ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(12-05-2024)
ನಿತ್ಯ ನೀತಿ :ಕಾಲ ಯಾವಾಗಲೂ ಒಂದೇ ತರಹ ಇರುವುದಿಲ್ಲ. ನಿನ್ನನ್ನು ದಿನನಿತ್ಯ ಅಳಿಸುವವರಿಗೆ ಅಳುವ ಸಮಯ ಬಂದೇ ಬರುತ್ತದೆ. ಸ್ವಲ್ಪ ಸಹನೆಯಿಂದ ಕಾದು ನೋಡು.
ಪಂಚಾಂಗ : ಭಾನುವಾರ, 12-05-2024ಕ್ರೋಧಿನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ / ಶುಕ್ಲ ಪಕ್ಷ / ತಿಥಿ: ಪಂಚಮಿ / ನಕ್ಷತ್ರ: ಆರಿದ್ರಾ / ಯೋಗ: ಧೃತಿ / ಕರಣ: ಭವ
ಸೂರ್ಯೋದಯ : ಬೆ.05.55ಸೂರ್ಯಾಸ್ತ : 06.37ರಾಹುಕಾಲ : 4.30-6.00ಯಮಗಂಡ ಕಾಲ : 12.00-1.30ಗುಳಿಕ ಕಾಲ : 3.00-4.30
ರಾಶಿಭವಿಷ್ಯ:ಮೇಷ: ಖರ್ಚುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳು ವುದು ಬಹಳ ಅಗತ್ಯವಾಗಿರುತ್ತದೆ.ವೃಷಭ: ನಿಮ್ಮ ಪ್ರೀತಿಪಾತ್ರ ರೊಂದಿಗೆ ಪ್ರಯಾಣಿಸಲು ಅವಕಾಶಗಳು ಸಿಗುತ್ತದೆ.ಮಿಥುನ: ವೈಯಕ್ತಿಕ ವಿಷಯಗಳಲ್ಲಿ ನಿರ್ಲಕ್ಷ್ಯ ವಹಿಸುವುದನ್ನು ಬಿಡಿ.
ಕಟಕ: ಮಹಿಳೆಯರಿಗೆ ಉತ್ತಮ ಅವಕಾಶಗಳು ಸಿಗಲಿವೆ. ದುಷ್ಟ ಜನರಿಂದ ದೂರಿವಿರಿ.ಸಿಂಹ: ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸುವಿರಿ. ಗುರು-ಹಿರಿಯರ ಆಶೀರ್ವಾದ ಪಡೆಯಿರಿ.ಕನ್ಯಾ:ಯಾವುದೇ ನಿರ್ಧಾರವನ್ನು ಅವಸರದಲ್ಲಿ ತೆಗೆದುಕೊಳ್ಳದಿರಿ.
ತುಲಾ: ನೀವು ನೀಡುವ ಸಲಹೆಗಳು ಇತರರಿಗೆ ಉಪಯುಕ್ತವಾಗುತ್ತವೆ.ವೃಶ್ಚಿಕ: ಇಡೀ ದಿನ ಉತ್ಸಾಹದಿಂದಿರುವಿರಿ. ಕುಟುಂಬ ಸದಸ್ಯರೊಂದಿಗೆ ಹೆಚ್ಚು ಸಮಯವನ್ನು ಕಳೆಯುವಿರಿ.ಧನುಸ್ಸು: ಸಂಗಾತಿಯೊಂದಿಗೆ ಹಣಕಾಸಿನ ಸಮಸ್ಯೆ ಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವಿರಿ.
ಮಕರ: ಹಣದ ಕೊರತೆ ಇರುವುದಿಲ್ಲ. ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.ಕುಂಭ: ವ್ಯವಹಾರದಲ್ಲಿನ ನಿಮ್ಮ ನಿರ್ಧಾರಗಳು ಲಾಭ ತಂದುಕೊಡಲು ಕಾರಣವಾಗುತ್ತವೆೆ.ಮೀನ: ಕೆಲಸದ ಸ್ಥಳದಲ್ಲಿ ಹಿರಿಯ ಸಹೋದ್ಯೋಗಿ ಗಳಿಂದ ಸಲಹೆಗಳು ಮತ್ತು ಸಹಾಯ ಸಿಗಲಿದೆ.