ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-04-2024)
ನಿತ್ಯ ನೀತಿ :ನಮ್ಮ ಜೀವನದಲ್ಲಿ ಸಹಾಯ ಅಂತ ಕೇಳಿದ್ರೆ ಯಾರೂ ಮಾಡೋದಿಲ್ಲ. ಆದರೆ, ಸಲಹೆ ಕೊಡೋದಕ್ಕೆ ತುಂಬಾ ಜನ ಮುಂದೆ ಬರ್ತಾರೆ. ಇಷ್ಟೇ ಜೀವನ.
ಪಂಚಾಂಗ : ಬುಧವಾರ, 24-04-2024ಕ್ರೋನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ / ಕೃಷ್ಣ ಪಕ್ಷ / ತಿಥಿ: ಪ್ರತಿಪದ್ / ನಕ್ಷತ್ರ: ಸ್ವಾತಿ / ಯೋಗ: ಸಿದ್ಧಿ / ಕರಣ: ಬಾಲವಸೂರ್ಯೋದಯ : ಬೆ.06.02ಸೂರ್ಯಾಸ್ತ : 06.34ರಾಹುಕಾಲ : 12.00-1.30ಯಮಗಂಡ ಕಾಲ : 7.30-9.00ಗುಳಿಕ ಕಾಲ :10.30-12.00
ರಾಶಿಭವಿಷ್ಯ:ಮೇಷ: ಮಕ್ಕಳಿಂದ ಅನುಕೂಲವಾಗಲಿದೆ. ಗೌರವ- ಸನ್ಮಾನ ಸಮಾರಂಭಗಳಲ್ಲಿ ಪಾಲ್ಗೊಳ್ಳುವಿರಿ.ವೃಷಭ: ಅಂದುಕೊಂಡ ಕೆಲಸಗಳು ಈಡೇರಲಿವೆ. ಬಂಧುಗಳಿಂದ ಸಹಾಯ ಸಿಗಲಿದೆ.ಮಿಥುನ: ನಿಮ್ಮ ಮೇಲೆ ಬಾಕಿ ಇರುವ ಕೆಲಸಗಳ ಹೊರೆ ಹೆಚ್ಚಾಗಬಹುದು.
ಕಟಕ: ಪೊಷಕರು ಮಕ್ಕಳ ವಿಚಾರದಲ್ಲಿ ಹೆಚ್ಚು ಜಾಗ್ರತೆ ವಹಿಸುವುದು ಸೂಕ್ತ.ಸಿಂಹ: ವಿವಾಹಿತರು ಸಂಗಾತಿಗೆ ನಿಷ್ಠರಾಗಿರಿ. ಆದಷ್ಟು ಶ್ರಮವಹಿಸಿ ಕೆಲಸ ಮಾಡಬೇಕಾಗುತ್ತದೆ.ಕನ್ಯಾ: ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ.
ತುಲಾ: ವೈದ್ಯಕೀಯ ವೆಚ್ಚಗಳು ಹೆಚ್ಚಾಗುವುದರಿಂದ ಸಾಲ ಮಾಡಬೇಕಾದ ಸಂದರ್ಭಗಳು ಬರಬಹುದು.ವೃಶ್ಚಿಕ: ಮಕ್ಕಳ ಮೂಲಕ ಹಣ ಬರಲಿದೆ. ತೀರ್ಥಯಾತ್ರೆ, ಪ್ರವಾಸ ತೆರಳುವ ಯೋಗಗಳಿವೆ.ಧನುಸ್ಸು: ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವರು. ಇಡೀ ದಿನ ಶುಭವಾಗಿರಲಿದೆ.
ಮಕರ: ನಿಮ್ಮ ಮಾತುಗಳಿಂದ ಕುಟುಂಬದವರು ಮತ್ತು ಹಿತೈಷಿಗಳಿಗೆ ಸಂತೋಷವವಾಗಲಿದೆ.ಕುಂಭ: ಶಕ್ತಿ ಮತ್ತು ಉತ್ಸಾಹ ತರುವ ಆನಂದಮಯ ಪ್ರವಾಸಕ್ಕೆ ಹೋಗುವಿರಿ.ಮೀನ:ಮನೆಯಲ್ಲಿ ಜಗಳಗಳು ಉಂಟಾಗ ಬಹುದು. ಆರ್ಥಿಕ ಪರಿಸ್ಥಿತಿ ಹದಗೆಡಬಹುದು.