ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (20-02-2024)
ನಿತ್ಯ ನೀತಿ :ದುಡ್ಡು ಎಂದಿಗೂ ಮನುಷ್ಯನನ್ನು ಸುಖಿಯಾಗಿಸದು. ಅದು ಹೆಚ್ಚು ಬಂದಷ್ಟೂ ಹೆಚ್ಚು ಆಸೆಗಳು ಹುಟ್ಟಿಕೊಳ್ಳುತ್ತವೆ.
ಪಂಚಾಂಗ ಮಂಗಳವಾರ 20-02-2024ಶೋಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಶುಕ್ಲ ಪಕ್ಷ / ತಿಥಿ: ಏಕಾದಶಿ / ನಕ್ಷತ್ರ: ಆರಿದ್ರಾ / ಯೋಗ: ಪ್ರೀತಿ / ಕರಣ: ಭವ
ಸೂರ್ಯೋದಯ : ಬೆ.06.40ಸೂರ್ಯಾಸ್ತ : 06.27ರಾಹುಕಾಲ : 3.00-4.30ಯಮಗಂಡ ಕಾಲ : 9.00-10.30ಗುಳಿಕ ಕಾಲ : 12.00-1.30
ರಾಶಿ ಭವಿಷ್ಯಮೇಷ: ವ್ಯಾಪಾರದಲ್ಲಿ ಅನುಕೂಲವಾಗಲಿದೆ. ಸಂಗಾತಿ ಮನೆ ಕಡೆಯಿಂದ ಶುಭ ಸುದ್ದಿ ಬರಲಿದೆ.ವೃಷಭ: ಉದ್ಯೋಗದಲ್ಲಿ ಸಮಸ್ಯೆ ಕಂಡುಬರಲಿದೆ. ಇತರ ರೊಂದಿಗಿನ ಜಗಳದಿಂದಾಗಿ ನೆಮ್ಮದಿ ಇರುವುದಿಲ್ಲ.ಮಿಥುನ: ತಾಳ್ಮೆಯಿಂದ ವರ್ತಿಸಿದರೆ ಸುಲಭವಾಗಿ ಕಾರ್ಯಸಾಧನೆಯಾಗಲಿದೆ.
ಕಟಕ: ನೂತನ ವ್ಯವಹಾರಕ್ಕೆ ಕೈ ಹಾಕಿ ದುಡುಕದಿರಿ. ಆಲೋಚಿಸಿ ತೀರ್ಮಾನ ಕೈಗೊಳ್ಳಿ.ಸಿಂಹ: ಅಪೇಕ್ಷಿತ ಜನರಿಂದ ಕಾರ್ಯಸಾಧನೆಯಾಗಲಿದೆ.ಕನ್ಯಾ: ವ್ಯಾಪಾರದಲ್ಲಿ ನಷ್ಟ ಉಂಟಾದರೂ ಕೆಲವು ಶುಭ ಫಲಗಳನ್ನು ನಿರೀಕ್ಷಿಸಬಹುದು.
ತುಲಾ: ಆಕಸ್ಮಿಕ ಧನಲಾಭವಾಗುವುದು. ಬಂಧು-ಮಿತ್ರರ ಸಹಾಯ ದೊರೆಯಲಿದೆ.ವೃಶ್ಚಿಕ: ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯಲಿವೆ.ಧನುಸ್ಸು: ಉತ್ತಮ ದೈವಬಲವಿದ್ದು, ಎಲ್ಲ ರೀತಿಯ ಅನುಕೂಲಗಳು ದೊರೆಯಲಿವೆ.
ಮಕರ: ದೈನಂದಿನ ಚಟುವಟಿಕೆಗಳಲ್ಲಿ ಅಭಿವೃದ್ಧಿ ಸಿಗಲಿದೆ. ದೂರ ಪ್ರಯಾಣ ಮಾಡುವಿರಿ.ಕುಂಭ: ಬಂಧು-ಮಿತ್ರರ ಸಮಸ್ಯೆ ಮತ್ತು ಹಣಕಾಸಿನ ತೊಂದರೆ ಕಾಡಲಿದೆ.ಮೀನ: ಉದ್ಯೋಗದಲ್ಲಿ ತೊಂದರೆಗಳು ಕಾಣಿಸಿಕೊಳ್ಳಲಿವೆ. ವ್ಯಾಪಾರಿಗಳಿಗೆ ಅಲ್ಪ ಲಾಭ.