ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(09-05-2024)
ನಿತ್ಯ ನೀತಿ :ಬರುವಾಗ ಒಂದು ಮಡಿಲು ಅದು ಆ ದೇವರ ಮಹಿಮೆ. ಹೋಗುವಾಗ ನಾಲ್ಕು ಹೆಗಲು ಅದು ನಮ್ಮ ಜೀವನದ ದುಡಿಮೆ.
ಪಂಚಾಂಗ : ಗುರುವಾರ, 09-05-2024ಕ್ರೋಧಿನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ / ಶುಕ್ಲ ಪಕ್ಷ / ತಿಥಿ: ಪ್ರತಿಪದಾ / ನಕ್ಷತ್ರ: ಕೃತ್ತಿಕಾ / ಯೋಗ: ಶೋಭನ / ಕರಣ: ಬಾಲವಸೂರ್ಯೋದಯ : ಬೆ.05.56ಸೂರ್ಯಾಸ್ತ : 06.36ರಾಹುಕಾಲ : 1.30- 3.00ಯಮಗಂಡ ಕಾಲ : 6.00- 7.30ಗುಳಿಕ ಕಾಲ : 9.00-10.30
ರಾಶಿಭವಿಷ್ಯ :ಮೇಷ: ಆರೋಗ್ಯ ಸಮಸ್ಯೆಗಳನ್ನು ಎದುರಿಸಲು ಹೆಚ್ಚು ವ್ಯಾಯಾಮ ಮಾಡಬೇಕು.ವೃಷಭ: ಮಕ್ಕಳಿಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸುವಲ್ಲಿ ಹೆಚ್ಚು ಸಮಯ ಕಳೆಯುವಿರಿ.
ಮಿಥುನ: ಅಂದುಕೊಂಡ ಕೆಲಸ-ಕಾರ್ಯಗಳಲ್ಲಿ ಒಂದಷ್ಟು ಶ್ರಮವಿದ್ದರೂ ತಕ್ಕ ಪ್ರತಿಫಲ ಸಿಗಲಿದೆ.ಕಟಕ: ಹಲವು ವಿಷಯಗಳ ಬಗ್ಗೆ ಜನರು ನಿಮ್ಮಿಂದ ಸಲಹೆ-ಸೂಚನೆಗಳನ್ನು ಪಡೆಯುವರು.ಸಿಂಹ: ಹಣಕಾಸು ವಿಚಾರ ದಲ್ಲಿ ದೃಢ ನಿರ್ಧಾರ ಕೈಗೊಳ್ಳುವುದು ಒಳಿತು.
ಕನ್ಯಾ: ಹಿರಿಯರ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸುವುದು ಸೂಕ್ತ.ತುಲಾ: ಹಿರಿಯ ಅಧಿ ಕಾರಿಗಳ ಆಕಸ್ಮಿಕ ಭೇಟಿಯಿಂದಾಗಿ ಉದ್ಯೋಗ ಪ್ರಾಪ್ತಿಯಾಗಲಿದೆ.ವೃಶ್ಚಿಕ: ಹಣ ಉಳಿತಾಯ ಮಾಡಲು ಸಾಧ್ಯವಾದಷ್ಟು ಪ್ರಯತ್ನಿಸಿ.
ಧನುಸ್ಸು: ಬಂಧುಗಳಲ್ಲಿ ವಿಶ್ವಾಸ, ಸಂಬಂಧ ಬೆಳೆಸಿಕೊಳ್ಳುವತ್ತ ಪ್ರಯತ್ನಿಸಿ.ಮಕರ: ಸುಲಭವಾಗಿ ಜೀರ್ಣವಾಗುವಂತಹ ಆಹಾರ ಪದಾರ್ಥಗಳನ್ನು ಸೇವಿಸಿ.ಕುಂಭ: ಸೇವೆಯ ಆಧಾರದ ಮೇಲೆ ಕೆಲಸದಲ್ಲಿ ಬಡ್ತಿ ದೊರೆಯಲಿದೆ. ಹೆಚ್ಚು ಲಾಭ ಗಳಿಸುವಿರಿ.ಮೀನ: ತಂದೆಯ ಆರೋಗ್ಯದಲ್ಲಿ ಕೊಂಚ ಏರುಪೇರಾಗಬಹುದು. ಜಾಗ್ರತೆ ವಹಿಸಬೇಕು.