆ.ಕುಂಭ: ಮೇಲಧಿಕಾರಿಗಳಿಂದ ಯಾವುದೇ ವಿಷಯವನ್ನು ಮುಚ್ಚಿಡುವ ಪ್ರಯತ್ನ ಮಾಡದಿರಿ.ಮೀನ: ದೇವರ ದಯೆಯಿಂದ ಎಲ್ಲ ಕಾರ್ಯಗಳೂ ನಿರ್ವಿಘ್ನವಾಗಿ ನೆರವೇರುವುವು.