ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(21-05-2024)
ನಿತ್ಯ ನೀತಿ :ನಮಗೆ, ನಮ ಮಾತುಗಳಿಗೆ ಬೆಲೆ ಇಲ್ಲ ಅಂತ ತಿಳಿದಾಗ ನಾವು ಅವರಿಗೆ ಎಷ್ಟು ದೂರದಲ್ಲಿರುತ್ತೇವೋ ಅಷ್ಟೇ ಒಳ್ಳೆಯದು.
ಪಂಚಾಂಗ : ಮಂಗಳವಾರ, 21-05-2024ಕ್ರೋಧಿನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ / ಶುಕ್ಲ ಪಕ್ಷ / ತಿಥಿ: ತ್ರಯೋದಶಿ / ನಕ್ಷತ್ರ: ಸ್ವಾತಿ (ಪೂರ್ಣ) / ಯೋಗ: ವ್ಯತೀಪಾತ / ಕರಣ: ಗರಜೆ (ಪೂರ್ಣ)
ಸೂರ್ಯೋದಯ : ಬೆ.05.53ಸೂರ್ಯಾಸ್ತ : 06.40ರಾಹುಕಾಲ : 3.00-4.30ಯಮಗಂಡ ಕಾಲ : 9.00-10.30ಗುಳಿಕ ಕಾಲ : 12.00-1.30
ರಾಶಿಭವಿಷ್ಯ :ಮೇಷ: ನೀವು ಕಂಡ ಕನಸುಗಳಿಗೆ ಹಿರಿಯರು, ಹಿತೈಷಿಗಳ ಬೆಂಬಲ ಸಿಗಲಿದೆ.ವೃಷಭ: ಅಮೂಲ್ಯ ವಸ್ತುಗಳ ಖರೀದಿಗೆ ಇಂದು ಬಹಳ ಉತ್ತಮವಾದ ದಿನ. ದೂರ ಪ್ರಯಾಣ ಮಾಡುವಿರಿ.ಮಿಥುನ: ಉದ್ಯೋಗದಲ್ಲಿ ಹೆಚ್ಚು ಒತ್ತಡವಿರಲಿದೆ.
ಕಟಕ: ಆಸ್ತಿ ವಿಚಾರದಲ್ಲಿ ಕಲಹ. ಸಹೋದರತ್ವ ದಲ್ಲಿ ದ್ವೇಷ ಉಂಟಾಗಲಿದೆ.ಸಿಂಹ: ಸಂಗಾತಿಗೆ ನಿಮ್ಮೊಂದಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಮಾಡಿಕೊಡಿ.ಕನ್ಯಾ:ಖಾಸಗಿ ಉದ್ಯೋಗಿ ಗಳಿಗೆ ಬಡ್ತಿ ದೊರೆಯಲಿದೆ. ದೃಢ ನಿರ್ಧಾರ ಕೈಗೊಳ್ಳುವಿರಿ.
ತುಲಾ: ಅನವಶ್ಯಕ ವಿವಾದಗಳಿಗೆ ಸಿಲುಕಿ ತೊಂದರೆ ಅನುಭವಿಸುವಿರಿ.ವೃಶ್ಚಿಕ: ಉತ್ತಮ ಆರೋಗ್ಯ. ಧಾರ್ಮಿಕ ಕಾರ್ಯ ಗಳಿಗೆ ಹೆಚ್ಚು ಒತ್ತು. ತಾಯಿಯಿಂದ ಸಹಾಯ ಸಿಗಲಿದೆ.ಧನುಸ್ಸು: ತಂದೆ-ತಾಯಿ ಆಶೀರ್ವಾದಿಂದ ಉತ್ತಮ ಸ್ಥಾನ. ಕುಲದೇವತೆ ದರ್ಶನ.
ಮಕರ: ರಿಯಲ್‌ ಎಸ್ಟೇಟ್‌ ವ್ಯಾಪಾರಿಗಳಿಗೆ ಲಾಭದಾಯಕವಾದ ದಿನ.ಕುಂಭ: ದಾಂಪತ್ಯ ಜೀವನದಲ್ಲಿ ಕಲಹ. ಗೊಂದಲದ ವಾತಾವರಣ ನಿರ್ಮಾಣವಾಗಬಹುದು.ಮೀನ: ಸ್ನೇಹಿತರಿಗೆ ಸಹಕಾರ. ಹಣಕಾಸಿನ ವಿಚಾರದಲ್ಲಿ ಶುಭ ಸುದ್ದಿ. ಸ್ವಯಂ ಉದ್ಯೋಗಸ್ಥರಿಗೆ ಶುಭ.