ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(17-05-2024)
ನಿತ್ಯ ನೀತಿ :ದುರಾಸೆ ಮನುಷ್ಯನ ಬದುಕಿನ ದೊಡ್ಡ ಶತ್ರು. ದುರಾಸೆ ಇರುವ ವ್ಯಕ್ತಿ ಬದುಕಿನಲ್ಲಿ ಎಂದಿಗೂ ಯಶಸ್ಸು ಸಾಧಿಸಲು ಸಾಧ್ಯವಿಲ್ಲ.
ಪಂಚಾಂಗ : ಶುಕ್ರವಾರ, 17-05-2024ಕ್ರೋಧಿನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ / ಶುಕ್ಲ ಪಕ್ಷ / ತಿಥಿ: ನವಮಿ / ನಕ್ಷತ್ರ: ಪೂರ್ವಾಭಾದ್ರ / ಯೋಗ: ವ್ಯಾಘಾತ / ಕರಣ: ತೈತಿಲಸೂರ್ಯೋದಯ : ಬೆ.05.54ಸೂರ್ಯಾಸ್ತ : 06.39ರಾಹುಕಾಲ : 10.30-12.00ಯಮಗಂಡ ಕಾಲ : 3.00-4.30ಗುಳಿಕ ಕಾಲ : 7.30-9.00
ರಾಶಿಭವಿಷ್ಯ :ಮೇಷ: ಉದ್ಯೋಗದಲ್ಲಿ ಬಡ್ತಿ ಮತ್ತು ವೇತನ ಹೆಚ್ಚಳವಾಗುವ ಅವಕಾಶಗಳಿವೆ.ವೃಷಭ: ವಸ್ತ್ರ್ತ್ರ ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭ ಸಿಗಲಿದೆ.ಮಿಥುನ: ವಿದ್ಯಾಭ್ಯಾಸದಲ್ಲಿ ಅನಿರೀಕ್ಷಿತ ತಿರುವು ಪಡೆಯುವಿರಿ. ಹಳೆ ಗೆಳೆಯರ ಭೇಟಿ.
ಕಟಕ: ಹಿರಿಯರೊಂದಿಗೆ ಮನಸ್ತಾಪ ಉಂಟಾಗಬಹುದು. ಸಹನೆಯಿಂದ ವರ್ತಿಸಿ.ಸಿಂಹ: ವಿದ್ಯಾರ್ಥಿಗಳು ಹೊಸದಾಗಿ ಕೋರ್ಸ್‌ ಸೇರುವ ಮುನ್ನ ಅಳೆದು, ತೂಗಿ ಮುಂದೆ ಹೆಜ್ಜೆ ಇಡಿ.ಕನ್ಯಾ:ವ್ಯಾಪಾರಿಗಳಿಗೆ ಅನುಕೂಲಕರ ದಿನ. ಗೃಹ ನಿರ್ಮಾಣ ಮಾಡಲು ಯೋಚಿಸುವಿರಿ.
ತುಲಾ: ಕಷ್ಟದ ಕೆಲಸವನ್ನು ಇಷ್ಟದಿಂದ ಮಾಡಿ. ಮನಸ್ಸು ಸಮಾಧಾನದಿಂದಿರುತ್ತದೆ.ವೃಶ್ಚಿಕ: ಹೊಟೇಲ್‌ ವ್ಯಾಪಾರಿಗಳಿಗೆ ಸಾಧಾರಣ ಲಾಭ. ಆರೋಗ್ಯದಲ್ಲಿ ಏರುಪೇರಾಗಲಿದೆ.ಧನುಸ್ಸು: ಉದ್ಯೋಗ ಸ್ಥಳದಲ್ಲಿ ಕಿರಿಕಿರಿಯಾಗಲಿದೆ. ಶತ್ರುಗಳ ಕಾಟ ಹೆಚ್ಚಾಗಬಹುದು.
ಮಕರ: ಉದ್ಯೋಗ ಬದಲಾವಣೆಗೆ ಮನಸ್ಸು ಮಾಡು ವಿರಿ. ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ.ಕುಂಭ: ಎಲ್ಲಾ ವಿಚಾರಗಳನ್ನು ಸಾವಧಾನದಿಂದ ಬಗೆಹರಿಸಿಕೊಳ್ಳುವುದು ಒಳ್ಳೆಯದು.ಮೀನ: ಧಾರ್ಮಿಕ ಕ್ಷೇತ್ರದಲ್ಲಿರುವವರಿಗೆ ದ್ರವ್ಯಲಾಭ. ಪರಿಶ್ರಮದಿಂದ ಅಭಿವೃದ್ಧಿ.