ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-03-2024)
ನಿತ್ಯ ನೀತಿ :ಯಾವುದಕ್ಕೂ ಭಯಪಡದಿರು. ನಿನ್ನ ಕರ್ಮ, ನಿನ್ನ ಧರ್ಮ, ನಿನ್ನ ಶ್ರಮ, ಭಗವಂತನ ಮೇಲಿರುವ ನಿನ್ನ ಪ್ರೇಮ ನಿನ್ನನ್ನು ರಕ್ಷಿಸುವುದು. ಇದು ಸತ್ಯ.
ಪಂಚಾಂಗ ಮಂಗಳವಾರ 05-03-2024ಶೋಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಕೃಷ್ಣ ಪಕ್ಷ / ತಿಥಿ: ನವಮಿ / ನಕ್ಷತ್ರ: ಮೂಲಾ / ಯೋಗ: ಸಿದ್ಧಿ / ಕರಣ: ವಣಿಜ್
ಸೂರ್ಯೋದಯ : ಬೆ.06.33ಸೂರ್ಯಾಸ್ತ : 06.29ರಾಹುಕಾಲ : 3.00-4.30ಯಮಗಂಡ ಕಾಲ : 9.00-10.30ಗುಳಿಕ ಕಾಲ : 12.00-1.30
ರಾಶಿ ಭವಿಷ್ಯಮೇಷ: ಸ್ನೇಹಿತರು ನೀವು ಮಾಡುವ ಕೆಲಸದಲ್ಲಿ ಯಶಸ್ಸನ್ನು ಸಾಧಿಸಲು ಸಹಾಯ ಮಾಡುವರು.ವೃಷಭ: ಮಾನಸಿಕ ಧೈರ್ಯ, ಸಾಮಥ್ರ್ಯ ಹೆಚ್ಚಿಸಿ ಕೊಳ್ಳಲು ಧ್ಯಾನ ಮಾಡುವುದು ಒಳಿತು.ಮಿಥುನ: ನೆರೆಹೊರೆಯವರೊಂದಿಗಿನ ಸಂಬಂಧ ಸೌಹಾರ್ದಯುತವಾಗಿರುತ್ತದೆ.
ಕಟಕ: ಸಂಗಾತಿಗೆ ನಿಮ್ಮೊಂದಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಮಾಡಿಕೊಡಿ.ಸಿಂಹ: ಸಹೋದ್ಯೋಗಿ ಗಳೊಂದಿಗೆ ಮಾತುಕತೆ ನಡೆಸುವಾಗ ಪದಗಳನ್ನು ಎಚ್ಚರಿಕೆಯಿಂದ ಬಳಸಿ.ಕನ್ಯಾ: ಅತ್ಯಂತ ಕಷ್ಟಕರವಾದ ಕೆಲಸವನ್ನೂ ಸುಲಭವಾಗಿ ಮಾಡಿ ಮುಗಿಸುವುರಿ.
ತುಲಾ: ಸಂಭಾಷಣೆ ನಡೆಸುವುದರಿಂದ ಉತ್ತಮ ರೀತಿಯ ಸಂಬಂಧಗಳು ರೂಪುಗೊಳ್ಳುತ್ತವೆ.ವೃಶ್ಚಿಕ: ನಿಮ್ಮ ನಡವಳಿಕೆ ಯಲ್ಲಿನ ಬದಲಾವಣೆ ಇತರರಿಗೆ ಚರ್ಚೆಯ ವಿಷಯವಾಗಲಿದೆ.ಧನುಸ್ಸು: ಹೊಸ ಉದ್ಯೋಗಗಳು ಮತ್ತು ಉದ್ಯೋಗ ಬದಲಾವಣೆಗೆ ಇದು ಉತ್ತಮ ದಿನವಾಗಿದೆ.
ಮಕರ: ಹಿರಿಯರು ಹಾಗೂ ಸಜ್ಜನರನ್ನು ಗೌರವಿಸುವಿರಿ. ಉತ್ತಮ ಪ್ರಗತಿ ಸಾಧಿಸುವಿರಿ.ಕುಂಭ: ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡಿ ಅಪಹಾಸ್ಯಕ್ಕ ಈಡಾಗಬೇಡಿ. ಎಚ್ಚರದಿಂದಿರಿ.ಮೀನ: ಶ್ರಮ ಮತ್ತು ಅದೃಷ್ಟ ಎಲ್ಲಾ ರೀತಿಯಲ್ಲೂ ನಿಮಗೆ ಬೆಂಬಲ ನೀಡುತ್ತದೆ.