ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(30-04-2024)
ನಿತ್ಯ ನೀತಿ :ನಮ್ಮ ಬದುಕಿನಲ್ಲಿ ಕೆಲವರು ವರವಾಗಿ ಬರುತ್ತಾರೆ. ಇನ್ನೂ ಕೆಲವರು ಪಾಠವಾಗಿ ಬರುತ್ತಾರೆ.
ಪಂಚಾಂಗ : ಮಂಗಳವಾರ, 30-04-2024ಕ್ರೋನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ / ಕೃಷ್ಣ ಪಕ್ಷ / ತಿಥಿ: ಷಷ್ಠಿ / ನಕ್ಷತ್ರ: ಉತ್ತರಾಷಾಢ / ಯೋಗ: ಸಾಧ್ಯ / ಕರಣ: ವಿಷ್ಟಿಸೂರ್ಯೋದಯ : ಬೆ.05.59ಸೂರ್ಯಾಸ್ತ : 06.35ರಾಹುಕಾಲ : 3.00-4.30ಯಮಗಂಡ ಕಾಲ : 9.00-10.30ಗುಳಿಕ ಕಾಲ : 12.00-1.30
ರಾಶಿಭವಿಷ್ಯ :ಮೇಷ: ನೀವು ಮಾಡುವ ಕೆಲಸ-ಕಾರ್ಯಗಳಿಗೆ ತಾಯಿಯಿಂದ ಸಹಾಯ ಸಿಗಲಿದೆ.ವೃಷಭ: ನೀವು ಹಿಂದೆ ಮಾಡಿದ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಶತ್ರುಗಳ ಕಾಟ ತಪ್ಪಲಿದೆ.ಮಿಥುನ: ಹೊಸ ಉದ್ಯಮ ಪ್ರಾರಂಭಿಸಲು ಬಯಸುವವರಿಗೆ ಉತ್ತಮ ಯಶಸ್ಸು ಸಿಗಲಿದೆ.
ಕಟಕ: ನಿಮ್ಮ ಸ್ವಭಾವದಲ್ಲಿ ಮಹತ್ತರವಾದ ಬದಲಾವಣೆಗಳಾಗಲಿವೆ. ಎಚ್ಚರಿಕೆಯಿಂದಿರಿ.ಸಿಂಹ: ರಿಯಲ್‌ ಎಸ್ಟೇಟ್‌ ವ್ಯವಹಾರ ಮಾಡುವವರಿಗೆ ಶುಭ ಫಲ ಸಿಗಲಿದೆ.ಕನ್ಯಾ:ಹಿತವಾದ ಮಾತುಗಳಿಂದ ಸಂಗಾತಿ, ಪ್ರೀತಿ ಪಾತ್ರರನ್ನು ಮೆಚ್ಚಿಸುವಿರಿ.
ತುಲಾ: ವಿದ್ಯಾರ್ಥಿಗಳ ಪ್ರತಿಭೆಗೆ ತಕ್ಕ ಗೌರವ ಹಾಗೂ ಪ್ರತಿಫಲ ಸಿಗಲಿದೆ.ವೃಶ್ಚಿಕ: ಷೇರು ಮಾರು ಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವವರು ಎಚ್ಚರಿಕೆಯಿಂದಿರುವುದು ಒಳಿತು.ಧನುಸ್ಸು: ವೃತ್ತಿ ಕ್ಷೇತ್ರದಲ್ಲಿ ಉತ್ತಮ ಬದಲಾವಣೆ ಗಳಾಗುತ್ತವೆ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ.
ಮಕರ: ಕೃಷಿ ಭೂಮಿ ಮತ್ತು ಅದಕ್ಕೆ ಸಂಬಂಸಿತ ಕೆಲಸ-ಕಾರ್ಯಗಳಿಂದ ಹೆಚ್ಚು ಲಾಭ ಗಳಿಸುವಿರಿ.ಕುಂಭ: ನಿಮ್ಮ ಸ್ವಭಾವದಲ್ಲಿ ಮಹತ್ತರವಾದ ಬದಲಾವಣೆಗಳು ಆಗಲಿವೆ.ಮೀನ: ನಿರೀಕ್ಷಿತ ಮೂಲಗಳಿಂದ ಆದಾಯ ಬರ ಲಿದೆ.ಅಮೂಲ್ಯ ವಸ್ತುಗಳ ಖರೀದಿಗೆ ಉತ್ತಮ ದಿನ.