ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-05-2024)
ನಿತ್ಯ ನೀತಿ :ಸಂಕಷ್ಟದಲ್ಲಿ ಬೇಸರ ಪಡುವುದಿಲ್ಲ, ಹಣವಿದ್ದರೆ ಗರ್ವ ಪಡುವುದಿಲ್ಲ, ಭಯದಲ್ಲಿ ಧೈರ್ಯ. ಹೀಗೆ ಸಜ್ಜನರು ಕಷ್ಟ-ಸುಖದಲ್ಲಿ ಒಂದೇ ಸ್ವಭಾವದಿಂದಿರುತ್ತಾರೆ.
ಪಂಚಾಂಗ : 14-05-2024, ಮಂಗಳವಾರಕ್ರೋಧಿನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ / ಶುಕ್ಲ ಪಕ್ಷ / ತಿಥಿ: ಸಪ್ತಮಿ / ನಕ್ಷತ್ರ: ಪುಷ್ಯ / ಯೋಗ: ಗಂಡ / ಕರಣ: ಗರಜೆಸೂರ್ಯೋದಯ : ಬೆ.05.55ಸೂರ್ಯಾಸ್ತ : 06.38ರಾಹುಕಾಲ : 3.00-4.30ಯಮಗಂಡ ಕಾಲ : 9.00-10.30ಗುಳಿಕ ಕಾಲ : 12.00-1.30
ರಾಶಿಭವಿಷ್ಯ :ಮೇಷ: ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳುವಿರಿ. ವಾಹನ ಖರೀದಿಸುವ ಸಾಧ್ಯತೆ ಇದೆ.ವೃಷಭ: ಆದಾಯ ಹೆಚ್ಚಿಸುವ ಕೆಲಸ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.ಮಿಥುನ: ಮಕ್ಕಳ ಓದಿನ ಬಗ್ಗೆ ಕಾಳಜಿ ಇರಲಿ.
ಕಟಕ: ವಸಾ್ತ್ರಭರಣ ಖರೀದಿಸುವ ಸಾಧ್ಯತೆ ಇದೆ.ಸಿಂಹ: ಅಪರೂಪದ ಅತಿಥಿ ಆಗಮನದಿಂದ ಮನಸ್ಸಿಗೆ ಸಂತೋಷವಾಗಲಿದೆ.ಕನ್ಯಾ:ಉನ್ನತ ಅಧಿ ಕಾರಿಗಳು ನಿಮ್ಮ ಮೇಲೆ ಕೋಪಗೊಳ್ಳು ವರು. ಎಚ್ಚರಿಕೆಯಿಂದಿರಿ.
ತುಲಾ: ಬದಲಾದ ಸನ್ನಿವೇಶಕ್ಕೆ ಒಗ್ಗಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಲಿದೆ.ವೃಶ್ಚಿಕ: ಸ್ನೇಹಿತರೊಂದಿಗೆ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ.ಧನುಸ್ಸು: ಉದ್ಯೋಗ ಬದಲಾವಣೆಗೆ ಉತ್ತಮ ಸಮಯ ಮತ್ತು ಹೊಸ ಅವಕಾಶಗಳು ಸಿಗಲಿವೆ.
ಮಕರ: ಯೋಚಿಸುವ ಪ್ರತಿಯೊಂದು ಕೆಲಸ- ಕಾರ್ಯಗಳು ವಿಳಂಬ ರೀತಿಯಲ್ಲಿ ನಡೆಯಲಿವೆ.ಕುಂಭ: ಉದ್ಯಮಿಗಳು ಹೊಸ ಶಾಖೆ ತೆರೆಯಲು ಬೇಕಾದ ಅನುಕೂಲಗಳು ಒದಗುತ್ತವೆ.ಮೀನ: ಉನ್ನತ ಮಟ್ಟದಲ್ಲಿ ಕಾರ್ಯನಿರ್ವ ಹಿಸುವವರಿಗೆ ಜನಸಾಮಾನ್ಯರಿಂದ ಉತ್ತಮ ಪ್ರೋತ್ಸಾಹ ದೊರೆಯಲಿದೆ.