ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(30-03-2024)
ನಿತ್ಯ ನೀತಿ :ಸಮಸ್ಯೆಗೆ ನಿಮ್ಮನ್ನು ಸೋಲಿಸುವ ಅವಕಾಶವನ್ನು ಯಾವುದೇ ಕಾರಣಕ್ಕೂ ಕೊಡಬೇಡಿ.
ಪಂಚಾಂಗ : ಶನಿವಾರ, 30-03-2024ಶೋಭಕೃತ್ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಕೃಷ್ಣ ಪಕ್ಷ / ತಿಥಿ: ಪಂಚಮಿ / ನಕ್ಷತ್ರ: ಅನುರಾಧಾ / ಯೋಗ: ಸಿದ್ಧಿ / ಕರಣ: ಕೌಲವ
ಸೂರ್ಯೋದಯ : ಬೆ.06.17ಸೂರ್ಯಾಸ್ತ : 06.31ರಾಹುಕಾಲ ; 9.00-10.30ಯಮಗಂಡ ಕಾಲ: 1.30-3.00ಗುಳಿಕ ಕಾಲ : 6.00-7.30
ರಾಶಿಭವಿಷ್ಯಮೇಷ: ನೀವು ಕಂಡ ಕನಸುಗಳಿಗೆ ಹಿರಿಯರು, ಹಿತೈಷಿಗಳ ಬೆಂಬಲ ಸಿಗಲಿದೆ.ವೃಷಭ: ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ ಕಾಣು ವುದು. ರಾಜಕೀಯ ಕ್ಷೇತ್ರದಲ್ಲಿ ಮುನ್ನಡೆ ಸಾಸುವಿರಿ.ಮಿಥುನ: ಎಲ್ಲಾ ವಿಚಾರಗಳನ್ನು ಸಾವಧಾನದಿಂದ ಬಗೆಹರಿಸಿಕೊಳ್ಳುವುದು ಬಹಳ ಉತ್ತಮ.
ಕಟಕ: ಸಮಾಜದಲ್ಲಿ ಗೌರವ ಸಿಗಲಿದೆ. ಅಮೂಲ್ಯ ವಸ್ತುಗಳನ್ನು ಖರೀದಿಸುವುದರಿಂದ ಸಂತಸ ಪಡುವಿರಿ.ಸಿಂಹ: ಆರೋಗ್ಯದಲ್ಲಿ ಏರುಪೇರಾಗಲಿದೆ. ವೈದ್ಯರ ಸಲಹೆ ಪಡೆಯುವುದು ಒಳಿತು.ಕನ್ಯಾ: ಪ್ರಾಣಮಿತ್ರರರ ಸಹಕಾರದಿಂದ ಜೀವನದಲ್ಲಿ ಉನ್ನತ ಸ್ಥಾನ ಪಡೆಯುವಿರಿ.
ತುಲಾ: ಉದ್ಯೋಗ ನಿಮಿತ್ತ ಪ್ರಯಾಣ ಮಾಡು ವಿರಿ. ಆರೋಗ್ಯ ಸಮಸ್ಯೆಗೆ ವೈದ್ಯರನ್ನು ಭೇಟಿ ಮಾಡಿ.ವೃಶ್ಚಿಕ: ಉನ್ನತ ಅಧಿಕಾರಿಗಳೊಂದಿಗೆ ಕಲಹ ಉಂಟಾಗಲಿದೆ. ಮನೆಯಲ್ಲಿ ಅಶಾಂತಿ ವಾತಾವರಣ.ಧನುಸ್ಸು: ಉದ್ಯೋಗ ಸ್ಥಳದಲ್ಲಿ ಶತ್ರುಗಳ ಕಾಟ. ಬಂಧುಗಳ ನಡುವೆ ವಿರಸ ಉಂಟಾಗಲಿದೆ.
ಮಕರ: ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಬಗ್ಗೆ ಗಮನ ಹರಿಸಿ. ಕೆಲಸಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.ಕುಂಭ: ಉದ್ಯೋಗ ಬದಲಾವಣೆಗೆ ಮನಸ್ಸು ಮಾಡು ವಿರಿ. ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ.ಮೀನ: ಹೈನುಗಾರಿಕೆಯಲ್ಲಿ ನಷ್ಟ ಸಂಭವಿಸಲಿದೆ. ವಾಹನ ಚಾಲಕರು ಎಚ್ಚರಿಕೆಯಿಂದಿರಿ.