ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(17-03-2024)
ನಿತ್ಯ ನೀತಿ :ನಾಶವಾಗುವ ಆಸೆಗಳುಳ್ಳ ಜೀವಿಗಳು ಹಣದಿಂದ ಏನು ತಾನೇ ಮಾಡಿಯಾರು? ಯಾವುದಕ್ಕಾಗಿ ಹಣವನ್ನು ಬಯಸುವರೋ ಆ ಶರೀರವೇ ನಶ್ವರವಾದುದು.
ಪಂಚಾಂಗ : ಶನಿವಾರ , 16-03-2024ಶೋಭಕೃತ್‌ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಶುಕ್ಲ ಪಕ್ಷತಿಥಿ: ಸಪ್ತಮಿ / ನಕ್ಷತ್ರ: ರೋಹಿಣಿ / ಯೋಗ: ಪ್ರೀತಿ / ಕರಣ: ಗರಜೆ
ಸೂರ್ಯೋದಯ :06.26ಸೂರ್ಯಾಸ್ತ : 06.30ರಾಹುಕಾಲ : 9.00-10.30ಯಮಗಂಡ ಕಾಲ : 1.30-3.00ಗುಳಿಕ ಕಾಲ : 6.00-7.30
ರಾಶಿಭವಿಷ್ಯಮೇಷ: ಬ್ಯಾಂಕ್ ನೌಕರರಿಗೆ ಕೆಲಸದ ಒತ್ತಡ ಹೆಚ್ಚಾಗಿರು ತ್ತದೆ. ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸದಿರಿ.ವೃಷಭ: ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ ಸಾಧಿಸುವಿರಿ. ಬದುಕಿನಲ್ಲಿ ತಿರುವು ಪಡೆಯುವಿರಿ.ಮಿಥುನ: ನಿಮ್ಮ ವರ್ಚಸ್ಸಿನ ಪ್ರಭಾವದಿಂದ ವಿನೂತನ ವಾದ ಅವಕಾಶ ಗಳು ದೊರೆಯಲಿವೆ.
ಕಟಕ: ಶತ್ರುಗಳನ್ನು ಜಯಿಸುವಿರಿ. ನಿಮ್ಮ ಪ್ರತಿಭೆಗೆ ಸೂಕ್ತ ಮನ್ನಣೆ ಸಿಗಲಿದೆ.ಸಿಂಹ: ಶ್ರಮ ಹೆಚ್ಚಿದ್ದರೂ ದುಡಿಮೆ ಲಾಭದಾಯಕ ವಾಗಿರುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.ಕನ್ಯಾ: ಹಿಂದೆ ನೀವು ಪಾಡಿದ್ದ ಪ್ರಯತ್ನಗಳು ಫಲ ನೀಡುವ ಸಾಧ್ಯತೆಗಳಿವೆ.
ತುಲಾ: ಗಣ್ಯ ವ್ಯಕ್ತಿಗಳನ್ನು ಸಂಪರ್ಕಿಸುವಿರಿ. ತಾಯಿಯ ಆರೋಗ್ಯದಲ್ಲಿ ಚೇತರಿಕೆ.ವೃಶ್ಚಿಕ: ಉನ್ನತ ಅಧಿಕಾರಿ ಭೇಟಿಗಾಗಿ ದಿನವಿಡೀ ಓಡಾಡಬೇಕಾದ ಪರಿಸ್ಥಿತಿ ಎದುರಾಗಲಿದೆ.ಧನುಸ್ಸು: ಯಾರದ್ದೋ ಮಾತು ಕೇಳಿ ನಿಮ್ಮ ಅಮೂಲ್ಯ ಸಮಯ ಹಾಳುಮಾಡಿಕೊಳ್ಳದಿರಿ.
ಮಕರ: ಮಕ್ಕಳಿಂದ ಸಂತೋಷ ಉಂಟಾಗುವುದು. ಆರೋಗ್ಯದ ಕಡೆ ಗಮನ ಹರಿಸಿ.ಕುಂಭ: ಕಣ್ಣಿನ ದೃಷ್ಟಿಯಲ್ಲಿ ಬದಲಾವಣೆ ಯಾಗುವುದರಿಂದ ವೈದ್ಯರನ್ನು ಭೇಟಿ ಮಾಡಿ.ಮೀನ: ನಕಾರಾತ್ಮಕವಾಗಿ ಮಾತನಾಡುವ ಜನರಿಂದ ದೂರವಿರುವುದು ಬಹಳ ಒಳ್ಳೆಯದು.