ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(07-03-2024)
ನಿತ್ಯ ನೀತಿ :ನಮ್ಮ ವಿರುದ್ಧ ಚಕ್ರವ್ಯೂಹ ರಚಿಸುವವರು ಸ್ವತಃ ನಮ್ಮವರೇ ಆಗಿರುತ್ತಾರೆ. ಆ ಯುಗದಲ್ಲೂ ಅದೇ ಸತ್ಯ. ಈ ಯುಗದಲ್ಲೂ ಅದೇ ಸತ್ಯ.
ಪಂಚಾಂಗ : ಗುರುವಾರ, 07-03-2024ಶೋಭಕೃತ್ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಕೃಷ್ಣ ಪಕ್ಷ / ತಿಥಿ: ದ್ವಾದಶಿ / ನಕ್ಷತ್ರ: ಉತ್ತರಾಷಾಢ / ಯೋಗ: ವರೀಯಾನ್ / ಕರಣ: ಕೌಲವಸೂರ್ಯೋದಯ : ಬೆ.06.32ಸೂರ್ಯಾಸ್ತ : 06.29ರಾಹುಕಾಲ : 1.30-3.00ಯಮಗಂಡ ಕಾಲ : 6.00-7.30ಗುಳಿಕ ಕಾಲ : 9.00-10.30
ಮೇಷ: ಅನವಶ್ಯಕ ಗೊಂದಲಗಳನ್ನು ಮೈಮೇಲೆ ಎಳದುಕೊಳ್ಳದಿರುವುದು ಒಳಿತು.ವೃಷಭ: ಒತ್ತಡದ ಜೀವನದಿಂದ ಹೊರಬರುವಿರಿ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ.
ಮಿಥುನ: ಕುಟುಂಬದಲ್ಲಿ ಪರಿಸ್ಥಿತಿಗಳು ಏರಿಳಿತ ಗಳಿಂದ ಕೂಡಿರುತ್ತವೆ.ಕಟಕ: ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಒಳಿತು. ಸಂಗಾತಿಯೊಂದಿಗೆ ಪ್ರವಾಸ ಕೈಗೊಳ್ಳುವಿರಿ.ಸಿಂಹ: ನೀವು ಮಾಡುವ ಒಳ್ಳೆಯ ಕಾರ್ಯಗಳು ನಿಮ್ಮ ಕುಟುಂಬದ ಹಿರಿಮೆ ಹೆಚ್ಚಿಸುತ್ತದೆ.
ಕನ್ಯಾ: ಖರ್ಚುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅಗತ್ಯವಾಗಿರುತ್ತದೆ.ತುಲಾ: ಹಿರಿಯ ಸಹೋದರ ಮತ್ತು ಸಹೋದರಿಯ ರೊಂದಿಗಿನ ಸಂಬಂಧವು ಬಲವಾಗಿರುತ್ತದೆ.ವೃಶ್ಚಿಕ: ಅಗತ್ಯವಿರುವ ವಸ್ತುಗಳನ್ನು ಖರೀದಿಸು ವುದು ಒಳಿತು. ಸಿಕ್ಕಾಪಟ್ಟೆ ಖರ್ಚು ಮಾಡದಿರಿ.
ಧನುಸ್ಸು: ವ್ಯವಹಾರದಲ್ಲಿ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮಥ್ರ್ಯವನ್ನು ಹೊಂದುತ್ತೀರಿ.ಮಕರ: ತಲೆನೋವು, ಮೊಣಕಾಲು ನೋವು ಇತ್ಯಾದಿಗಳಿಂದ ತೊಂದರೆಗೆಒಳಗಾಗಬಹುದು.ಕುಂಭ: ವಾಹನಗಳು ಮತ್ತು ಯಂತ್ರೋಪಕರಣ ಗಳಿಂದ ಗಾಯವಾಗುವ ಸಂಭವವಿದೆ, ಎಚ್ಚರವಿರಲಿ.ಮೀನ: ಕೆಲವು ದಿನಗಳಿಂದ ಅನುಭವಿಸುತ್ತಿದ್ದ ಸಂಕಷ್ಟಗಳಿಗೆ ಮುಕ್ತಿ ದೊರೆಯಲಿದೆ.