ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ
ನಿತ್ಯ ನೀತಿ :ನಾಲಗೆಯ ರುಚಿ ಬಿಟ್ಟರೆ ಶರೀರಕ್ಕೆ ಲಾಭ. ವಾದ-ವಿವಾದಗಳನ್ನು ಬಿಟ್ಟರೆ ಸಂಬಂಧಗಳಿಗೆ ಲಾಭ. ವ್ಯರ್ಥ ಚಿಂತೆಗಳನ್ನು ಬಿಟ್ಟರೆ ಇಡೀ ಜೀವನಕ್ಕೇ ಲಾಭ.
ಪಂಚಾಂಗ : ಮಂಗಳವಾರ, 09-04-2024ಕ್ರೋನಾಮ ಸಂವತ್ಸರ / ಉತ್ತರಾಯಣ / ವಸಂತÀ ಋತು / ಚೈತ್ರ ಮಾಸ / ಶುಕ್ಲ ಪಕ್ಷತಿಥಿ: ಪ್ರತಿಪದ್ / ನಕ್ಷತ್ರ: ರೇವತಿ / ಯೋಗ: ವೈಧೃತಿ / ಕರಣ: ಕಿಂಸ್ತುಘ್ನ ಸೂರ್ಯೋದಯ : ಬೆ.06.11ಸೂರ್ಯಾಸ್ತ : 06.32ರಾಹುಕಾಲ : 3.00-4.30ಯಮಗಂಡ ಕಾಲ : 9.00-10.30ಗುಳಿಕ ಕಾಲ : 12.00-1.30
ರಾಶಿಭವಿಷ್ಯ:ಮೇಷ: ವಿದ್ಯಾರ್ಥಿಗಳು ಏಕಾಗ್ರತೆ ಕಾಯ್ದುಕೊಳ್ಳಲು ಹೆಚ್ಚಿನ ಪರಿಶ್ರಮ ವಹಿಸಬೇಕಾಗುತ್ತದೆ.ವೃಷಭ: ವಿಪರೀತ ಕೆಲಸದಿಂದಾಗಿ ದೇಹಾಲಸ್ಯ ಉಂಟಾಗುವುದರಿಂದ ವಿಶ್ರಾಂತಿ ಬಯಸುವಿರಿ.ಮಿಥುನ: ರಾಜಕೀಯ ಭವಿಷ್ಯದ ಬಗ್ಗೆ ಪ್ರಭಾವಿ ರಾಜಕಾರಣಿಯೊಂದಿಗೆ ಮಾತುಕತೆ ನಡೆಸುವಿರಿ.
ಕಟಕ: ಎಲ್ಲಾ ವಿಚಾರಗಳನ್ನು ಸಾವಧಾನದಿಂದ ಬಗೆಹರಿಸಿಕೊಳ್ಳುವುದು ಒಳ್ಳೆಯದು.ಸಿಂಹ: ಹೊಸ ಹುದ್ದೆಯಲ್ಲಿ ಗೌರವ, ಸಂತೋಷ, ಹೊಸ ರೀತಿಯ ಅನುಭವ ಸಿಗಲಿದೆ.ಕನ್ಯಾ: ಕುಟುಂಬದ ಅಗತ್ಯ ಗಳನ್ನು ಪೂರೈಸುವುದರಲ್ಲೇ ಹೆಚ್ಚು ಸಮಯ ಕಳೆಯುವಿರಿ.
ತುಲಾ: ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮೊದಲು ಹಿರಿಯರ ಸಲಹೆ ಪಡೆಯಿರಿ.ವೃಶ್ಚಿಕ: ಪ್ರತಿಯೊಂದು ಕೆಲಸವನ್ನು ಎಚ್ಚರಿಕೆ ಮತ್ತು ಪ್ರಾಮಾಣಿಕತೆಯಿಂದ ಮಾಡಿದರೆ ಒಳಿತು.ಧನುಸ್ಸು: ಜವಾಬ್ದಾರಿಗಳನ್ನು ಪೂರೈಸಿ. ಖಂಡಿತವಾಗಿಯೂ ಉನ್ನತ ಮಟ್ಟಕ್ಕೆ ಏರುವಿರಿ.
ಮಕರ: ಕೃಷಿ ಭೂಮಿ ಮತ್ತು ಅದಕ್ಕೆ ಸಂಬಂಧಿಸಿದ ಕೆಲಸ-ಕಾರ್ಯಗಳಿಂದ ಹೆಚ್ಚು ಲಾಭ ಗಳಿಸುವಿರಿ.ಕುಂಭ: ತಲೆನೋವು, ಮೊಣಕಾಲು ನೋವು ಇತ್ಯಾದಿಗಳಿಂದ ತೊಂದರೆಗೆ ಒಳಗಾಗಬಹುದು.ಮೀನ: ದೈನಂದಿನ ಕೆಲಸಗಳು ನಿರಾತಂಕವಾಗಿ ನಡೆಯಲಿವೆ. ಕುಟುಂಬದ ಕಡೆ ಗಮನ ಹರಿಸಿ.