ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(07-05-2024)
ನಿತ್ಯ ನೀತಿ :ಸಂಬಂಧಗಳನ್ನು ಉಳಿಸಿಕೊಳ್ಳಲು ಬುದ್ಧಿವಂತಿಕೆಗಿಂತಲೂ ಹೃದಯವಂತಿಕೆ ತುಂಬಾ ಮುಖ್ಯ.
ಪಂಚಾಂಗ : ಮಂಗಳವಾರ, 07-05-2024ಕ್ರೋಧಿನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ / ಕೃಷ್ಣ ಪಕ್ಷ / ತಿಥಿ: ಚತುರ್ದಶಿ / ನಕ್ಷತ್ರ: ಅಶ್ವಿನಿ / ಯೋಗ: ಅಯುಷ್ಮಾನ / ಕರಣ: ಚತುಷ್ಪಾದ
ಸೂರ್ಯೋದಯ : ಬೆ.05.57ಸೂರ್ಯಾಸ್ತ : 06.36ರಾಹುಕಾಲ : 3.00-4.30ಯಮಗಂಡ ಕಾಲ : 9.00-10.30ಗುಳಿಕ ಕಾಲ : 12.00-1.30
ರಾಶಿಭವಿಷ್ಯ :ಮೇಷ: ಮಹಿಳೆಯರಿಗೆ ಮೇಲಧಿ ಕಾರಿಗಳಿಂದ ಕಿರುಕುಳ. ಏಲಕ್ಕಿ ವ್ಯಾಪಾರಿಗಳಿಗೆ ಅಲ್ಪ ಲಾಭ.ವೃಷಭ: ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಸಾಕಷ್ಟು ಸಮಯ ಕಳೆಯಲು ಬಯಸುವಿರಿ.ಮಿಥುನ: ಅಧ್ಯಯನ ಮಾಡುವಾಗ ಕೆಲವು ಸವಾಲು ಗಳನ್ನು ಎದುರಿಸಬೇಕಾಗುತ್ತದೆ.
ಕಟಕ: ಯೋಜಿತ ರೀತಿಯಲ್ಲಿ ಹೋದರೆ ಸಮಸ್ಯೆಗಳು ನಿವಾರಣೆಯಾಗುವುದರಲ್ಲಿ ಸಂದೇಹವಿಲ್ಲ.ಸಿಂಹ: ನೆರೆಹೊರೆ ಯವರೊಂದಿಗೆ ಕಲಹ ಉಂಟಾಗಲಿದೆ.ಕನ್ಯಾ: ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳ ಕಾರ್ಯಕ್ಷಮತೆ ಬಹಳ ಉತ್ತಮವಾಗಿರುತ್ತದೆ.
ತುಲಾ: ಅನಾರೋಗ್ಯ ಕಾರಣದಿಂದಾಗಿ ಮನಸ್ಸಿಗೆ ಕಿರಿಕಿರಿ ಉಂಟಾಗಲಿದೆ. ದೂರ ಪ್ರಯಾಣ ಮಾಡುವಿರಿ.ವೃಶ್ಚಿಕ: ಯಶಸ್ಸು ಸಾಧಿಸಲು ಯಾವುದೇ ಅಪಾಯವನ್ನಾದರೂ ಎದುರಿಸಲು ಸಿದ್ಧರಾಗಿರುತ್ತೀರಿ.ಧನುಸ್ಸು: ಸಂಗಾತಿಯೊಂದಿಗೆ ವಿನಾಕಾರಣ ಕಲಹ ಉಂಟಾಗ ಲಿದೆ. ವ್ಯಾಪಾರದಲ್ಲಿ ಮೋಸ ಹೋಗುವ ಸಾಧ್ಯತೆಯಿದೆ.
ಮಕರ: ವೈದ್ಯವೃತ್ತಿಯಲ್ಲಿರುವವರು ಅಧಿ ಕ ಶ್ರಮ ಪಡುವುದರಿಂದ ಆಯಾಸ ಉಂಟಾಗಲಿದೆ.ಕುಂಭ: ಸ್ವಯಂಕೃತ ಅಪರಾಧಗಳಿಂದ ನಷ್ಟ ಅನುಭವಿಸುವಿರಿ. ಸಾಲದ ಚಿಂತೆ ಕಾಡಲಿದೆ.ಮೀನ: ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿ. ಇಲ್ಲದಿದ್ದರೆ ಅಪಘಾತ ಸಂಭವಿಸಬಹುದು.