ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-04-2024)
ನಿತ್ಯ ನೀತಿ :ಸಮಯ ಎಲ್ಲರಿಗೂ ಸಿಗುತ್ತದೆ, ಜೀವನ ಬದಲಿಸಲು. ಆದರೆ ಜೀವನ ಪುನಃ ಸಿಗದು, ಸಮಯವನ್ನು ಬದಲಿಸಲು.
ಪಂಚಾಂಗ : ಶುಕ್ರವಾರ, 26-04-2024ಕ್ರೋನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ / ಕೃಷ್ಣ ಪಕ್ಷತಿಥಿ: ದ್ವಿತೀಯಾ / ನಕ್ಷತ್ರ: ಅನುರಾದಾ / ಯೋಗ: ವರೀಯಾನ್ / ಕರಣ: ವಣಿಜ್ಸೂರ್ಯೋದಯ : ಬೆ.06.01ಸೂರ್ಯಾಸ್ತ : 06.34ರಾಹುಕಾಲ : 10.30-12.00ಯಮಗಂಡ ಕಾಲ : 3.00-4.30ಗುಳಿಕ ಕಾಲ : 7.30-9.00
ರಾಶಿಭವಿಷ್ಯ :ಮೇಷ:ದೈನಂದಿನ ಚಟುವಟಿಕೆ ಹೊರತುಪಡಿಸಿ ವಿಭಿನ್ನ ಕಾರ್ಯಗಳಲ್ಲಿ ಆಸಕ್ತಿ ಹೊಂದುವಿರಿ.ವೃಷಭ: ಸಂತೋಷವನ್ನು ಇತರರೊಂದಿಗೆ ಹಂಚಿ ಕೊಳ್ಳಲು ಉತ್ತಮ ಅವಕಾಶಗಳು ಸಿಗುವುದಿಲ್ಲ.ಮಿಥುನ: ವೃತ್ತಿ ಜೀವನದಲ್ಲಿ ಉತ್ತಮ ಪ್ರಗತಿ ಸಾಸುವಿರಿ. ಆರೋಗ್ಯದ ಕಡೆ ಗಮನ ಹರಿಸಿ.
ಕಟಕ: ಕುಟುಂಬ ಸದಸ್ಯರು ಮತ್ತು ನೆರೆಹೊರೆಯವರಿಂದ ಆರ್ಥಿಕ ಸಹಾಯ ಸಿಗಲಿದೆ.ಸಿಂಹ: ಅದೃಷ್ಟ ನಿಮ್ಮೆಡೆಗಿದ್ದರೂ ಎಲ್ಲ ಕಾರ್ಯಗಳನ್ನೂ ಎಚ್ಚರಿಕೆಯಿಂದ ನಿರ್ವಹಿಸಿ.ಕನ್ಯಾ: ವ್ಯಾಪಾರಿಗಳಿಗೆ ಅನುಕೂಲಕರ ದಿನ. ಗೃಹ ನಿರ್ಮಾಣ ಮಾಡಲು ಯೋಚಿಸುವಿರಿ.
ತುಲಾ: ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಲಿದ್ದು, ಅದಕ್ಕೆ ಕಾರಣ ತಿಳಿಯುವುದು ಕಷ್ಟ.ವೃಶ್ಚಿಕ: ಸಹೋದ್ಯೋಗಿಗಳೊಂದಿಗೆ ಹಲವಾರು ಭಿನ್ನಾಭಿಪ್ರಾಯಗಳು ಉಂಟಾಗಬಹುದು.ಧನುಸ್ಸು: ಆಧ್ಯಾತ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳು ವಿರಿ. ಮಕ್ಕಳಿಂದ ಅನುಕೂಲವಾಗಲಿದೆ.

ಮಕರ: ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಯಶಸ್ಸು ಪಡೆಯಲು ಹೆಚ್ಚು ಶ್ರಮ ವಹಿಸಬೇಕಾಗುತ್ತದೆ.ಕುಂಭ: ಸ್ನೇಹಿತನಿಗೆ ಸಹಾಯ ಮಾಡುವಿರಿ.ಸಂಗಾತಿಯೊಂದಿಗೆ ಜಗಳವಾಡುವ ಸಾಧ್ಯತೆಯಿದೆ.ಮೀನ: ಆರೋಗ್ಯದ ವಿಷಯದಲ್ಲಿ ಜಾಗರೂಕ ರಾಗಿರುವುದು ಬಹಳ ಒಳ್ಳೆಯದು.