ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(17-04-2024)
ನಿತ್ಯ ನೀತಿ :ಅಗತ್ಯಕ್ಕಿಂತ ಹೆಚ್ಚು ಸಂಪತ್ತು ಅಧಿಕಾರ ಕೇಂದ್ರೀಕರಣಕ್ಕೆ ಎಡೆಮಾಡಿಕೊಡುತ್ತದೆ.
ಪಂಚಾಂಗ : ಬುಧವಾರ, 17-04-2024ಕ್ರೋನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ / ಶುಕ್ಲ ಪಕ್ಷ / ತಿಥಿ: ನವಮಿ / ನಕ್ಷತ್ರ: ಆಶ್ಲೇಷಾ / ಯೋಗ: ಶೂಲ / ಕರಣ: ತೈತಿಲಸೂರ್ಯೋದಯ : ಬೆ.06.06ಸೂರ್ಯಾಸ್ತ : 06.33ರಾಹುಕಾಲ : 12.00-1.30ಯಮಗಂಡ ಕಾಲ : 7.30-9.00ಗುಳಿಕ ಕಾಲ : 10.30-12.00
ರಾಶಿಭವಿಷ್ಯ :ಮೇಷ: ಉದ್ಯೋಗದಲ್ಲಿ ಹೆಚ್ಚು ಒತ್ತಡ. ಆರ್ಥಿಕ ಪರಿಸ್ಥಿತಿಯಲ್ಲಿ ಸಂಕಷ್ಟ ಎದುರಾಗಲಿದೆ.ವೃಷಭ: ವೃತ್ತಿ ಜೀವನದಲ್ಲಿ ಉತ್ತಮ ಪ್ರಗತಿ ಸಾಸುವಿರಿ. ಆರೋಗ್ಯದ ಕಡೆ ಗಮನ ಹರಿಸಿ.ಮಿಥುನ: ಆಸ್ತಿ ವಿಚಾರದಲ್ಲಿ ಕಲಹ. ಸಹೋದರತ್ವ ದಲ್ಲಿ ದ್ವೇಷ ಉಂಟಾಗಲಿದೆ.
ಕಟಕ: ಒತ್ತಡದ ಜೀವನ, ದೃಢ ನಿರ್ಧಾರದಿಂದ ಅಭಿವೃದ್ಧಿ.ಸಿಂಹ: ಖಾಸಗಿ ಉದ್ಯೋಗಿ ಗಳಿಗೆ ಬಡ್ತಿ ದೊರೆಯಲಿದೆ.ಕನ್ಯಾ: ಸಂಗಾತಿಗೆ ನಿಮ್ಮೊಂದಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಮಾಡಿಕೊಡಿ.
ತುಲಾ: ಶಾರೀರಿಕ ಸಮಸ್ಯೆ. ಸಣ್ಣ ವ್ಯಾಪಾರಸ್ಥರಿಗೆ ಕೊಂಚ ಲಾಭ. ಅಧಿಕಾರಿ ವರ್ಗದವರಿಗೆ ತೊಂದರೆ.ವೃಶ್ಚಿಕ: ಉತ್ತಮ ಆರೋಗ್ಯ. ಧಾರ್ಮಿಕ ಕಾರ್ಯ ಗಳಿಗೆ ಹೆಚ್ಚು ಒತ್ತು. ತಾಯಿಯಿಂದ ಸಹಾಯ ಸಿಗಲಿದೆ.ಧನುಸ್ಸು: ಸ್ನೇಹಿತರಿಗೆ ಸಹಕಾರ. ಹಣಕಾಸಿನ ವಿಚಾರ ದಲ್ಲಿ ಶುಭ ಸುದ್ದಿ. ಸ್ವಯಂ ಉದ್ಯೋಗಸ್ಥರಿಗೆ ಶುಭ.
ಮಕರ: ರಿಯಲ್ ಎಸ್ಟೇಟ್ ವ್ಯಾಪಾರಿಗಳಿಗೆ ಲಾಭದಾಯಕವಾದ ದಿನ.ಕುಂಭ: ದಾಂಪತ್ಯ ಜೀವನದಲ್ಲಿ ಕಲಹ. ಗೊಂದಲದ ವಾತಾವರಣ ನಿರ್ಮಾಣವಾಗಬಹುದು.ಮೀನ: ತಂದೆ-ತಾಯಿ ಆಶೀರ್ವಾದಿಂದ ಉತ್ತಮ ಸ್ಥಾನ. ಕುಲದೇವತೆ ದರ್ಶನ.