ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(20-05-2024)
ನಿತ್ಯ ನೀತಿ :ಆಗಿದ್ದನ್ನು ವಿಷಾದವಿಲ್ಲದೆ ಒಪ್ಪಿಕೊಳ್ಳೋಣ. ಆಗಬೇಕಿರುವುದನ್ನು ವಿಶ್ವಾಸದಿಂದ ಮಾಡೋಣ. ಮುಂದೆ ಆಗುವುದನ್ನು ನಿರ್ಭಯದಿಂದ ಎದುರಿಸೋಣ.
ಪಂಚಾಂಗ : ಸೋಮವಾರ, 20-05-2024ಕ್ರೋಧಿನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ / ಶುಕ್ಲ ಪಕ್ಷ / ತಿಥಿ: ದ್ವಾದಶಿ / ನಕ್ಷತ್ರ: ಚಿತ್ತಾ / ಯೋಗ: ಸಿದ್ಧಿ / ಕರಣ: ಕೌಲವ
ಸೂರ್ಯೋದಯ : ಬೆ.05.53ಸೂರ್ಯಾಸ್ತ : 06.39ರಾಹುಕಾಲ : 7.30-9.00ಯಮಗಂಡ ಕಾಲ : 10.30-12.00ಗುಳಿಕ ಕಾಲ : 1.30-3.00
ರಾಶಿಭವಿಷ್ಯ :ಮೇಷ: ನಂಬಿದ ಜನರಿಂದ ಮೋಸ ಹೋಗುವ ಸಾಧ್ಯತೆಗಳು ಹೆಚ್ಚಾಗಿವೆ. ಎಚ್ಚರಿಕೆಯಿಂದಿರಿ.ವೃಷಭ: ಸಮಾಜದಲ್ಲಿ ಗೌರವ ಸಿಗಲಿದೆ. ಅಮೂಲ್ಯ ವಸ್ತುಗಳನ್ನು ಖರೀದಿಸುವುದರಿಂದ ಸಂತಸ ಪಡುವಿರಿ.ಮಿಥುನ: ಎಲ್ಲಾ ವಿಚಾರಗಳನ್ನು ಸಾವಧಾನದಿಂದ ಬಗೆಹರಿಸಿಕೊಳ್ಳುವುದು ಬಹಳ ಉತ್ತಮ.
ಕಟಕ: ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ ಕಾಣುವುದು. ರಾಜಕೀಯ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುವಿರಿ.ಸಿಂಹ: ಆರೋಗ್ಯದಲ್ಲಿ ಏರುಪೇರಾಗಲಿದೆ. ವೈದ್ಯರ ಸಲಹೆ ಪಡೆಯುವುದು ಒಳಿತು.ಕನ್ಯಾ: ಪ್ರಾಣಮಿತ್ರರರ ಸಹಕಾರದಿಂದ ಜೀವನದಲ್ಲಿ ಉನ್ನತ ಸ್ಥಾನ ಪಡೆಯುವಿರಿ.
ತುಲಾ: ಹೈನುಗಾರಿಕೆಯಲ್ಲಿ ನಷ್ಟ ಸಂಭವಿಸಲಿದೆ. ವಾಹನ ಚಾಲಕರು ಎಚ್ಚರಿಕೆಯಿಂದಿರಿ.ವೃಶ್ಚಿಕ: ಉನ್ನತ ಅಧಿ ಕಾರಿ ಗಳೊಂದಿಗೆ ಕಲಹ ಉಂಟಾಗುವ ಸಾಧ್ಯತೆಗಳಿವೆ.ಧನುಸ್ಸು: ಉದ್ಯೋಗ ನಿಮಿತ್ತ ಪ್ರಯಾಣ ಮಾಡುವಿರಿ.
ಮಕರ: ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಬಗ್ಗೆ ಗಮನ ಹರಿಸಿ. ಕೆಲಸಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.ಕುಂಭ: ಉದ್ಯೋಗ ಬದಲಾವಣೆಗೆ ಮನಸ್ಸು ಮಾಡು ವಿರಿ. ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ.ಮೀನ: ಉದ್ಯೋಗ ಸ್ಥಳದಲ್ಲಿ ಶತ್ರುಗಳ ಕಾಟ. ಬಂಧುಗಳ ನಡುವೆ ವಿರಸ ಉಂಟಾಗಲಿದೆ.