ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (21-03-2024)
ನಿತ್ಯ ನೀತಿ :ದೊಡ್ಡ ದೊಡ್ಡ ಅವಕಾಶಗಳಿಗೆ ಕಾದು ಬಂದ ಸಣ್ಣ ಅವಕಾಶಗಳನ್ನು ಅಲಕ್ಷಿಸುವುದು ಸರಿಯಲ್ಲ. ಅವುಗಳನ್ನೇ ಬಳಸಿ ಬೆಳೆಸಿಕೊಳ್ಳುವತ್ತ ಗಮನ ಹರಿಸೋಣ.
ಪಂಚಾಂಗ : 21-03-2024, ಗುರುವಾರಶೋಭಕೃತ್ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಶುಕ್ಲ ಪಕ್ಷ / ತಿಥಿ: ದ್ವಾದಶಿ / ನಕ್ಷತ್ರ: ಆಶ್ಲೇಷಾ / ಯೋಗ: ಸುಕರ್ಮಾ / ಕರಣ: ಭವಸೂರ್ಯೋದಯ : ಬೆ.06.23ಸೂರ್ಯಾಸ್ತ : 06.31ರಾಹುಕಾಲ : 1.30-3.00ಯಮಗಂಡ ಕಾಲ : 6.00-7.30ಗುಳಿಕ ಕಾಲ : 9.00-10.30
ರಾಶಿಭವಿಷ್ಯ :ಮೇಷ: ಅನ್ಯರಿಗೆ ಉಪಕಾರ ಮಾಡುವಿರಿ.ವೃಷಭ: ಮಕ್ಕಳಿಂದ ಸಂತಸ ಸಿಗಲಿದೆ.ಮಿಥುನ: ಉದ್ಯೋಗದಲ್ಲಿ ಬಡ್ತಿ ಮತ್ತು ವೇತನ ಹೆಚ್ಚಳವಾಗುವ ಅವಕಾಶಗಳಿವೆ.
ಕಟಕ: ಅಮೂಲ್ಯ ವಸ್ತುವಿನ ಕಳ್ಳತನವಾಗಲಿದೆ.ಸಿಂಹ: ಪತ್ನಿ ಸಹಕಾರದಿಂದ ಕೆಲಸ-ಕಾರ್ಯಗಳು ಸುಗಮ ವಾಗಿ ನೆರವೇರಲಿವೆ.ಕನ್ಯಾ:ಅಂದುಕೊಂಡಿದ್ದ ಕೆಲಸಗಳು ಉತ್ತಮವಾಗಿ ನೆರವೇರುವುದರಿಂದ ನೆಮ್ಮದಿ ಸಿಗಲಿದೆ.
ತುಲಾ: ಹಣದ ಕೊರತೆ ಇರುವುದಿಲ್ಲ.ವೃಶ್ಚಿಕ: ಬುದ್ಧಿಹೀನರಾಗಿ ವರ್ತಿಸುವಿರಿ. ಉಪನ್ಯಾಸಕ ವೃತ್ತಿಯವರಿಗೆ ನಷ್ಟ.ಧನುಸ್ಸು: ಹೊಸ ಜನರ ಸಂಪರ್ಕ ಮಾಡಿಕೊಳ್ಳುವ ಅಭ್ಯಾಸವನ್ನು ರೂಢಿಸಿಕೊಳ್ಳಿ.
ಮಕರ: ಅಜೀರ್ಣ ಮತ್ತು ಉದರಕ್ಕೆ ಸಂಬಂಧಿಸಿದ ಅನಾರೋಗ್ಯ ಎದುರಾಗಲಿದೆ.ಕುಂಭ: ಜವಾಬ್ದಾರಿ ಸ್ವೀಕರಿಸುವ ಮೊದಲು ಅದನ್ನು ನಿಭಾಯಿಸುವ ಬಗ್ಗೆ ಯೋಚಿಸಿ.ಮೀನ: ಕಷ್ಟದ ಪರಿಸ್ಥಿತಿಯಲ್ಲಿ ಜನಬಲದ ಕೊರತೆಯಾದರೂ ಸ್ನೇಹಿತರ ಸಹಕಾರ ಸಿಗಲಿದೆ.