ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(29-04-2024)
ನಿತ್ಯ ನೀತಿ :ಯಾರು ನಿನಗಾಗಿ ಯಾರನ್ನಾದರೂ ಬಿಡುತ್ತೇನೆ ಎನ್ನುತ್ತಾರೋ ಅವರನ್ನು ನಂಬಬೇಡ. ಅಂದು ಅವರನ್ನು ಬಿಟ್ಟ ಮನಸ್ಸು ನಾಳೆ ನಿನ್ನನ್ನು ಬಿಡುವುದಿಲ್ಲ ಎಂದು ಹೇಗೆ ಹೇಳುವುದು..?
ಪಂಚಾಂಗ :29-04-2024, ಸೋಮವಾರಕ್ರೋಧಿನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ / ಕೃಷ್ಣ ಪಕ್ಷ / ತಿಥಿ: ಪಂಚಮಿ / ನಕ್ಷತ್ರ: ಪೂರ್ವಾಷಾಢ / ಯೋಗ: ಸಿದ್ಧಿ / ಕರಣ: ಗರಜೆಸೂರ್ಯೋದಯ : ಬೆ.06.00ಸೂರ್ಯಾಸ್ತ : 06.34ರಾಹುಕಾಲ : 7.30-9.00ಯಮಗಂಡ ಕಾಲ : 10.30-12.00ಗುಳಿಕ ಕಾಲ : 1.30-3.00
ರಾಶಿಭವಿಷ್ಯ :ಮೇಷ: ರಾಜಕೀಯ ವ್ಯಕ್ತಿಗಳು ವಿವಾದಾತ್ಮಕ ಹೇಳಿಕೆಯಿಂದಾಗಿ ಸಂಕಷ್ಟಕ್ಕೆ ಸಿಲುಕಬಹುದು.ವೃಷಭ: ಕೃಷಿಕರಿಗೆ ಆಗಾಗ ಎದುರಾಗುವ ಅಡೆತಡೆಗಳು ನಿವಾರಣೆಯಾಗಲಿವೆ.ಮಿಥುನ: ಮಹತ್ವದ ಕೆಲಸ ಗಳಿಗೆ ಕೈ ಹಾಕುವ ಮುನ್ನ ಮನೆಯವರೊಂದಿಗೆ ದೀರ್ಘ ಕಾಲದ ಸಮಾಲೋಚನೆ ನಡೆಸುವುದು ಒಳಿತು.
ಕಟಕ: ಮಗನ ಆರೋಗ್ಯದಲ್ಲಿ ಉಂಟಾಗುವ ವ್ಯತ್ಯಾಸದಿಂದಾಗಿ ಜವಾಬ್ದಾರಿ ಹೆಚ್ಚಾಗಲಿದೆ.ಸಿಂಹ: ಉತ್ತಮ ಅವಕಾಶ ಗಳು ಸಿಗುವುದರಿಂದ ಆತ್ಮಗೌರವ ಹೆಚ್ಚಾಗಲಿದೆ.ಕನ್ಯಾ: ಸ್ನೇಹಿತರ ಸಲಹೆ ಅಥವಾ ಸ್ವಾರ್ಥದ ಮನೋಭಾವದಿಂದ ಬರುವ ದುರಾಲೋಚನೆಯು ನಿಮ್ಮ ದಾರಿ ತಪ್ಪಿಸಬಹುದು.
ತುಲಾ: ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.ವೃಶ್ಚಿಕ: ಹಿರಿಯ ಅಧಿ ಕಾರಿಗಳ ಆಕಸ್ಮಿಕ ಭೇಟಿಯಿಂದಾಗಿ ಉದ್ಯೋಗ ಪ್ರಾಪ್ತಿಯಾಗಲಿದೆ.ಧನುಸ್ಸು: ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ ಮತ್ತು ಅದರಲ್ಲಿ ನೀವು ಯಶಸ್ಸು ಸಾಧಿಸುವಿರಿ.
ಮಕರ: ಕಾನೂನಿಗೆ ಸಂಬಂಧಿಸಿದ ಕೆಲಸದಲ್ಲಿ ಜಯ ಸಿಗಲಿದೆ. ಕಲಾವಿದರಿಗೆ ಒಳ್ಳೆಯ ದಿನ.ಕುಂಭ: ಸರ್ಕಾರಿ ನೌಕರರಿಗೆ ಉನ್ನತ ಸ್ಥಾನಮಾನ ಸಿಗುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.ಮೀನ: ಉದ್ಯೋಗ ಸ್ಥಳದಲ್ಲಿ ಸಣ್ಣಪುಟ್ಟ ಸಮಸ್ಯೆ ಯಿಂದಾಗಿ ಹಿತಶತ್ರುಗಳ ಬಗ್ಗೆ ಮಾಹಿತಿ ಸಿಗಲಿದೆ.