ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(25-04-2024)
ನಿತ್ಯ ನೀತಿ :ಮಾತು ಸಂಬಂಧವನ್ನು ಕೂಡಿಸುವಂತೆ ಇರಬೇಕೇ ಹೊರತು ಸಂಬಂಧವನ್ನು ಹಾಳು ಮಾಡುವಂತೆ ಅಲ್ಲ.
ಪಂಚಾಂಗ : 25-04-2024, ಗುರುವಾರಕ್ರೋನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ / ಕೃಷ್ಣ ಪಕ್ಷ / ತಿಥಿ: ಪ್ರತಿಪದ್ / ನಕ್ಷತ್ರ: ವಿಶಾಖ / ಯೋಗ: ವ್ಯತೀಪಾತ / ಕರಣ: ತೈತಿಲ
ಸೂರ್ಯೋದಯ : ಬೆ.06.02ಸೂರ್ಯಾಸ್ತ : 06.34ರಾಹುಕಾಲ : 1.30-3.00ಯಮಗಂಡ ಕಾಲ : 6.00-7.30ಗುಳಿಕ ಕಾಲ : 9.00-10.30
ರಾಶಿಭವಿಷ್ಯ :ಮೇಷ: ಆತ್ಮೀಯರೊಬ್ಬರ ದಿಢೀರ್ ಅಗಲುವಿಕೆಯಿಂದ ಮಾನಸಿಕ ಆಘಾತವಾಗಲಿದೆ.ವೃಷಭ: ಹಿರಿಯ ಸಹೋದ್ಯೋಗಿಗಳ ಕಿರುಕುಳದಿಂದ ಕೆಲಸ ಬದಲಾವಣೆ ಮಾಡುವಿರಿ.ಮಿಥುನ: ಪಿತ್ರಾರ್ಜಿತ ಆಸ್ತಿಯಿಂದ ಉತ್ತಮ ಲಾಭ ದೊರೆಯಲಿದೆ. ಮಕ್ಕಳಿಂದ ಸಂತೋಷ ಸಿಗಲಿದೆ.
ಕಟಕ: ಮಾನಸಿಕ ಕಿರಿಕಿರಿ ಹೆಚ್ಚುವುದರೊಂದಿಗೆ ಉದ್ಯೋಗದಲ್ಲಿ ಒತ್ತಡ ಅನುಭವಿಸುವಿರಿ.ಸಿಂಹ: ಸೌಜನ್ಯತೆಯಿಂದ ನಡೆದುಕೊಳ್ಳುವುದರಿಂದ ನೆರೆಹೊರೆಯವರು ನಿಮಗೆ ಸ್ಪಂದಿಸುವರು.ಕನ್ಯಾ: ನಿಮ್ಮವರೇ ನಿಮ್ಮ ಅಭಿವೃದ್ಧಿಗೆ ಅಡ್ಡಿಯಾಗಲಿದ್ದಾರೆ.
ತುಲಾ: ಹಣದ ಕೊರತೆ ಇರುವುದಿಲ್ಲ. ಹಿಂದೆ ಮಾಡಿದ್ದ ಸಾಲವನ್ನೂ ಸಹ ತೀರಿಸುವಿರಿ.ವೃಶ್ಚಿಕ: ಹಿರಿಯರನ್ನು ಭೇಟಿಯಾಗುವ ಅಪೂರ್ವ ಅವಕಾಶ ಒದಗಲಿದೆ.ಧನುಸ್ಸು: ಹಣ ಸುಲಭವಾಗಿ ದೊರೆಯುತ್ತದೆ ಎಂಬ ಕಾರಣಕ್ಕೆ ಬೇಕಾಬಿಟ್ಟಿ ಖರ್ಚು ಮಾಡದಿರಿ.
ಮಕರ: ಉದ್ಯೋಗಸ್ಥರಿಗೆ ವಿಶೇಷ ಲಾಭದ ಅವಕಾಶಗಳು ಸಿಗಲಿವೆ. ಉತ್ತಮವಾದ ದಿನ.ಕುಂಭ: ವಿನಾಕಾರಣ ವಿವಾದಗಳಲ್ಲಿ ಸಿಲುಕುವ ಸಾಧ್ಯತೆಗಳಿವೆ. ಎಚ್ಚರಿಕೆಯಿಂದ ಮಾತನಾಡಿ.ಮೀನ: ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯ ಗಳು ದೂರವಾಗಿ ಉತ್ತಮ ಬದಲಾವಣೆಗಳಾಗಲಿವೆ.