ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(31-03-2024)
ನಿತ್ಯ ನೀತಿ :ಪ್ರತಿಯೊಂದು ನೋವು ಒಂದು ಪಾಠವನ್ನು ಕಲಿಸುತ್ತದೆ. ಪ್ರತಿಯೊಂದು ಪಾಠ ವ್ಯಕ್ತಿಯನ್ನು ಬದಲಿಸುತ್ತದೆ.
ಪಂಚಾಂಗ : ಭಾನುವಾರ, 31-03-2024ಶೋಭಕೃತ್ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಕೃಷ್ಣ ಪಕ್ಷ / ತಿಥಿ: ಷಷ್ಠಿ / ನಕ್ಷತ್ರ: ಜ್ಯೇಷ್ಠ / ಯೋಗ: ವ್ಯತೀಪಾತ /ಕರಣ: ಗರಜೆ
ಸೂರ್ಯೋದಯ : ಬೆ.06.16ಸೂರ್ಯಾಸ್ತ : 06.31ರಾಹುಕಾಲ : 4.30-6.00ಯಮಗಂಡ ಕಾಲ : 12.00-1.30ಗುಳಿಕ ಕಾಲ : 3.00-4.30
ರಾಶಿಭವಿಷ್ಯ :ಮೇಷ: ಧನಹಾನಿಯಾಗುವ ಸಾಧ್ಯತೆ ಇದೆ. ಭೂ ವ್ಯವಹಾರದಲ್ಲಿ ಕಲಹ ಉಂಟಾಗಲಿದೆ.ವೃಷಭ: ಸಗಟು ವ್ಯಾಪಾರಿಗಳಿಗೆ ನಷ್ಟ. ಆಧ್ಯಾತ್ಮಿಕ ವಿಚಾರದಲ್ಲಿ ಆಸಕ್ತಿ ಹೆಚ್ಚಾಗಲಿದೆ.ಮಿಥುನ: ಹೊಸ ಜವಾಬ್ದಾರಿ ತೆಗೆದುಕೊಳ್ಳುವ ಮುನ್ನ ಯೋಚಿಸುವುದು ಸೂಕ್ತ.
ಕಟಕ: ವ್ಯಾಪಾರದಲ್ಲಿ ನಷ್ಟ ಉಂಟಾದರೂ ಕೆಲವು ಶುಭ ಫಲಗಳನ್ನು ನಿರೀಕ್ಷಿಸಬಹುದು.ಸಿಂಹ: ಅಪೇಕ್ಷಿತ ಜನರಿಂದ ಕಾರ್ಯಸಾಧನೆಯಾಗಲಿದೆ.ಕನ್ಯಾ: ತಾಳ್ಮೆಯಿಂದ ವರ್ತಿಸಿದರೆ ಸುಲಭವಾಗಿ ಕಾರ್ಯಸಾಧನೆಯಾಗಲಿದೆ.
ತುಲಾ: ಆಕಸ್ಮಿಕ ಧನಲಾಭವಾಗುವುದು. ಬಂಧು-ಮಿತ್ರರ ಸಹಾಯ ದೊರೆಯಲಿದೆ.ವೃಶ್ಚಿಕ: ಧನಾತ್ಮಕ ಚಿಂತನೆಗಳಿಂದ ಯಶಸ್ಸು ಸಿಗಲಿದೆ. ಖಾಸಗಿ ನೌಕರರಿಗೆ ಉತ್ತಮ ದಿನ.ಧನುಸ್ಸು: ನೂತನ ವ್ಯವಹಾರಕ್ಕೆ ಕೈ ಹಾಕಿ ದುಡುಕದಿರಿ. ಆಲೋಚಿಸಿ ತೀರ್ಮಾನ ಕೈಗೊಳ್ಳಿ.
ಮಕರ: ದೈನಂದಿನ ಚಟುವಟಿಕೆಗಳಲ್ಲಿ ಅಭಿವೃದ್ಧಿ ಸಿಗಲಿದೆ. ದೂರ ಪ್ರಯಾಣ ಮಾಡುವಿರಿ.ಕುಂಭ: ಬಂಧು-ಮಿತ್ರರ ಸಮಸ್ಯೆ ಮತ್ತು ಹಣಕಾಸಿನ ತೊಂದರೆ ಕಾಡಲಿದೆ.ಮೀನ: ಉತ್ತಮ ದೈವಬಲವಿದ್ದು, ಎಲ್ಲ ರೀತಿಯ ಅನುಕೂಲಗಳು ದೊರೆಯಲಿವೆ.