ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (29-09-2024)
' 
ನಿತ್ಯ ನೀತಿ :ಸಮಯಕ್ಕೆ ಸಿಗದ ವಸ್ತು, ಸಮಯಕ್ಕೆ ಆಗದ ಬಂಧು, ಸಮಯವನ್ನು ನೀಡದ ಸಂಬಂಧ ಭಾವನೆಗಳನ್ನು ಅರಿಯದ ಬಂಧುಗಳು… ಬತ್ತಿ ಹೋದ ನದಿಯಲ್ಲಿ ನೀರು ಹುಡುಕಿದ ಹಾಗೆ…
ಪಂಚಾಂಗ : ಭಾನುವಾರ , 29-09-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ / ಕೃಷ್ಣ ಪಕ್ಷ /ತಿಥಿ: ದ್ವಾದಶಿ / ನಕ್ಷತ್ರ: ಮಘಾ / ಯೋಗ: ಸಾಧ್ಯ / ಕರಣ: ಗರಜೆ
ಸೂರ್ಯೋದಯ – ಬೆ.06.09ಸೂರ್ಯಾಸ್ತ – 06.11ರಾಹುಕಾಲ – 4.30-6.00ಯಮಗಂಡ ಕಾಲ – 12.00-1.30ಗುಳಿಕ ಕಾಲ – 3.00-4.30
ರಾಶಿಭವಿಷ್ಯ :ಮೇಷ: ಕಾಲೇಜು ಉಪನ್ಯಾಸಕರಿಗೆ ಅಧಿಕ ಒತ್ತಡ. ಸ್ವಯಂಕೃತ ಅಪರಾಧದಿಂದ ನಷ್ಟ ಸಂಭವಿಸಲಿದೆ.ವೃಷಭ: ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.ಮಿಥುನ: ವಿದೇಶ ಪ್ರಯಾಣಕ್ಕೆ ಅನುಕೂಲ ಒದಗಿ ಬರಲಿದೆ. ಪಿತ್ರಾರ್ಜಿತ ಆಸ್ತಿ ಬರಬೇಕಿದ್ದಲ್ಲಿ ತಡವಾಗಲಿದೆ.
ಕಟಕ: ಹಳೆ ಮಿತ್ರರ ಆಗಮನವಾಗಲಿದೆ. ಉದ್ಯಮಗಳ ಬೆಳವಳಿಗೆಗೆ ಸಿದ್ಧತೆ ನಡೆಯಲಿದೆ.ಸಿಂಹ: ಅಸಾಧ್ಯವಾದ ಅನಗತ್ಯ ಚಿಂತನೆಯಲ್ಲಿ ನಿಮ್ಮ ಶಕ್ತಿ ವ್ಯರ್ಥ ಮಾಡುವ ಬದಲು ಅದನ್ನು ಸರಿಯಾದ ದಿಕ್ಕಿನಲ್ಲಿ ಬಳಸಿಕನ್ಯಾ: ಕೌಟುಂಬಿಕ ಸಮಸ್ಯೆ ಪರಿಹರಿಸಿಕೊಳ್ಳಲು ಉತ್ತಮ ಸಮಯವಾಗಿದೆ.
ತುಲಾ: ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ.ವೃಶ್ಚಿಕ: ವಿವಾಹಿತ ದಂಪತಿ ಸ್ಮರಣೀಯ ಕ್ಷಣಗಳನ್ನು ಕಳೆಯಲು ಸಣ್ಣ ಪ್ರವಾಸಕ್ಕೆ ಹೋಗಬಹುದು.
ಧನುಸ್ಸು: ಮಕ್ಕಳ ನಡವಳಿಕೆಯಿಂದ ಬೇಸರ.
ಮಕರ:ವೈದ್ಯಕೀಯ ವೃತ್ತಿಯಲ್ಲಿ ಕೀರ್ತಿ ಗಳಿಸುವಿರಿ.ಕುಂಭ: ಕೆಲಸದ ಸ್ಥಳದಲ್ಲಿ ಅನುಕೂಲಕರ ಸನ್ನಿವೇಶಗಳನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ.ಮೀನ: ರಕ್ತದೊತ್ತಡದ ಸಮಸ್ಯೆ ಕಾಣಿಸಿ ಕೊಳ್ಳಬಹುದು ಹಾಗೂ ಉಲ್ಬಣಿಸಬಹುದು.