ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-03-2024)
ನಿತ್ಯ ನೀತಿ :ಆಶಾಪರನಾದ ಕಾರ್ಯದಕ್ಷನನ್ನು ಮೋಸಗೊಳಿಸುವುದು ಸುಲಭ.
ಪಂಚಾಂಗ : ಶುಕ್ರವಾರ , 15-03-2024ಶೋಭಕೃತ್ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಶುಕ್ಲ ಪಕ್ಷ / ತಿಥಿ: ಷಷ್ಠಿ / ನಕ್ಷತ್ರ: ಕೃತ್ತಿಕಾ / ಯೋಗ: ವಿಷ್ಕಂಭ / ಕರಣ: ಕೌಲವಸೂರ್ಯೋದಯ : ಬೆ.06.27ಸೂರ್ಯಾಸ್ತ : 06.30ರಾಹುಕಾಲ : 10.30-12.00ಯಮಗಂಡ ಕಾಲ : 3.00-4.30ಗುಳಿಕ ಕಾಲ : 7.30-9.00
ಇಂದಿನ ರಾಶಿಭವಿಷ್ಯಮೇಷ: ಸಣ್ಣ ಮಾತಿನಿಂದ ಜಗಳ ಪ್ರಾರಂಭವಾಗಲಿದೆ. ಎಚ್ಚರಿಕೆಯಿಂದಿರಿ.ವೃಷಭ: ಅದೃಷ್ಟ ನಿಮ್ಮೆಡೆಗಿದ್ದರೂ ಎಲ್ಲ ಕಾರ್ಯಗಳನ್ನೂ ಎಚ್ಚರಿಕೆಯಿಂದ ನಿರ್ವಹಿಸಿ.ಮಿಥುನ: ನೀವು ಹಿಂದೆ ಮಾಡಿದ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಶತ್ರುಗಳ ಕಾಟ ತಪ್ಪಲಿದೆ.
ಕಟಕ: ಸಂದಿಗ್ಧ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಲು ಸಿದ್ಧರಾಗಿರುವುದು ಸೂಕ್ತ.ಸಿಂಹ: ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳ ಲಿದ್ದು, ಅದಕ್ಕೆ ಕಾರಣ ತಿಳಿದುಕೊಳ್ಳುವುದು ಕಷ್ಟವಾಗಲಿದೆ.ಕನ್ಯಾ: ಕಣ್ಣಿನ ತೊಂದರೆ ಇರುವುದರಿಂದ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಿ.
ತುಲಾ: ಮಾತಿನಿಂದ ಕಾರ್ಯ ಸಾಸುವ ನಿಮ್ಮ ಗುಣದಿಂದ ಅನುಕೂಲಕರ ವಾತಾವರಣ ನಿರ್ಮಾಣವಾಗುವುದು.ವೃಶ್ಚಿಕ: ಸ್ನೇಹಿತನಿಗೆ ಸಹಾಯ ಮಾಡುವಿರಿ. ಸಂಗಾತಿಯೊಂದಿಗೆ ಜಗಳವಾಡುವ ಸಾಧ್ಯತೆಯಿದೆ.ಧನುಸ್ಸು: ದೀರ್ಘಕಾಲದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ. ಮಕ್ಕಳ ಆರೋಗ್ಯದ ಬಗ್ಗೆ ಗಮನವಿರಲಿ.ಮಕರ: ಆರೋಗ್ಯದ ವಿಷಯದಲ್ಲಿ ಜಾಗರೂಕ ರಾಗಿರುವುದು ಬಹಳ ಒಳ್ಳೆಯದು.
ಕುಂಭ: ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಯಶಸ್ಸು ಪಡೆಯಲು ಹೆಚ್ಚು ಶ್ರಮ ವಹಿಸಬೇಕಾಗುತ್ತದೆ.ಮೀನ: ಅಜೀರ್ಣ, ವಾಯು, ತಲೆನೋವು, ಕೀಲುನೋವಿನಂತಹ ಆರೋಗ್ಯ ಸಮಸ್ಯೆ ಕಾಡಲಿವೆ.