ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(20-04-2024)
ನಿತ್ಯ ನೀತಿ :ಸುಳ್ಳು ಹೇಳಿ ಮನಸ್ಸು ಸಮಾಧಾನ ಪಡಿಸುವ ಕಲೆ ಹಲವರಿಗೆ ಕರಗತವಾಗಿರುತ್ತದೆ. ಆದರೆ ತಮ್ಮನ್ನು ವಿರೋಸಿದರೂ ಪರವಾಗಿಲ್ಲ ಎಂದು ಸತ್ಯ ಹೇಳುವ ತಾಕತ್ತು ಕೆಲವರಿಗೆ ಮಾತ್ರ ಇರುತ್ತದೆ.
ಪಂಚಾಂಗ : ಶನಿವಾರ, 20-04-2024ಕ್ರೋನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ / ಶುಕ್ಲ ಪಕ್ಷ / ತಿಥಿ: ದ್ವಾದಶಿ / ನಕ್ಷತ್ರ: ಪೂರ್ವಾಭಾದ್ರ / ಯೋಗ: ಧ್ರುವ / ಕರಣ: ಭವಸೂರ್ಯೋದಯ :ಬೆ.06.04ಸೂರ್ಯಾಸ್ತ : 06.33ರಾಹುಕಾಲ : 9.00-10.30ಯಮಗಂಡ ಕಾಲ : 1.30-3.00ಗುಳಿಕ ಕಾಲ : 6.00-7.30
ರಾಶಿಭವಿಷ್ಯ :ಮೇಷ: ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು.ವೃಷಭ: ಬಹಳ ದಿನಗಳ ಕನಸನ್ನು ನನಸು ಮಾಡುವ ಅವಕಾಶಗಳು ಲಭಿಸಲಿವೆ.ಮಿಥುನ: ಸಮಾಜದಲ್ಲಿ ಕೀರ್ತಿ, ಗೌರವ ದೊರೆಯ ಲಿದೆ. ಮಾನಸಿಕ ಒತ್ತಡ ನಿಯಂತ್ರಿಸಲು ಧ್ಯಾನ ಮಾಡಿ.
ಕಟಕ: ಹತ್ತಿರದ ಸ್ನೇಹಿತ ರಿಂದಲೇ ನಿಮ್ಮ ಬಗ್ಗೆ ಕೆಟ್ಟ ಮಾತುಗಳು ಕೇಳಿಬರಲಿವೆ.ಸಿಂಹ: ಮದುವೆಯ ಸಲುವಾಗಿ ವಸ್ತ್ರಾಭರಣ ಖರೀದಿ ಮಾಡುವಿರಿ.ಕನ್ಯಾ:ಕಷ್ಟದ ಕೆಲಸವನ್ನು ಇಷ್ಟದಿಂದ ಮಾಡಿ. ಮನಸ್ಸು ಸಮಾಧಾನದಿಂದಿರುತ್ತದೆ.
ತುಲಾ: ವ್ಯವಹಾರದಲ್ಲಿ ಮೂರನೆ ವ್ಯಕ್ತಿಯೊಬ್ಬರ ಆಗಮನವಾಗುವುದರಿಂದ ಅಪಾಯ ಹೆಚ್ಚಾಗಲಿದೆ.ವೃಶ್ಚಿಕ: ದಾಂಪತ್ಯದಲ್ಲಿ ಅನ್ಯೋನ್ಯತೆ ಇರಲಿದೆ. ಕೆಟ್ಟ ಆಲೋಚನೆ ಮಾಡುವುದನ್ನು ಬಿಡುವುದು ಒಳಿತು.ಧನುಸ್ಸು: ವ್ಯವಹಾರದಲ್ಲಿ ಸ್ವಂತ ನಿರ್ಧಾರ ತೆಗೆದು ಕೊಳ್ಳುವ ಸಾಮಥ್ರ್ಯವನ್ನು ಹೊಂದಿರುತ್ತೀರಿ.
ಮಕರ: ಜವಾಬ್ದಾರಿ ನಿಭಾಯಿಸುವಲ್ಲಿ ಯಶಸ್ವಿಯಾಗುವಿರಿ. ಚಿಂತೆಗೆ ಅವಕಾಶವಿಲ್ಲ.ಕುಂಭ: ಯಾರದ್ದೋ ಮಾತು ಕೇಳಿ ನಿಮ್ಮ ಅಮೂಲ್ಯ ಸಮಯ ಹಾಳುಮಾಡಿಕೊಳ್ಳದಿರಿ.ಮೀನ: ವ್ಯಾಪಾರ-ವ್ಯವಹಾರಗಳಲ್ಲಿ ಅಲ್ಪ ಪ್ರಗತಿ ಸಾಸುವಿರಿ. ಅಕ ಖರ್ಚು ಮಾಡುವಿರಿ.