ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (21-04-2024)
ನಿತ್ಯ ನೀತಿ :ಮಾನಸಿಕ ನೆಮ್ಮದಿಗಿಂತ ದೊಡ್ಡದಾದ ಶ್ರೀಮಂತಿಕೆ ಈ ಜಗತ್ತಿನಲ್ಲಿ ಯಾವುದೂ ಇಲ್ಲ.
ಪಂಚಾಂಗ : ಭಾನುವಾರ, 21-04-2024ಕ್ರೋನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ / ಶುಕ್ಲ ಪಕ್ಷ / ತಿಥಿ: ತ್ರಯೋದಶಿ / ನಕ್ಷತ್ರ: ಉತ್ತರಾಭಾದ್ರ / ಯೋಗ: ವ್ಯಾಘಾತ / ಕರಣ: ಕೌಲವಸೂರ್ಯೋದಯ : ಬೆ.06.04ಸೂರ್ಯಾಸ್ತ : 06.33ರಾಹುಕಾಲ : 4.30-6.00ಯಮಗಂಡ ಕಾಲ : 12.00-1.30ಗುಳಿಕ ಕಾಲ : 3.00-4.30
ರಾಶಿಭವಿಷ್ಯ :ಮೇಷ: ವ್ಯಾಪಾರದಲ್ಲಿ ಅನುಕೂಲವಾಗಲಿದೆ. ಸಂಗಾತಿ ಮನೆ ಕಡೆಯಿಂದ ಶುಭ ಸುದ್ದಿ ಬರಲಿದೆ.ವೃಷಭ: ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ ಮತ್ತು ಅದರಲ್ಲಿ ನೀವು ಯಶಸ್ಸು ಸಾಸುವಿರಿ.ಮಿಥುನ: ಹೊಸ ಪ್ರದೇಶಕ್ಕೆ ಭೇಟಿ ನೀಡುವ ಅವಕಾಶವೊಂದು ದಿಢೀರನೆ ಒದಗಿಬರಲಿದೆ.
ಕಟಕ: ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು.ಸಿಂಹ: ಪಿತ್ರಾರ್ಜಿತ ಆಸ್ತಿ ವಿಚಾರದ ಮಾತುಕತೆ ನಡೆಯಲಿದೆ. ವಾಹನದಿಂದ ಅಪಾಯ ಎದುರಾಗಲಿದೆ.ಕನ್ಯಾ: ಅಗತ್ಯವಿರುವ ವಸ್ತುಗಳನ್ನು ಖರೀದಿಸು ವುದು ಒಳಿತು. ಸಿಕ್ಕಾಪಟ್ಟೆ ಖರ್ಚು ಮಾಡದಿರಿ.
ತುಲಾ: ಕೌಟುಂಬಿಕ ಮತ್ತು ವೈವಾಹಿಕ ಜೀವನ ಆಹ್ಲಾದಕರವಾಗಿರುತ್ತದೆ.ವೃಶ್ಚಿಕ: ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ದೇವತಾ ಕಾರ್ಯ ಮಾಡುವುದರಲ್ಲಿ ಆಸಕ್ತಿ ವಹಿಸುವಿರಿ.ಧನುಸ್ಸು: ಯಾರ ಮೇಲೂ ವೈಯಕ್ತಿಕವಾಗಿ ದ್ವೇಷ ಸಾಸಲು ಹೋಗದಿರಿ. ಕಷ್ಟ ಎದುರಿಸಬೇಕಾಗುತ್ತದೆ.
ಮಕರ: ಸೇವೆಯ ಆಧಾರದ ಮೇಲೆ ಕೆಲಸದಲ್ಲಿ ಬಡ್ತಿ ದೊರೆಯಲಿದೆ. ಹೆಚ್ಚು ಲಾಭ ಗಳಿಸುವಿರಿ.ಕುಂಭ: ಹೆಚ್ಚಿನ ಲಾಭದ ಆಸೆಗೆ ಇರುವ ಉಳಿತಾಯದ ಹಣವನ್ನು ಖರ್ಚು ಮಾಡದಿರಿ.ಮೀನ: ಯುವಕರು ಶಾಶ್ವತ ಕೆಲಸ ಹುಡುಕುವ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಾರೆ.