ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (16-03-2024)
ನಿತ್ಯ ನೀತಿ :ಲೋಕದಲ್ಲಿ ಧರ್ಮವೇ ಶ್ರೇಷ್ಠವಾದದ್ದು. ಧರ್ಮದಲ್ಲಿ ಸತ್ಯವು ನೆಲೆಸಿದೆ. ಪಿತೃವಾಕ್ಯ ಪರಿಪಾಲನವು ಧರ್ಮವನ್ನಾಶ್ರಯಿಸಿದೆ.
ಪಂಚಾಂಗ : ಶನಿವಾರ, 16-03-2024ಶೋಭಕೃತ್ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಶುಕ್ಲ ಪಕ್ಷ / ತಿಥಿ: ಸಪ್ತಮಿ / ನಕ್ಷತ್ರ: ರೋಹಿಣಿ / ಯೋಗ: ಪ್ರೀತಿ / ಕರಣ: ಗರಜೆ
ಸೂರ್ಯೋದಯ : ಬೆ.06.26ಸೂರ್ಯಾಸ್ತ : 06.30ರಾಹುಕಾಲ : 9.00-10.30ಯಮಗಂಡ ಕಾಲ : 1.30-3.00ಗುಳಿಕ ಕಾಲ : 6.00-7.30
ಇಂದಿನ ರಾಶಿಭವಿಷ್ಯ :ಮೇಷ: ಅಮೂಲ್ಯ ವಸ್ತುಗಳ ಖರೀದಿಗೆ ಇಂದು ಬಹಳ ಉತ್ತಮವಾದ ದಿನ. ದೂರ ಪ್ರಯಾಣ ಮಾಡುವಿರಿ.ವೃಷಭ: ವಿದ್ಯಾಭ್ಯಾಸದಲ್ಲಿ ಅನಿರೀಕ್ಷಿತ ತಿರುವು ಪಡೆಯುವಿರಿ. ಹಳೆ ಗೆಳೆಯರ ಭೇಟಿ.ಮಿಥುನ: ವ್ಯಾಪಾರಿಗಳಿಗೆ ಅನುಕೂಲಕರ ದಿನ. ಗೃಹ ನಿರ್ಮಾಣ ಮಾಡಲು ಯೋಚಿಸುವಿರಿ.
ಕಟಕ: ಹಿರಿಯರೊಂದಿಗೆ ಮನಸ್ತಾಪ ಉಂಟಾಗಬಹುದು. ಸಹನೆಯಿಂದ ವರ್ತಿಸಿ.ಸಿಂಹ: ವಿದ್ಯಾರ್ಥಿಗಳು ಹೊಸದಾಗಿ ಕೋರ್ಸ್ ಸೇರುವ ಮುನ್ನ ಅಳೆದು, ತೂಗಿ ಮುಂದೆ ಹೆಜ್ಜೆ ಇಡಿ.ತುಲಾ: ಧಾರ್ಮಿಕ ಕ್ಷೇತ್ರದಲ್ಲಿರುವವರಿಗೆ ದ್ರವ್ಯಲಾಭ. ಪರಿಶ್ರಮದಿಂದ ಅಭಿವೃದ್ಧಿ.
ವೃಶ್ಚಿಕ: ಉದ್ಯೋಗ ಬದಲಾವಣೆಗೆ ಮನಸ್ಸು ಮಾಡು ವಿರಿ. ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ.ಧನುಸ್ಸು: ಉದ್ಯೋಗ ಸ್ಥಳದಲ್ಲಿ ಕಿರಿಕಿರಿಯಾಗಲಿದೆ. ಶತ್ರುಗಳ ಕಾಟ ಹೆಚ್ಚಾಗಬಹುದು.
ಮಕರ: ಹೊಟೇಲ್ ವ್ಯಾಪಾರಿಗಳಿಗೆ ಸಾಧಾರಣ ಲಾಭ. ಆರೋಗ್ಯದಲ್ಲಿ ಏರುಪೇರಾಗಲಿದೆ.ಕುಂಭ: ಎಲ್ಲಾ ವಿಚಾರಗಳನ್ನು ಸಾವಧಾನದಿಂದ ಬಗೆಹರಿಸಿಕೊಳ್ಳುವುದು ಒಳ್ಳೆಯದು.ಮೀನ: ಕಷ್ಟದ ಕೆಲಸವನ್ನು ಇಷ್ಟದಿಂದ ಮಾಡಿ. ಮನಸ್ಸು ಸಮಾಧಾನದಿಂದಿರುತ್ತದೆ.